ಬೆಳ್ಳಾರೆ : ಪೆರುವಾಜೆ ಗ್ರಾಮದ ಪೆಲತಡ್ಕ ಎಂಬಲ್ಲಿ ಬೇಲಿ ನಾಶ ಮಾಡಿರುವುದಾಗಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು ನಿಂದನೆ ಮಾಡಿರುವುದಾಗಿ ಆರೋಪಿಸಿ ಪೆರುವಾಜೆ ಗ್ರಾಮ ಪಂಚಾಯತ್ ಸದಸ್ಯರೋರ್ವರ ವಿರುದ್ಧ ವ್ಯಕ್ತಿಯೋರ್ವರು ಜು.18 ರಂದು ದೂರು ನೀಡಿದ್ದು ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೆರುವಾಜೆ ಗ್ರಾಮದ ಪೆಲತಡ್ಕ ನಿವಾಸಿ ದಾಮೋದರ ನಾಯ್ಕ ಎಂಬವರ ಮನೆ ಸಮೀಪ ಸಾರ್ವಜನಿಕ ರಸ್ತೆ ಕಾಮಗಾರಿ ನಡೆಯುತ್ತಿದೆ. ಮನೆಯ ಜಮೀನಿನ ಬೇಲಿಯು ಅರ್ಧದಷ್ಟು ನಾಶವಾಗಿದ್ದು ಈ ಬಗ್ಗೆ ಕಾಮಗಾರಿ ಉಸ್ತುವಾರಿ ವಹಿಸಿದ ಪೆರುವಾಜೆ ಗ್ರಾಮದ ಮುರ್ಕೆತ್ತಿ ವಾರ್ಡ್ ಸದಸ್ಯ ಸಚಿನ್ ರಾಜ್ ಶೆಟ್ಟಿಯವರಲ್ಲಿ ತಿಳಿಸಿದರು. ಆಗ ಸಚಿನ್ ರಾಜ್ ಶೆಟ್ಟಿಯವರು ಇದನ್ನು ನಾನು ಸರಿಪಡಿಸುವುದಿಲ್ಲ ಎಂದು ಹೇಳಿದಾಗ ಮಾತಿಗೆ ಮಾತು ಬೆಳೆದು ಬಳಿಕ ,ಜಾತಿ ನಿಂದನೆ ಗೈದಿದ್ದು,ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ಬಳಿಕ ಪಕ್ಕದ ಮನೆಯ ಪೂರ್ಣಿಮಾ ಎಂಬವರನ್ನು ನೋಡಿ, ನಿನಗೆ ಮನೆ ನಾನು ಕಟ್ಟಿಸಿ ಕೊಟ್ಟಿರುವುದು. ನೀವೆಲ್ಲ ಇವರೊಂದಿಗೆ ಸೇರಿದರೆ ನಿನ್ನ ಮನೆ ಮತ್ತು ಕೆಲಸವನ್ನು ತೆಗೆಸುತ್ತೇನೆ ಎಂದು ಬೆದರಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ದಾಮೋದರ ನಾಯ್ಕ ಅವರು ನೀಡಿರುವ ದೂರಿನಂತೆ ಸಚಿನ್ ರಾಜ್ ಶೆಟ್ಟಿ ವಿರುದ್ಧ ಕಲಂ 504, 506 ಐಪಿಸಿ ಮತ್ತು The Sc&St( Preventation of Atrocities amendment Act 2015(U?s-3(1)(r)3(2)(VA ರಂತೆ ಪ್ರಕರಣ ದಾಖಲಾಗಿದೆ.