ಇಲ್ಲಿದೆ ಫುಲ್ ಫ್ಯಾಮಿಲಿ ಎಂಟರ್ ಟೈನರ್ | ಮಕ್ಕಳಿಂದ ಹಿರಿಯರವರೆಗೆ ಇಲ್ಲಿ ಬಂದವರಿಗೆ ಫುಲ್ ಫನ್ನೋ ಫನ್!
ತಾಂತ್ರಿಕತೆಯಲ್ಲಿ ಸ್ಟೇಟ್ ಆಫ್ ಆರ್ಟ್ ಎನ್ನಬಹುದಾದ ಉತ್ಕೃಷ್ಟತೆ ಫನ್ ಗ್ಯಾಲಕ್ಸಿ’ಯ ವಿಶೇಷತೆ’- ಬಲರಾಮ ಆಚಾರ್ಯ
ಪುತ್ತೂರು: ಇಲ್ಲಿನ ಜಿ.ಎಲ್.ವನ್ ಮಾಲ್ ನಲ್ಲಿ ಪ್ರಪ್ರಥಮ ಬಾರಿಗೆ ಅಲ್ಟಿಮೇಟ್ ಗೇಮಿಂಗ್ ಡೆಸ್ಟಿನೇಷನ್ ಹಾಗೂ ಮನೋರಂಜನಾ ತಾಣ ಫನ್ ಗ್ಯಾಲಕ್ಸಿ’ ಜು.15ರಂದು ಶುಭಾರಂಗೊಂಡಿತು. ಫನ್ ಗ್ಯಾಲಕ್ಸಿ’ಯನ್ನು ಜಿ.ಎಲ್. ಗ್ರೂಪ್ ಮುಖ್ಯಸ್ಥರಾದ ಜಿ.ಎಲ್. ಬಲರಾಮ ಆಚಾರ್ಯ ಅವರು ರಿಬ್ಬನ್ ಕತ್ತರಿಸಿ ಬಳಿಕ ದೀಪ ಪ್ರಜ್ವಲನದ ಮೂಲಕ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಬಲರಾಮ ಆಚಾರ್ಯ ಅವರು, ಈ ಫನ್ ಗ್ಯಾಲಕ್ಸಿ’ ಮುಖ್ಯವಾಗಿ ಮಕ್ಕಳ ಮನೋರಂಜನೆ ಮತ್ತು ಮನೋವಿಕಾಸಕ್ಕಾಗಿಯೇ ಪ್ರಾರಂಭಗೊಂಡಿರುವುದು ಸಂತೋಷದ ವಿಚಾರ, ಇದಕ್ಕಾಗಿ ನಾನು ಸಂಸ್ಥೆಯ ಪ್ರವರ್ತಕರನ್ನು ಮೊಟ್ಟಮೊದಲನೆಯದಾಗಿ ಅಭಿನಂದಿಸುತ್ತೇನೆ. ಒಂದು ಮಾಲ್ ಪರಿಪೂರ್ಣವೆನಿಸಬೇಕಾದ್ರೆ ಅಲ್ಲಿ ಎಲ್ಲಾ ವ್ಯವಸ್ಥೆಗಳೂ ಬೇಕಾಗಿರುತ್ತದೆ. ಶಾಪಿಂಗ್, ಥಿಯೇಟರ್, ಫುಡ್ ಕೋರ್ಟ್ ಹಾಗೇ ಒಂದು ಗೇಮಿಂಗ್ ಸೆಂಟರ್ ಇದ್ದಾಗ ಮಾಲ್‌ಗೊಂದು ಪರಿಪೂರ್ಣ ಕಳೆ ಲಭಿಸುತ್ತದೆ. ಆ ನಿಟ್ಟಿನಲ್ಲಿ ಜಿ.ಎಲ್. ವನ್ ಮಾಲ್‌ನಲ್ಲಿ ಗೇಮಿಂಗ್ ಸೆಂಟರ್ ಇಲ್ಲ ಅನ್ನುವ ಕೊರತೆ ಇಂದು ನೀಗಿರುವುದು ನಮಗೆಲ್ಲಾ ಸಂತೋಷದ ವಿಚಾರವಾಗಿದೆ. ಫನ್ ಗ್ಯಾಲಕ್ಸಿಯನ್ನು ಬಹಳ ಆಸಕ್ತಿಯಿಂದ ರೂಪುಗೊಳಿಸಿರುವ ಕಾರಣ ಈ ಉದ್ಯಮ ಖಂಡಿತವಾಗಿಯೂ ಯಶಸ್ವಿಯಾಗಲಿದೆ’ ಎಂದು ಶುಭ ಹಾರೈಸಿದರು.
