ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ  ಬಾಲ್ ದಿವಸ್ – ಸ್ವಾಸ್ಥ್ಯ ಸುಧಾ

0

ಪುತ್ತೂರು: ಮಕ್ಕಳ ದಿನಾಚರಣೆಯ ಪ್ರಯುಕ್ತ ನ.14 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ “ಬಾಲ್ ದಿವಸ್ – ಸ್ವಾಸ್ಥ್ಯ ಸುಧಾ” – ಕಾರ್ಯಕ್ರಮ ನಡೆಯಿತು.

10ನೇ ತರಗತಿಯ ವಿದ್ಯಾರ್ಥಿಗಳು ಶಿಕ್ಷಕರ ವೇಷಭೂಷಣ ಧರಿಸಿ, ಶಿಕ್ಷಕರಾಗಿ ಕಾರ್ಯನಿರ್ವಹಿಸಿದರು. 5 ರಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿಗಳು ಪೌಷ್ಠಿಕಾಂಶಯುಕ್ತ ಖಾದ್ಯಗಳಾದ ಕೋಸಂಬರಿ, ಮಸಾಲೆ ಅವಲಕ್ಕಿ, ಒರಿಯೋ ಲಡ್ಡು, ವಿವಿಧ ಬಗೆಯ ಹಣ್ಣುಗಳು, ಸ್ಯಾಂಡಿವಿಚ್ ಹೀಗೆ ಸುಮಾರು 5 ಬಗೆಯ ವಿವಿಧ ಖಾದ್ಯಗಳನ್ನು ಅಗ್ನಿಯ ಸಹಾಯವಿಲ್ಲದೆ ತರಗತಿ ಕೊಠಡಿಯೊಳಗೆ ಪರಿಪೂರ್ಣ ಸ್ವಚ್ಛತೆಯೊಂದಿಗೆ ತಯಾರಿಸಿದರು.

ತಾವು ತಮಗೆ ಸಿಕ್ಕಿದ ಜವಾಬ್ದಾರಿಯಂತೆ ಶಾಲೆಯ ಎಲ್.ಕೆ.ಜಿಯಿಂದ ಹಿಡಿದು ನಾಲ್ಕನೇ ತರಗತಿಯ  ಮಕ್ಕಳಿಗೆ ಹಂಚಿ,ತಾವುಗಳು ಕೂಡ ಸವಿದರು. 

 ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ನಡೆದವು. ವಿದ್ಯಾರ್ಥಿಗಳಿಗಾಗಿ ಶಿಕ್ಷಕರ ತಂಡದ ನೃತ್ಯ ಪ್ರದರ್ಶನ ನಡೆಯಿತು. 

LEAVE A REPLY

Please enter your comment!
Please enter your name here