ಸಾಮಾಜಿಕ ಅರಣ್ಯ ಇಲಾಖೆಯಿಂದ ಸಾರ್ವಜನಿಕ ವಿತರಣೆಗೆ 40 ಸಾವಿರ ಸಸಿಗಳು ಸಿದ್ದ

0

ಪುತ್ತೂರು:ಪುತ್ತೂರು ಸಾಮಾಜಿಕ ಅರಣ್ಯ ವಲಯದ ವ್ಯಾಪ್ತಿಗೆ ಸಂಬಂಧಿಸಿ ಸಾರ್ವಜನಿಕ ಸಸಿ ವಿತರಣೆ ಯೋಜನೆಯಡಿ 2023-24ನೇ ಸಾಲಿನಲ್ಲಿ ಪುತ್ತೂರು ಹಾಗು ಕಡಬ ತಾಲೂಕಿನ ವ್ಯಾಪ್ತಿಯ ರೈತರ ಜಮೀನುಗಳಲ್ಲಿ ಹಾಗು ಸಾರ್ವಜನಿಕ ಸ್ಥಳಗಳಲ್ಲಿ ನೆಡಲು ವಿವಿಧ ಅರಣ್ಯ ಜಾತಿಯ ಹಾಗು ಹಣ್ಣು ಹಂಪಲು ಸಸಿ ವಿತರಣೆ ಉದ್ದೇಶದಿಂದ ಇಲಾಖೆ ಒಟ್ಟು 40 ಸಾವಿರ ಸಸಿಗಳನ್ನು ಬೆಳೆಸಿದೆ.


ವಿವಿಧ ಜಾತಿಯ ಗಿಡಗಳು:
ಸಾರ್ವಜನಿಕರಿಗೆ ವಿತರಣೆ ಮಾಡುವ ಸಸಿಗಳಾದ ಸಾಗುವಾನಿ, ಮಹಾಗನಿ, ನೇರಳೆ, ನೆಲ್ಲಿ, ಹೆಬ್ಬಲಸು, ಪುನಾರ್‌ಪುಳಿ, ಮಂತುಹುಳಿ, ಶ್ರೀಗಂಧ, ರಕ್ತಚಂದನ, ಕಿರಾಲ್‌ಬೋಗಿ, ಕಹಿಬೇವು, ಮಾವು, ನಾಗಲಿಂಗಪುಷ್ಪ, ಅಶ್ವತ್ಥ, ಶಮಿ/ಬನ್ನಿ, ಸುರಗಿ, ಸೀತಾಫಲ, ಮುತ್ತುಗ, ರಾಂಪತ್ರೆ, ಸೀಮರೂಬ, ಬೀಟೆ, ಲಕ್ಷ್ಮಣಫಲ, ರೆಂಜ, ಬಿಲ್ವಪತ್ರೆ, ಸಂಪಿಗೆ, ಕಾಯಿಹೊನ್ನೆ, ಬೇಂಗ, ಜಂಬುನೇರಳೆ, ಹುಣಸೆ, ಉಂಡೆಹುಳಿ, ರಂಬೂಟನ್, ಬನ್ಪು ಇತ್ಯಾದಿ ಸಸಿಗಳನ್ನು ಬೆಳಸಲಾಗಿದ್ದು, ಇವುಗಳ ಪೈಕಿ 69ರ ಚೀಲದ ಸಸಿಗಳು ಒಟ್ಟು 2 ಸಾವಿರವಿದ್ದು, ರಿಯಾಯಿತಿ ದರ ರೂ.3ರಂತೆ ವಿತರಿಸಲಾಗುವುದು.812ರ ಚೀಲದ ಸಸಿಗಳು ಒಟ್ಟು 15 ಸಾವಿರವಿದೆ.ಅದಕ್ಕೆ ರೂ.6 ದರ ನಿಗದಿ ಪಡಿಸಲಾಗಿದೆ. ಆಸಕ್ತರು ಕಚೇರಿಗೆ ಅರ್ಜಿ ಸಲ್ಲಿಸಿ ಸಸಿಗಳನ್ನು ಪಡೆದುಕೊಳ್ಳಬಹುದು.


ನರೇಗಾದಲ್ಲಿ ಉಚಿತ ಸಸಿ ವಿತರಣೆ:
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಕಾತರಿ ಯೋಜನೆಯಡಿ (ನರೇಗಾ) 8*12 ಅಳತೆ ಗಾತ್ರದ ಚೀಲದಲ್ಲಿ ಅರಣ್ಯ ಜಾತಿಯ ಮತ್ತು ಹಣ್ಣು ಹಂಪಲು ಜಾತಿಯ ಒಟ್ಟು 5 ಸಾವಿರ ಸಸಿಗಳು ವಿತರಣೆಗಾಗಿ ಲಭ್ಯವಿದ್ದು, ನರೇಗಾ ಯೋಜನೆಯ ಫಲಾನುಭವಿಗಳ ಜಮೀನುಗಳಲ್ಲಿ ಹಾಗು ಸಾರ್ವಜನಿಕ ಸರಕಾರಿ ಸ್ಥಳಗಳಲ್ಲಿ ನೆಡಲು ಉಚಿತವಾಗಿ ಸಸಿಗಳನ್ನು ವಿತರಣೆ ಮಾಡಲಾಗುವುದು.ಸಸಿ ನೆಟ್ಟ ಬಗ್ಗೆ ಯೋಜನೆಯಡಿ ದರ ಪಟ್ಟಿಯಲ್ಲಿರುವ ದರದಂತೆ ಅಂದಾಜು ಪಟ್ಟಿಯನ್ನು ತಯಾರಿಸಿ ಗ್ರಾಮ ಪಂಚಾಯತ್‌ನಲ್ಲಿ ನೋಂದಾಯಿತ ಕೂಲಿ ಕಾರ್ಮಿಕರಿಗೆ ಕೂಲಿ ಪಾವತಿಯನ್ನು ಕೂಡ ಮಾಡಲಾಗುವುದು.ಆಸಕ್ತ ಹಾಗು ಅರ್ಹ ರೈತರು ಹಾಗು ಸಾರ್ವಜನಿಕರು ಇದರ ಸದುಪಯೋಗ ಪಡೆಯಬಹುದು.
ವಿದ್ಯಾರಾಣಿ, ಸಾಮಾಜಿಕ ಅರಣ್ಯ ಇಲಾಖಾಧಿಕಾರಿ ಪುತ್ತೂರು

LEAVE A REPLY

Please enter your comment!
Please enter your name here