ತಾಂತ್ರಿಕತೆಯಲ್ಲಿ ಅತ್ಯಾಧುನಿಕತೆ ಇಲ್ಲಿದೆ’ ಇದನ್ನು ಸಿದ್ಧಗೊಳಿಸುತ್ತಿದ್ದ ಸಂದರ್ಭದಲ್ಲಿ ನನಗೆ ಇಲ್ಲಿಗೆ ಬರ್ಲಿಕ್ಕೆ ಆಗದೇ ಇದ್ದರೂ ಇಲ್ಲಿನ ಕೆಲಸ ಕಾರ್ಯದ ಮಾಹಿತಿಗಳನ್ನು ನಾನು ಪಡೆದುಕೊಳ್ತಾ ಇದ್ದೆ. ಆ ನಿಟ್ಟಿನಲ್ಲಿ ಹೇಳೋದಾದ್ರೆ ಈ ಗೇಮಿಂಗ್ ಸೆಂಟರ್ ತಾಂತ್ರಿಕತೆಯಲ್ಲಿ ಸ್ಟೇಟ್ ಆಫ್ ಆರ್ಟ್’ ಅನ್ನಬಹುದಾಗಿರುವ ತಾಂತ್ರಿಕ ಪರಿಪೂರ್ಣತೆಯನ್ನು ಹೊಂದಿದೆ ಮಾತ್ರವಲ್ಲದೇ ಹೊಸ ರೀತಿಯ ಗೇಮ್ ಗಳನ್ನು ಇಲ್ಲಿ ಪರಿಚಯಿಸಲಾಗುತ್ತಿದೆ ಬಹುಷಃ ಇದು ಮಂಗಳೂರಿನಲ್ಲಿಯೂ ಇರ್ಲಿಕ್ಕಿಲ್ಲ ಎಂದು ಬಲರಾಮ ಆಚಾರ್ಯ ಹೇಳಿದರಲ್ಲದೇ, ಸಂಸ್ಥೆಯ ಪ್ರವರ್ತಕರು ಈ ಹಿಂದೆ ಹೈದರಾಬಾದ್ ನಲ್ಲಿ ಗೇಮಿಂಗ್ ಸೆಂಟರ್ ನಡೆಸಿರುವ ಅನುಭವದ ಆಧಾರದಲ್ಲಿ ಒಂದೊಳ್ಳೆ ಗೇಮಿಂಗ್ ಸೆಂಟರನ್ನು ಪುತ್ತೂರಿನ ಜನತೆಗೆ ನೀಡಿದ್ದಾರೆ ಹಾಗಾಗಿ ಇದರ ಸದುಪಯೋಗವನ್ನು ಈ ಭಾಗದ ಮಕ್ಕಳು ಮತ್ತು ಜನರು ಪಡೆದುಕೊಳ್ಳಬೇಕು ಹಾಗೂ ಹತ್ತೂರ ಒಡೆಯ ಮಹಾಲಿಂಗೇಶ್ವರನ ಅನುಗ್ರಹದಿಂದ ಸಂಸ್ಥೆ ಯಶಸ್ಸನ್ನು ಸಾಧಿಸಲಿ’ ಎಂದು ಅವರು ಹಾರೈಸಿದರು.
