ನಿಡ್ಪಳ್ಳಿ; ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಆರ್ಲಪದವು ಪಾಣಾಜೆ ಇಲ್ಲಿ ಅ.2ರಂದು ನಡೆದ 36 ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಕಾರ್ಯಕ್ರಮದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಮೋದ್ ಕುಮಾರ್ ರೈ ಮುಂಡಾಸು ಪ್ರಾಯೋಜಕತ್ವದಲ್ಲಿ ಒಂದು ವಿಶೇಷ ಕಾರ್ಯಕ್ರಮ ಯಕ್ಷಗಾನ ಗಾನ ವೈಭವ ಕಾರ್ಯಕ್ರಮ ಜನರ ಮನರಂಜಿಸಿತು.


0
ಪ್ರಖ್ಯಾತ ಭಾಗವತರಾದ ಕಾವ್ಯಶ್ರೀ ಗುರುಪ್ರಸಾದ್ ನಾಯಕ್ ಅಜೇರು, ಚಿನ್ಮಯ ಭಟ್ ಕಲ್ಲಡ್ಕ, ಪವನ್ ರೈ ಪಾಣಾಜೆ, ಸುಧೀಶ್ ಪಾಣಾಜೆ ಇವರ ಸುಮಧುರ ಕಂಠದ ಹಾಡುಗಳು ಕೇಳುಗರ ಮನಸೂರೆಗೊಂಡಿತು. ಶ್ರೀಧರ ಪಡ್ರೆ ಮದ್ದಳೆ ಹಾಗೂ ಶ್ರೀನಿವಾಸ ಸೋಮಯಾಜಿ ಚೆಂಡೆಯಲ್ಲಿ ಸಹಕರಿಸಿದರು. ಕೃಷ್ಣ ಭಟ್ ನಿರೂಪಣೆ ಮಾಡಿದರು.
ವಿಶೇಷ ಆಕರ್ಷಣೆ;- ಅಖಿಲ್ ಕುಮಾರ್ ಪಿ ಪಂದಳಂ ಇವರ ವಯಲಿನ್ ವಾದನದೊಂದಿಗೆ ಶ್ರೀ ಮಣಿಕಂಠ ಸಿಂಗಾರಿ ಮೇಳ ರೆಂಜ ಇವರಿಂದ ಆಕರ್ಷಕ ಸಿಂಗಾರಿ ಮೇಳ ಶೋಭಾಯಾತ್ರೆಯಲ್ಲಿ ಬಹಳ ವಿಶೇಷ ಆಕರ್ಷಣೆಯಾಗಿತ್ತು.