ಮಾಣಿ ಕರ್ನಾಟಕ ಪ್ರೌಢಶಾಲೆಯಲ್ಲಿ ಶಿಕ್ಷಕರಕ್ಷಕ ಸಂಘದ ಸಭೆ

0

ಕನ್ನಡ ಮಾಧ್ಯಮದ ಬಗೆಗಿರುವ ಕೀಳರಿಮೆ ಬಿಟ್ಟುಬಿಡಿ: ಇಬ್ರಾಹಿಂ

ವಿಟ್ಲ: ನಮ್ಮ ಶಾಲೆಯಲ್ಲಿ ವಿದ್ಯಾಭ್ಯಾಸ ಕಲಿತವರೆಲ್ಲಾ  ಉನ್ನತ ಹುದ್ದೆಯಲ್ಲಿದ್ದು, ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಿ ಉದ್ಯಮಿಗಳಾಗಿ ಯಶಸ್ಸು ಕಂಡು ದೇಶದ ಮೂಲೆ –  ಮೂಲೆಯಲ್ಲಿದ್ದಾರೆ. ಹಾಗಾಗಿ ಕನ್ನಡ ಮಾಧ್ಯಮದ ಬಗೆಗಿರುವ ಕೀಳರಿಮೆ ಬಿಟ್ಟು ಸರಕಾರ ನೀಡುವ ವಿವಿಧ ಮೀಸಲಾತಿಗಳ ಸೌಲಭ್ಯ ಪಡೆದುಕೊಂಡು ನಿಮ್ಮ ಮಕ್ಕಳ ಭವಿಷ್ಯ ರೂಪಿಸಿ ಎಂದು ಶಾಲಾ ಸಂಚಾಲಕರಾದ  ಇಬ್ರಾಹಿಂರವರು ಹೇಳಿದರು. ಅವರು ಮಾಣಿ ಕರ್ನಾಟಕ ಪ್ರೌಢಶಾಲೆಯಲ್ಲಿ ನಡೆದ ಶಿಕ್ಷಕ – ರಕ್ಷಕ ಸಂಘದ ಸಭೆಯಲ್ಲಿ ಅವರು ಮಾತನಾಡಿದರು.

 ವಿದ್ಯಾಭಿವರ್ಧಕ ಸಂಘ ಮಾಣಿ ಇದರ ಅಧ್ಯಕ್ಷರಾದ ಕಿರಣ್ ಹೆಗ್ಡೆರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಮುಂದಿನ ದಿನಗಳಲ್ಲಿ ಶಾಲಾ ಹಾಜರಾತಿ ಹೆಚ್ಚಿಸುವಲ್ಲಿ ಪೋಷಕರು ಸಹಕರಿಸಬೇಕೆಂದು ಮನವಿ ಮಾಡಿದರು.ಶಿಕ್ಷಕರಕ್ಷಕ ಸಂಘದ ನೂತನ ಅಧ್ಯಕ್ಷರಾಗಿ ಹರೀಶ್ ಮಾಣಿ, ಉಪಾಧ್ಯಕ್ಷರಾಗಿ ಹಂಝ, ಸದಸ್ಯರಾಗಿಹಸೈನಾರ್, ಅಮೀರ್, ಸುಮಲತಾ  ಆಯ್ಕೆಯಾದರು. ಶಿಕ್ಷಕರು ಪರವಾಗಿ ಎಸ್.ಚೆನ್ನಪ್ಪ ಗೌಡರವರು ಶಾಲಾ ಶಿಸ್ತಿನಲ್ಲಿ ಪೋಷಕರು ಮತ್ತು ವಿದ್ಯಾರ್ಥಿಗಳ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಹಿರಿಯ ಶಿಕ್ಷಕರಾದ ಎಂ.ಕೆ. ಬಾಲಕೃಷ್ಣ, ಶಿಕ್ಷಕ – ರಕ್ಷಕ ಸಂಘದ ಮಾಜಿ ಅಧ್ಯಕ್ಷೆ ರೇಷ್ಮಾ ,ಉಪಾಧ್ಯಕ್ಷೆ ಪಾರ್ವತಿ ಮೊದಲಾದವರು ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯರಾದ ಬಿ.ಕೆ. ಭಂಡಾರಿರವರು ಸ್ವಾಗತಿಸಿ, ವಾರ್ಷಿಕ ಲೆಕ್ಕಪತ್ರ ಮಂಡಿಸಿ, ನೂತನ ಪದಾಧಿಕಾರಿಗಳ ಆಯ್ಕೆ ಮಾಡಿದರು.

ಶಿಕ್ಷಕಿ ಶ್ಯಾಮಲ ಕೆ.ವಂದಿಸಿ, ಶಿಕ್ಷಕ ಜಯರಾಮ ಕಾಂಚನ ಕಾರ್ಯಕ್ರಮ ನಿರೂಪಿಸಿ, ಕುಮಾರಿ ಸಾನಿಕ ಮತ್ತು ಬಳಗದವರು ಪ್ರಾರ್ಥಿಸಿದರು.

LEAVE A REPLY

Please enter your comment!
Please enter your name here