ಸ್ಪೀಡ್ ಹಾಕಿ ಆಡಿ ಗಮನ ಸೆಳೆದ ಬಲರಾಮ ಆಚಾರ್ಯ! ರಿಬ್ಬನ್ ಕತ್ತರಿಸಿ ಬಳಿಕ ದೀಪವನ್ನು ಬೆಳಗಿಸಿಫನ್ ಗ್ಯಾಲಕ್ಸಿ’ಯನ್ನು ಅಧಿಕೃತವಾಗಿ ಉದ್ಘಾಟಿಸಿದ ಬಳಿಕ ಬಲರಾಮ ಆಚಾರ್ಯ ಅವರು ಸ್ಪೀಡ್ ಹಾಕಿ ಗೇಮ್’ ಆಡಿ ಗಮನ ಸೆಳೆದರು. ಇಲ್ಲಿ ಮಕ್ಕಳ ಏಕಾಗ್ರತೆ ವೃದ್ಧಿ ಸಂಬಧಿಸಿದ ಮತ್ತು ಅವರಲ್ಲಿರುವ ಸ್ಕಿಲ್ ಡೆವಲಪ್ಮೆಂಟ್ ಸಂಬಂಧಿಸಿದ ವೈವಿಧ್ಯಮಯ ಗೇಮ್ ಗಳಿವೆ. ಮಾತ್ರವಲ್ಲದೇ ಯುವ ಸಮೂಹ ಮತ್ತು ಹಿರಿಯ ವ್ಯಕ್ತಿಗಳ ಮನಸ್ಸನ್ನು ರಿಲ್ಯಾಕ್ಸ್ ಗೊಳಿಸುವ ಗೇಮ್‌ಗಳೂ ಇಲ್ಲಿವೆ. ಒಟ್ಟಿನಲ್ಲಿ, ಜಂಜಾಟದ ದೈನಂದಿನ ಬದುಕಿನಿಂದ ಸ್ವಲ್ಪ ರಿಲ್ಯಾಕ್ಸ್ ಹೊಂದಲು ಪುತ್ತೂರಿನ ಆಸುಪಾಸಿನವರಿಗೊಂದು ಗೋಲ್ಡನ್ ಅಪರ್ಚುನಿಟಿ’ಯನ್ನು ಈ `ಫನ್ ಗ್ಯಾಲಕ್ಸಿ’ ಒದಗಿಸುತ್ತಿದೆ.
ಫನ್ ಗ್ಯಾಲಕ್ಸಿಯ ಪಾಲುದಾರರಲ್ಲಿ ಒಬ್ಬರಾಗಿರುವ ಪ್ರೇಮನಾಥ್ ಅವರು ಬಲರಾಮ ಆಚಾರ್ಯ ಅವರನ್ನು ಹೂಗುಚ್ಛ ನೀಡಿ ಸ್ವಾಗತಿಸಿದರು. ಪ್ರಜ್ಞಾ ಒಡಿಲ್ನಾಳ ಅವರ ಕಾರ್ಯಕ್ರಮ ನಿರೂಪಿಸಿದರು. ಫನ್ ಗ್ಯಾಲಕ್ಸಿ ಉದ್ಘಾಟನೆಗೂ ಮುನ್ನ ಚಿಣ್ಣರಿಗೆ ಹಲವು ಫನ್ ಗೇಮ್‌ಗಳನ್ನು ನಡೆಸಲಾಯ್ತು ಮತ್ತು ಗಿಫ್ಟ್ ವೋಚರ್‌ಗಳನ್ನು ನೀಡಲಾಯಿತು.
ಫನ್ ಗ್ಯಾಲಕ್ಸಿನ ಪಾಲುದಾರರಾದ ಪ್ರೇಮ್‌ನಾಥ್ ಉಳ್ಳಾಲ್, ಸಂಪತ್ ಕುಮಾರ್, ರಾಜೇಶ್‌ಕುಮಾರ್‌ರವರು ಸಮಾರಂಭದಲ್ಲಿ ಪಾಲ್ಗೊಂಡ ಅತಿಥಿ ಅಭ್ಯಾಗತರನ್ನು ಸ್ವಾಗತಿಸಿ ಸತ್ಕರಿಸಿದರು.
