ಕೊರಿಂಗಿಲ ಜಮಾಅತ್ ಗಲ್ಫ್ ವಿಂಗ್‌ಗೆ ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷ: ಆರಿಫ್ ಕೊರಿಂಗಿಲ; ಪ್ರ.ಕಾರ್ಯದರ್ಶಿ: ಜಾಬಿರ್ ಡೆಮ್ಮಂಗರ

ಪುತ್ತೂರು: ಕೊರಿಂಗಿಲ ಜಮಾಅತ್ ಗಲ್ಫ್ ವಿಂಗ್ ಮಾಸಿಕ ಮಹಾ ಸಭೆ ಆರಿಫ್ ಕೊರಿಂಗಿಲರವರ ಅಧ್ಯಕ್ಷತೆಯಲ್ಲಿ ನಡೆಯಿತು. ಹಮೀದ್ ಫೈಝಿ ಕತಾರ್ ಪ್ರಾರ್ಥನೆ ನೆರವೇರಿಸಿದರು. ಪ್ರಧಾನ ಕಾರ್ಯದರ್ಶಿ ಜಾಬಿರ್ ಡೆಮ್ಮ೦ಗರ ಕಳೆದ ವರ್ಷದ ವರದಿ ವಾಚಿಸಿದರು. ನಂತರ ನೂತನ ಸಮಿತಿಯನ್ನು ರಚಿಸಲಾಯಿತು.


ಗೌರವಾಧ್ಯಕ್ಷರಾಗಿ ಮಹಮ್ಮದ್ ಹಾಜಿ ಕೊರಿಂಗಿಲ, ಮುಖ್ಯ ಸಲಹೆಗಾರರಾಗಿ ಬಾತಿಶ ಕೊರಿಂಗಿಲ, ಶರೀಫ್ ಬಿಂತಡ್ಕ, ಅಧ್ಯಕ್ಷರಾಗಿ ಆರಿಫ್ ಕೊರಿಂಗಿಲ, ಉಪಾಧ್ಯಕ್ಷರಾಗಿ ಹಮೀದ್ ಫೈಝಿ ಕೀಲಂಪಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಜಾಬೀರ್ ಡೆಮ್ಮಂಗರ ಆಯ್ಕೆಯಾಗಿದ್ದಾರೆ. ಜೊತೆ ಕಾರ್ಯದರ್ಶಿಗಳಾಗಿ ಅಮ್ಮಿ ಕೊರಿಂಗಿಲ, ಅಝೀಝ್ ಕೀಲಂಪಾಡಿ, ಕೋಶಾಧಿಕಾರಿಯಾಗಿ ಅಲಿ ಕುಕ್ಕುವಳ್ಳಿ, ಸಂಘಟನಾ ಕಾರ್ಯದರ್ಶಿಯಾಗಿ ಮುಝಮ್ಮಿಲ್ ಕೊರಿಂಗಿಲ, ಝಕರಿಯ ಕೊರಿಂಗಿಲ ಆಯ್ಕೆಯಾದರು. ಪತ್ರಿಕಾ ಪ್ರತಿನಿಧಿ ಶಫೀಕ್ ಕೊರಿಂಗಿಲ, ಸೌದಿ ರಿಸೀವರ್ ಆಗಿ ಉದೈಫ್ ಕೊರಿಂಗಿಲ, ದುಬೈ ರಿಸೀವರ್ ಆಗಿ ಅಸ್ಕರ್ ಕೊರಿಂಗಿಲ ,ಕತ್ತರ್ ರಿಸೀವರ್ ಆಗಿ ಹಮೀದ್ ಗುಂಡ್ಯಡ್ಕ ಆಯ್ಕೆಯಾದರು. ಮತ್ತು 35 ಸದಸ್ಯರನ್ನು ಜಮಾತ್ ಗಲ್ಫ್ ವಿಂಗ್ ಸದಸ್ಯರಾಗಿ ಆಯ್ಕೆ ಮಾಡಲಾಯಿತು. ಝಕರಿಯಾ ಕೊರಿಂಗಿಲ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here