ಜೈನ ಮುನಿ ಹತ್ಯೆ ಖಂಡಿಸಿ ಮತ್ತು ವಕ್ಫ್ ಬೋರ್ಡ್ ಕಾಯ್ದೆ ರದ್ದುಗೊಳಿಸುವಂತೆ ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿಯಿಂದ ಜಾಗೃತಿ ಆಂದೋಲನ

0

ಜೈನ ಮುನಿಗಳ ವಿಹಾರ ಸಂದರ್ಭದಲ್ಲಿ ಸರಕಾರ ರಕ್ಷಣೆ ಕೊಡಬೇಕು – ಮಿತ್ರಸೇನ ಆಗ್ರಹ

ಪುತ್ತೂರು: ಜೈನ ಮುನಿ ಹತ್ಯೆ ಖಂಡಿಸಿ ಮತ್ತು ವಕ್ಫ್ ಬೋರ್ಡ್ ಕಾಯ್ದೆ ರದ್ದುಗೊಳಿಸುವಂತೆ ಆಗ್ರಹಿಸಿ ಹಿಂದೂ ರಾಷ್ಟ್ರ ಜಾಗೃತಿ ಆಂದೋಲನ ಜು.18ರಂದು ಪುತ್ತೂರು ತಾಲೂಕು ಆಡಳಿತ ಸೌಧದ ಬಳಿಯ ಅಮರ್ ಜವಾನ್ ಸ್ಮಾರಕ ಜ್ಯೋತಿ ಬಳಿ ನಡೆಯಿತು.