ಫನ್ ಗ್ಯಾಲಕ್ಸಿ ಒಂದು ಫ್ಯಾಮಿಲಿ ಎಂಟರ್‌ಟೈನ್ಮೆಂಟ್ ಝೋನ್ ಆಗಿದ್ದು, ‘ವೇರ್ ದಿ ರಿಯಲ್ ಫನ್ ಬಿಗಿನ್ಸ್’ ಎಂಬುದೇ ನಮ್ಮ ಟ್ಯಾಗ್ ಲೈನ್ ಆಗಿದೆ. ಇಲ್ಲಿರುವ ಗೇಮಿಂಗ್ ಸ್ಪೆಷಾಲಿಟಿಗಳ ಬಗ್ಗೆ ಹೇಳೋದಾದ್ರೆ, ಕುಟುಂಬ ಸದಸ್ಯರೆಲ್ಲಾ ಸೇರ್ಕೊಂಡು ಆಡಬಹುದಾದ ಸ್ಪೀಡ್ ಹಾಕಿ, ವರ್ಚ್ಯುವಲ್ ರಿಯಾಲಿಟಿ, ಸ್ಟೂಡೆಂಟ್ಸ್‌ಗಳಿಗಾಗಿಯೇ ರೂಪಿಸಲಾಗಿರುವ ಮೈಂಡ್ ಮತ್ತು ಫಿಸಿಕಲ್ ಡೆವಲಪ್ಮೆಂಟ್‌ಗೆ ಪೂರಕವಾಗಿರುವ ಫಾಸ್ಟ್ ರಿಯಾಕ್ಷನ್ ಗೇಮ್ಸ್, ಫಿಶಿಂಗ್ ಮೆಷಿನ್ಸ್ ಮತ್ತು ಮುಖ್ಯವಾಗಿ ನಮ್ಮಲ್ಲಿರುವ ಮಸಾಜಿಂಗ್ ಚಯರ್, ದೈನಂದಿನ ಜಂಜಾಟಗಳಿಂದ ಸುಸ್ತಾಗುವವ ದೇಹಕ್ಕೆ ರಿಲ್ಯಾಕ್ಸ್ ನೀಡುವುದಕ್ಕೆಂದೇ ರೂಪಿಸಲಾಗಿರುವ ವ್ಯವಸ್ಥೆ ಇದಾಗಿದೆ. ಇನ್ನು ಚಿಣ್ಣರಿಗಾಗಿಯೇ ಸಾಫ್ಟ್ ಏರಿಯಾ ಎಂಬ ಕಾನ್ಸೆಪ್ಟ್‌ನಲ್ಲಿ ಔಟ್ ಡೋರ್ ಗೇಮ್‌ಗಳನ್ನು ಇಂಡೋರ್ ಸೆಟಪ್‌ನಲ್ಲಿ ನಾವು ಅಳವಡಿಸಿzವೆ. ಇದು ಮಕ್ಕಳಿಗೆ ಉತ್ತಮ ಮಾನಸಿಕ ಮತ್ತು ದೈಹಿಕ ಕಸರತ್ತನ್ನು ಒದಗಿಸುತ್ತದೆ. ಇನ್ನು ಪುಟಾಣಿ ಮಕ್ಕಳಿಗಾಗಿ ಹಾರ್ಸ್ ರೈಡಿಂಗ್, ಫಿಶಿಂಗ್, ಟ್ರೈನ್, ರೈನ್ ಬೋ ಕ್ಯಾಸ್ಲೇ ಗೇಮ್‌ಗಳೂ ಇವೆ. ಇನ್ನು ಇಲ್ಲಿ ಅಟವಾಡಿ ಗಳಿಸುವ ಪಾಯಿಂಟ್‌ಗಳಿಂದ ಬಹುಮಾನಗಳನ್ನು ಗೆಲ್ಲುವ ಅವಕಾಶವೂ ನಿಮಗೆ ಈ ಫನ್ ಗ್ಯಾಲಕ್ಸಿಯಲ್ಲಿ ಲಭ್ಯವಿದೆ ಎಂದು ಸಂಸ್ಥೆಯ ಪ್ರವರ್ತಕರು ಇಲ್ಲಿರುವ ವಿಶೇಷತೆಗಳ ಕುರಿತಾಗಿ ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ ವೀಕೆಂಡ್ ಹಾಗೂ ರಜಾದಿನಗಳಲ್ಲಿ ಕುಟುಂಬ ಸಮೇತವಾಗಿ ಬಂದು ಮೈಮನಸ್ಸನ್ನು ರಿಲ್ಯಾಕ್ಸ್ ಮಾಡಿಕೊಂಡು ಹೋಗಬಹುದಾದ ರೀತಿಯಲ್ಲಿ ಜಿ.ಎಲ್, ವನ್ ಮಾಲ್‌ನಲ್ಲಿ ‘ಫನ್ ಗ್ಯಾಲಕ್ಸಿ’ ನಿಮಗಾಗಿ ಕಾಯುತ್ತಿದೆ.