ಪುತ್ತೂರು: ಪಶುಸಂಗೋಪನಾ ಇಲಾಖೆಯ ನಿವೃತ್ತ ಪಶುವೈದ್ಯ ಡಾ.ರಾಮಪ್ರಕಾಶ ಡಿರವರು ಹಾರಾಡಿಯ ತಮ್ಮ ಸ್ವಗೃಹದಲ್ಲಿ ಪೆಟ್ ಕ್ಲಿನಿಕ್‌ನ್ನು ಪ್ರಾರಂಭಿಸಿದ್ದಾರೆ. ಪಶುಸಂಗೋಪನಾ ಇಲಾಖೆಯಲ್ಲಿ 36 ವರ್ಷ ಪಶುವೈದ್ಯರಾಗಿ ಸೇವೆ ಸಲ್ಲಿಸಿ ಮಂಗಳೂರಿನ ಜಿಲ್ಲಾ ಪಾಲಿಕ್ಲಿನಿಕ್‌ನ ಉಪನಿರ್ದೇಶಕರಾಗಿ ಸೇವೆಯಿಂದ ನಿವೃತ್ತರಾಗಿರುವ ಇವರು ಪ್ರಸ್ತುತ ಹಾರಾಡಿಯ ಮೂಕಾಂಬಿಕಾ ಗ್ಯಾಸ್ ಏಜೆನ್ಸಿ ರಸ್ತೆಯಲ್ಲಿರುವ ತಮ್ಮ ಸ್ವಗೃಹದಲ್ಲಿ ಪೆಟ್ ಕ್ಲಿನಿಕ್‌ನ್ನು ಪ್ರಾರಂಭಿಸಿದ್ದು, ಸಾಕುಪ್ರಾಣಿಗಳ ವ್ಯಾಕ್ಸಿನೇಶನ್ ಮತ್ತು ಚಿಕಿತ್ಸೆಗೆ ಲಭ್ಯರಿದ್ದಾರೆ. ಅಪಾಯಿಂಟ್ಮೆಂಟ್‌ಗಾಗಿ ದೂರವಾಣಿ ಸಂಖ್ಯೆ 9448254040/ 9740560702 ಕರೆಮಾಡಿ ಸಮಯ ನಿಗದಿಪಡಿಸಿ ಖಾಸಗಿ ಸೇವೆಯನ್ನು ಪಡೆದುಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.