ಕಡವಿನಬಾಗಿಲು ನಿವಾಸಿ ಪಿ.ಎ. ಮಹಮ್ಮದ್ ನಿಧನ

0


ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಕಡವಿನಬಾಗಿಲು ನಿವಾಸಿ ಪಿ.ಎ. ಮಹಮ್ಮದ್ (65) ಕೆಲ ದಿನಗಳ ಅನಾರೋಗ್ಯದಿಂದ ಜು. 18ರಂದು ತನ್ನ ಮನೆಯಲ್ಲಿ ನಿಧನ ಹೊಂದಿದರು.
ಮಹಮ್ಮದ್‌ರವರು ಮಾವುತ ಕೆಲಸ ನಿರ್ವಹಿಸಿದ ಅನುಭವಿಯಾಗಿದ್ದು, ಉಪ್ಪಿನಂಗಡಿಯ ಉದ್ಯಮಿಯೋರ್ವರ ಸಾಕು ಆನೆಗೆ ಮಾವುತರಾಗಿದ್ದರು. ಹಾಗೂ ಮರದ ವ್ಯಾಪಾರಿಗಳು
ಕಾಡಿನಿಂದ ಮರಗಳನ್ನು ತೆರವು ಮಾಡುವ ಸಂದರ್ಭದಲ್ಲಿ ಬಳಕೆಯಾಗುವ ಆನೆಯ ಮಾವುತರಾಗಿಯೂ ಕೆಲಸ ಮಾಡಿದ ಅನುಭವಿಯಾಗಿರುತ್ತಾರೆ.
ಮೃತ ಮಹಮ್ಮದ್‌ರವರು ಪತ್ನಿ, 4 ಗಂಡು, 2 ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here