ನಿಡ್ಪಳ್ಳಿ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೂರಂಬೈಲು ಶಾಲಾ ಇಕೋ ಕ್ಲಬ್ ಹಾಗೂ ಪುತ್ತೂರು ಅರಣ್ಯ ಇಲಾಖೆಯ ಸಹಯೋಗದಲ್ಲಿ ಜು.15ರಂದು ಬಂಟಾಜೆ ರಕ್ಷಿತಾರಣ್ಯ ಪ್ರದೇಶದಲ್ಲಿ ವನ್ಯಜೀವಿಗಳ ಆಹಾರಕ್ಕಾಗಿ ಹಾಗೂ ಅರಣ್ಯ ಸಂರಕ್ಷಣೆಗಾಗಿ ಹಣ್ಣಿನ ಗಿಡಗಳನ್ನು ಪ್ರತಿ ಶಾಲಾ ಮಕ್ಕಳ ಹೆಸರಿನಲ್ಲಿ ನೆಡಲಾಯಿತು. ಪಾಣಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಮೋಹನ ನಾಯ್ಕ ತೂಂಬಡ್ಕ ಗಿಡ ನೆಟ್ಟು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮ ಆಯೋಜನೆಗೆ ಪೂರ್ಣ ಪ್ರಮಾಣದ ಉಸ್ತುವಾರಿ ವಹಿಸಿ ಸಹಕರಿಸಿದ ಬೇಂಗದಪದವು ಶಾಲಾ ಮುಖ್ಯ ಗುರು ಶಿವಕುಮಾರ್ ಭಟ್ ಅರಣ್ಯ ಸಂರಕ್ಷಣೆಯ ಮಹತ್ವವನ್ನು ಮಕ್ಕಳಿಗೆ ತಿಳಿಸಿ ಶುಭ ಹಾರೈಸಿದರು. ಪುತ್ತೂರು ಅರಣ್ಯ ಇಲಾಖೆ ಸಿಬ್ಬಂದಿಗಳಾದ ಪ್ರಕಾಶ್ ಟಿ ಹಾಗೂ ಲಿಂಗರಾಜು ಗಿಡ ನೆಟ್ಟು ಪರಿಸರ ಸಮತೋಲನ ಕಾಪಾಡುವಲ್ಲಿ ನಿಮ್ಮ ಕಾರ್ಯ ಶ್ಲಾಘನೀಯ ಎಂದರು. ಮುಖ್ಯಗುರು ಊರ್ಮಿಳಾ ಕೆ,ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಸುನೀತಾ ತೂಂಬಡ್ಕ, ಪ್ರದೀಪ್ ಪಾಣಾಜೆ, ಅತಿಥಿ ಶಿಕ್ಷಕಿ ಸುಪ್ರೀತಾ, ಗೌರವ ಶಿಕ್ಷಕಿಯರಾದ ವಿದ್ಯಾಲಕ್ಷೀ, ಯಶಸ್ವಿನಿ ಹಾಗೂ ಶಾಲೆಯ ಪೋಷಕರು ಉಪಸ್ಥಿತರಿದ್ದರು. ಶಾಲಾ ಸಹ ಶಿಕ್ಷಕ ನಾಗೇಶ್ ಪಾಟಾಳಿ ಕಾರ್ಯಕ್ರಮ ನಿರೂಪಿಸಿದರು.