ಪುತ್ತೂರು: ಕರ್ನಾಟಕ ಪತ್ರಕರ್ತರ ಸಂಘದ ಸಭೆ-ಪತ್ರಕರ್ತನ ಮೇಲಿನ ದೌರ್ಜನ್ಯಕ್ಕೆ ಖಂಡನಾ ನಿರ್ಣಯ

0

ಪುತ್ತೂರು: ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು ಇದರ ಸಭೆಯು ಪುತ್ತೂರು ದೇವಣ್ಣ ಕಿಣಿ ಕಟ್ಟಡದಲ್ಲಿರುವ ಸುದ್ದಿ ಮೀಡಿಯಾ ಸೆಂಟರ್ ನಲ್ಲಿ ಜು.18 ರಂದು ನಡೆಯಿತು. ಸಂಘದ ಅಧ್ಯಕ್ಷ ತಿಲಕ್ ರೈ ಕುತ್ಯಾಡಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.


ಸಭೆಯಲ್ಲಿ ‘ಆಟಿದ ಕೂಟ’ – ಸನ್ಮಾನ ನಡೆಸುವ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು. ಸಂಘದ ಸ್ಥಾಪಕಾಧ್ಯಕ್ಷ ಉಮೇಶ್ ಮಿತ್ತಡ್ಕ, ಸದಸ್ಯರಾದ ಪಿ.ಎಸ್. ಭಟ್, ಆದಿತ್ಯ ಈಶ್ವರಮಂಗಲ, ರಮೇಶ್ ಕೆಮ್ಮಾಯಿ, ಪ್ರಜ್ವಲ್, ಶೈಲಜಾ ಸುದೇಶ್, ಕವಿತಾ ವಿಶ್ವನಾಥ, ವೇದವತಿ, ಅಕ್ಷತಾ, ಶ್ವೇತಾ, ಜಯಲಕ್ಷ್ಮೀ ಉಪಸ್ಥಿತರಿದ್ದು ವಿವಿಧ ಸಲಹೆ ಸೂಚನೆ ನೀಡಿದರು.ಕಾರ್ಯದರ್ಶಿ ಶ್ರೀಧರ ರೈ ಕೋಡಂಬು ವಂದಿಸಿದರು.

ಪತ್ರಕರ್ತನ ಮೇಲಿನ ದೌರ್ಜನ್ಯಕ್ಕೆ ಖಂಡನಾ ನಿರ್ಣಯ
ಇತ್ತೀಚೆಗೆ ಪತ್ರಿಕಾ ಕರ್ತವ್ಯದಲ್ಲಿದ್ದ ವೇಳೆ ವಿಡಿಯೋ ಮಾಡಿರುವುದಕ್ಕೆ ಪತ್ರಕರ್ತ ನಿಶಾಂತ್ ಬಿಲ್ಹಂಪದವು ರವರ ಮೊಬೈಲ್ ಕಸಿದು, ದೌರ್ಜನ್ಯವೆಸಗಿರುವ ಘಟನೆಗೆ ಸಂಬಂಧಿಸಿದಂತೆ ಖಂಡನಾ ನಿರ್ಣಯ ಕೈಗೊಳ್ಳಲಾಯಿತು. ಅಧ್ಯಕ್ಷ ತಿಲಕ್ ರೈ ಯವರು ಮಾತನಾಡಿ ‘ಪತ್ರಕರ್ತ ಸಮಾಜಕ್ಕೆ ಸತ್ಯವನ್ನು ಹೇಳುವವನು. ಸಮಾಜದ ಬೆಳವಣಿಗೆಯಲ್ಲಿ ಪತ್ರಕರ್ತನ ಕೆಲಸ ತೀರಾ ಮಹತ್ವದ್ದು. ಇಂತಹ ದೌರ್ಜನ್ಯ ಓರ್ವ ಪತ್ರಕರ್ತನಿಗಲ್ಲದೇ ಇಡೀ ಪತ್ರಕರ್ತ ಸಮೂಹಕ್ಕೆ ಮಾಡಿದಂತಾಗಿದೆ. ಇದನ್ನು ನಾವು ಖಂಡಿಸುತ್ತೇವೆ. ಪೊಲೀಸರು ಸೂಕ್ತ ತನಿಖೆ ನಡೆಸಿ ಪತ್ರಕರ್ತನಿಗಾದ ನೋವಿಗೆ ನ್ಯಾಯ ದೊರಕಿಸಿಕೊಡಬೇಕು’ ಎಂದು ಆಗ್ರಹಿಸಿದರು.

LEAVE A REPLY

Please enter your comment!
Please enter your name here