ಜೈನ ಮುನಿಗಳ ವಿಹಾರ ಸಂದರ್ಭದಲ್ಲಿ ಸರಕಾರ ರಕ್ಷಣೆ ಕೊಡಬೇಕು:
ಮಿತ್ರಸೇನ ಅಳದಂಗಡಿ ಅವರು ಮಾತನಾಡಿ ಪ್ರಸ್ತುತ ವರ್ತಮಾನ ಕಾಲದಲ್ಲಿ ಕಣ್ಣಿಗೆ ಕಾಣುವ ದೇವರು ಆಚಾರ್ಯರು, ಉಪಾಧ್ಯಾಯರು, ಸರ್ವಸಾಧುಗಳು. ಇದರಲ್ಲಿ ಉಪಾಧ್ಯಾಯರಾದಂತಹ ಕಾಮಕುಮಾರ ನಂದಿ ಮಹಾರಾಜ್ ಅವರನ್ನು ಹಂತಕರು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಆದರೆ ಮುನಿಗಳು ಯಾರಿಗೂ ತೊಂದರೆ ಕೊಡದವರು. ಅವರು ವರ್ಷದ 365 ದಿನಗಳಲ್ಲಿ ಕೇವಲ ನಾಲ್ಕು ತಿಂಗಳು ಚಾರ್ತುಮಾಸ್ಯ ಸಂದರ್ಭದಲ್ಲಿ ಒಂದು ಕಡೆ ತಂಗುತ್ತಾರೆ. ಉಳಿದ ದಿನ ವಿಹಾರ ಮಾಡುತ್ತಿರುವವರು. ಅವರು ದಿನದ 24 ಗಂಟೆಯಲ್ಲಿ ಒಂದು ಭಾರಿ ಮಾತ್ರ ಆಹಾರ, ನೀರು ಸೇವಿಸುತ್ತಾರೆ. ಅಂತಹ ನಿರ್ದೋಶಿಗಳಾಗಿರುವ ಮುನಿಗಳನ್ನು ವಿನಾಃ ಕಾರಣ ಅವರಿಂದ ಬೇಕಾದಷ್ಟು ಉಪಾಕಾರ ಪಡೆದ ಹತ್ಯೆ ಮಾಡಿದ್ದಾರೆ. ಇಂತಹ ಘೋರ ಕೃತ್ಯ ಎಸಗಿದ ಆರೋಪಿಗಳಿಗೆ ಬಹುಶಃ ನಾವು ಕೊಡುವ ಶಿಕ್ಷೆಗಿಂತಲು ಅವರಿಗೆ ಭಗವಂತನೆ ಶಿಕ್ಷೆ ಕೊಡುತ್ತಾನೆ. ಭಾರತದಲ್ಲಿ 16ಸಾವಿರ ಗೋಶಾಲೆಯಲ್ಲಿ 13ಸಾವಿರ ಗೋ ಶಾಲೆಯನ್ನು ಜೈನ ಸಮಾಜವೇ ನೋಡಿಕೊಳ್ಳುತ್ತದೆ. ಅಂತಹ ಜೈನ ಸಮಾಜವನ್ನು ಈ ರೀತಿ ನಡೆಸಿಕೊಂಡಿರುವುದು ಖಂಡನೀಯ. ಹಂತಕರಿಗೆ ನಿಜವಾಗಿಯೂ ಕೂಡಾ ಕಠಿಣಾತಿ ಕಠಿಣಾ ಶಿಕ್ಷೆ ವಿಧಿಸಬೇಕು. ಯಾಕೆಂದರೆ ನಮ್ಮ ಮುನಿಗಳು ತಿರುಗಿ ಬರುವುದಿಲ್ಲ. ಆದರೆ ಮುಂದೆ ನಮ್ಮ ಲೋಕದಲ್ಲಿರುವ ಬೇರೆ ಮುನಿಗಳಿಗೆ ತೊಂದರೆ ಆಗಬಾರದು. ಅವರಿಗೆ ಆಹಾರಕ್ಕೆ ಜೈನ ಸಮಾಜ ನೋಡುತ್ತದೆ. ಆದರೆ ವಿಹಾರದ ಸಂದರ್ಭದಲ್ಲಿ ಸರಕಾರ ಅವರಿಗೆ ರಕ್ಷಣೆ ಕೊಡಬೇಕು. ಸರಕಾರ ಮುನಿ ಭಗವಂತರ ರಕ್ಷಣೆ ಮಾಡಬೇಕೆಂದರು.
ವಕ್ಫ್ ಬೋರ್ಡ್ ಕಾಯಿದೆ ರದ್ದುಗೊಳಿಸುವಂತೆ ಆಗ್ರಹ:
ವಕ್ಫ್ ಬೋರ್ಡ್ ಕಾಯಿದೆಯು ಹಿಂದುಗಳ ಭೂಮಿಯನ್ನು ಕಬಳಿಸುವ ಷಡ್ಯಂತ್ರ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಆ ಕಾಯಿದೆಯನ್ನು ರದ್ದುಗೊಳಿಸಬೇಕೆಂದು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಘೋಷನೆ ಕೂಗಿ ಆಗ್ರಹಿಸಲಾಯಿತು. ನಗರಸಭೆ ನಿಕಟಪೂರ್ವ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಉಪೇಂದ್ರ ಆಚಾರ್ಯ ಮಾತನಾಡಿದರು. ಹಿಂದು ಜನಜಾಗೃತಿ ಸಮಿತಿಯ ಶಾಂತಪ್ಪ ಗೌಡ, ಬಾಲಕೃಷ್ಣ ಗೌಡ, ಚಂದ್ರಶೇಖರ್, ಹರಿಪ್ರಸಾದ್ ಶೆಟ್ಟಿ ನೆಲ್ಲಿಕಟ್ಟೆ, ಜನಾರ್ದನ ಗೌಡ, ನಗರಸಭೆ ಮಾಜಿ ಉಪಾಧ್ಯಕ್ಷ ವಿಶ್ವನಾಥ ಗೌಡ, ಗಿತೇಶ್ ಅಜ್ಜಿಕಲ್ಲು, ದಯಾನಂದ ಹೆಗ್ಡೆ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ಪಾರ್ವತಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here