ಹರೀಶ್ ಪೂಂಜರೇ, `ಸುದ್ದಿ ಬಿಡುಗಡೆ’ ಸಮಾಜದ ದಾರಿ ತಪ್ಪಿಸುತ್ತಿದೆ, ಅದನ್ನು ಜನರು ನೋಡಿಕೊಳ್ಳುತ್ತಾರೆ ಎಂದಿದ್ದೀರಿ-ನಮ್ಮ ಸಿಬ್ಬಂದಿಗಳಿಗೆ ಆಘಾತವಾಗಿದೆ, ಗೊಂದಲ ಉಂಟಾಗಿ ಭಯಭೀತರಾಗಿದ್ದಾರೆ.

0

ದಯವಿಟ್ಟು ಶಾಸಕರಾದ ನೀವು ನಮ್ಮ ತಪ್ಪನ್ನು ತೋರಿಸಿಕೊಟ್ಟು ನಿಮ್ಮವರಿಂದ ರಕ್ಷಣೆ ಕೊಡಿ

ಪೂಂಜರೇ, ಆರೋಪಗಳನ್ನು ಸಾಬೀತುಪಡಿಸಿದರೆ ನಿಮ್ಮ ಕ್ಷಮೆಯಾಚಿಸುತ್ತೇವೆ – ಇಲ್ಲದಿದ್ದರೆ ತಾವು ಪತ್ರಿಕಾ ಸಮೂಹದ ಕ್ಷಮೆ ಕೇಳಿದರೆ ಸಾಕು

* ಕಳೆದ ಸಲ 37 ವರ್ಷಗಳ ಸುದ್ದಿ ಬಿಡುಗಡೆ’ ಪತ್ರಿಕೆ ಎದುರಿಗಿಟ್ಟು ತೋರಿಸಿಕೊಡಿ ಎಂದಿದ್ದೆವು ಈ ಸಲ ಬೆಳ್ತಂಗಡಿಯ ಎಲ್ಲಾ ಪತ್ರಿಕೆಗಳನ್ನು,ಸುದ್ದಿ ಬಿಡುಗಡೆ’ಯನ್ನು ಮುಂದಿಟ್ಟು ಚರ್ಚಿಸೋಣ
*ನಿಮ್ಮ ಪತ್ರಿಕೆ ಸುದ್ದಿ ಉದಯ’ದಂತೆ ನಮ್ಮ ಪತ್ರಿಕೆ ಇರಬೇಕೆಂದು ಜನ ಬಯಸುತ್ತಾರೆಯೇ? ಜನರ ಪರವಿದ್ದು ಎಲ್ಲರ ವರದಿ ಪ್ರಕಟಿಸುವಸುದ್ದಿ ಬಿಡುಗಡೆ’ಯನ್ನು ಜನ ಒಪ್ಪುತ್ತಾರೆಯೇ?
*ತೀರ್ಮಾನವನ್ನು ಜನತೆಗೆ ಬಿಡೋಣ, `ಸುದ್ದಿ ಬಿಡುಗಡೆ’ ಪತ್ರಿಕೆ ಸೋತರೆ, ಗೆಲುವು ಪೂಂಜರದ್ದು.
*ಸುದ್ದಿ ಬಿಡುಗಡೆ ಪತ್ರಿಕೆ ಗೆದ್ದರೆ ಗೆಲುವು ಜನರದ್ದು, ನಮ್ಮದ್ದಲ್ಲ ಎಂದು ಹೇಳಿಕೊಳ್ಳುತ್ತೇವೆ.

ಡಾ.ಯು.ಪಿ. ಶಿವಾನಂದ ಮತ್ತು ಸುದ್ದಿ ಬಳಗ ಬೆಳ್ತಂಗಡಿ

LEAVE A REPLY

Please enter your comment!
Please enter your name here