ನಂದಿನಿ ಹಾಲು, ಹಾಲಿನ ಉತ್ಪನ್ನ ಮಾರಾಟ: ಕುಂಬ್ರದ ಮೆಲ್ವಿನ್ ಮೊಂತೆರೋ ಗೆ ಗ್ರಾಮೀಣ ಮಟ್ಟದಲ್ಲಿ ಪ್ರಥಮ ಬಹುಮಾನ

0

ಪುತ್ತೂರು: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಕುಲಶೇಖರ ಮಂಗಳೂರು ಇದರ ಪುತ್ತೂರು ವ್ಯಾಪ್ತಿಯ ಅಧಿಕೃತ ನಂದಿನಿ ಡೀಲರ್‌ಗಳ ಸಭೆಯು ಜು.18ರಂದು ಪುತ್ತೂರು ಹೊಟೇಲ್ ದರ್ಶನ್ ಹಾಲ್‌ನಲ್ಲಿ ನಡೆಯಿತು. ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟದಲ್ಲಿ 2022-23ನೇ ಸಾಲಿನಲ್ಲಿ ತಾಲೂಕು ಮಟ್ಟದ ಗ್ರಾಮೀಣ ಪ್ರದೇಶ ಅತ್ಯುತ್ತಮ ಡೀಲರ್‌ರಾಗಿ ಕುಂಬ್ರದ ಮೋಂತೆರೋ ಸ್ವೀಟ್ಸ್ ಮಾಲಕ ಮೆಲ್ವಿನ್ ಮೋಂತೆರೋರವರು ಪ್ರಥಮ ಬಹುಮಾನ ಪಡೆದುಕೊಂಡರು. ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಅಶೋಕ್‌ರವರು ಪ್ರಶಸ್ತಿ ವಿತರಿಸಿದರು. ಈ ಸಂದರ್ಭದಲ್ಲಿ ಹಾಲು ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ, ನಿರ್ದೇಶಕ ನಾರಾಯಣ ಪ್ರಕಾಶ್, ಪುತ್ತೂರು ವಿಭಾಗದ ಮಾರ್ಕೆಟಿಂಗ್ ಮ್ಯಾನೇಜರ್ ಸದಾಶಿವ ಮತ್ತಿತರರು ಉಪಸ್ಥಿತರಿದ್ದರು.


LEAVE A REPLY

Please enter your comment!
Please enter your name here