ಟೆಂಪೋ ಚಾಲಕ ಮಾಲಕರ ನಿಯೋಗದಿಂದ ಸಂಸದರ ಭೇಟಿ-ವಿಶ್ರಾಂತಿ ಕೊಠಡಿ ನಿರ್ಮಾಣಕ್ಕೆ ಮನವಿ

0

ಪುತ್ತೂರು: ಗೂಡ್ಸ್‌ ಲಾರಿ ಚಾಲಕ , ಮಾಲಕರ ನಿಯೋಗವೊಂದು ಬಿಜೆಪಿ, ರಾಜ್ಯಾಧ್ಯಕ್ಷ, ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರನ್ನು ನಗರದ ಪ್ರವಾಸಿ ಮಂದಿರದಲ್ಲಿ ಭೇಟಿಯಾಗಿ ಬಿಸಿಲು, ಮಳೆಯಿಂದ ರಕ್ಷಿಸಿಕೊಳ್ಳಲು ವಿಶ್ರಾಂತಿ ಕೊಠಡಿ ನಿರ್ಮಿಸಿ ಕೊಡುವಂತೆ ಮನವಿ ಸಲ್ಲಿಸಿದೆ.

ಮನವಿ ಸ್ವೀಕರಿಸಿದ ಸಂಸದರು 3 ತಿಂಗಳ ಒಳಗಾಗಿ ವಾಶ್‌ ರೂಂ ಹೊಂದಿರುವ ಸುಸಜ್ಜಿತ ವಿಶ್ರಾಂತಿ ಕೊಠಡಿ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದ್ದಾರೆ. ಸುಮಾರು 22 ರಷ್ಟು ಚಾಲಕ ಮಾಲಕರು ಸಂಸದರನ್ನು ಭೇಟಿ ಮಾಡಿದ್ದು ಬೇಡಿಕೆ ಈಡೇರಿಸುವಂತೆ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು ಮತ್ತು ರಾಧಕೃಷ್ಣ ಆಳ್ವ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here