ಪುತ್ತೂರು:ಪುರುಷರಕಟ್ಟೆ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಯಿಂದ ನಡೆಯಲಿರುವ 23ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಮತ್ತು ಚಪ್ಪರ ಮುಹೂರ್ತವು ಜು.14ರಂದು ಪುರುಷರಕಟ್ಟೆ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆಯ ಮುಂಭಾಗದಲ್ಲಿ ನೆರವೇರಿತು.
ಅರ್ಚಕ ರಾಧಾಕೃಷ್ಣ ಸಗ್ರಿತಾಯರವರು ಧಾರ್ಮಿಕ ವಿದಿವಿಧಾನಗಳನ್ನು ನೆರವೇರಿಸಿದರು. ಗಣೇಶೋತ್ಸವ ಸಮಿತಿ ಅಧ್ಯಕ್ಷ ವಿಶ್ವನಾಥ ಪುರುಷ ಎಂ. ಪುರುಷರಕಟ್ಟೆ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಸಮಿತಿ ಕಾರ್ಯದರ್ಶಿ ಹರೀಶ್ ದೇವಾಡಿಗ, ಖಜಾಂಚಿ ಕೃಷ್ಣಪ್ಪ ಶೆಟ್ಟಿ ಮಜಲು, ವಸಂತ್ ರೈ ರೈ ಸರ್ವಿಸ್, ರಾಘವೇಂದ್ರ ದತ್ತಗುರು, ರವಿ ಮಾಯಂಗಲ, ಚಪ್ಪರ ಮುಹೂರ್ತ ನೆರೆವೇರಿಸಿದರು.
ಪ್ರಮುಖರಾದ ಶರತ್‌ಚಂದ್ರ ಬೈಪಾಡಿತಾಯ, ಉಮೇಶ್ ಇಂದಿರಾನಗರ, ಬೇಬಿಜಾನ್ ಕೊಡುರಸ್ತೆ, ವೇದನಾಥ ಸುವರ್ಣ, ಪ್ರಕಾಶ್ ಪುರುಷರಕಟ್ಟೆ, ಸಮಿತಿ ಸದಸ್ಯರಾದ ಸುಬ್ರಮಣ್ಯ ಪೂಜಾರಿ ಪುರುಷರಕಟ್ಟೆ, ಚಿದಾನಂದ ಸುರುಳಿಮಜಲು, ತೋಮಸ್ ಕೊಡುರಸ್ತೆ, ದೇವಿಪ್ರಸಾದ್ ಉದಯ ಸ್ಟೋರ್, ರೋಹಿತ್ ಪೂಜಾರಿ ಶಿಬರ, ಜನಾರ್ದನ ಪೂಜಾರಿ ಕೊಡುರಸ್ತೆ, ರವಿ ಕೊಡಿಮಜಲು, ರಾಜು ಕೊಡಿಮಜಲು, ಸುರೇಶ್ ಕೊಡಿಮಜಲು, ಕಾರ್ತಿಕ್ ಪೂಜಾರಿ ಇಂದಿರಾನಗರ, ದಿನೇಶ್ ಪೂಜಾರಿ ಇಂದಿರಾನಗರ, ಚಂದ್ರಕಾಂತ ಜೋಗಿ ಇಂದಿರಾನಗರ, ಸಂತೋಷ ಪೂಜಾರಿ ಇಂದಿರಾನಗರ, ಶೀನ ಕೊಡಿಮಜಲು, ಲಿಖಿತ್, ಪ್ರಜ್ವಲ್, ಸುರೇಶ್, ಧನಂಜಯ, ಈಶ್ವರ, ಸತೀಶ್ ಪುರುಷ ಎಂ, ಕೆ ರೋಹಿತ್ ವಿಗ್ನೇಶ್ ಸ್ಟುಡಿಯೋ ಸೇರಿದಂತೆ ಹಲವು ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.