ತುಳು ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ | ಆಟಿದ ಆಟಗಳು | ರೂ.349 ಕ್ಕೆ 49 ಬಗೆಯ ‘ಬಂಜಾರ’ ಊಟ
ಪುತ್ತೂರು: ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಕೆ.ಸೀತಾರಾಮ್ ರೈ ಸವಣೂರು ಇವರ ಮುಂದಾಳತ್ವದಲ್ಲಿ ತುಳು ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ, ಆಟಿದ ಆಟಗಳು, ವಿವಿಧ ಬಗೆಯ ತಿಂಡಿ ತಿನಸುಗಳು, ಸಭಾ ಕಾರ್ಯಕ್ರಮ ಮುಂತಾದ ವೈವಿಧ್ಯಗಳನ್ನೊಳಗೊಂಡ ‘ಆಟಿಡೊಂಜಿ ದಿನ’ ಕಾರ್ಯಕ್ರಮ ಜು.29 ರಂದು ದರ್ಬೆ ಪ್ರಶಾಂತ್ ಮಹಲ್ ಸನ್ನಿಧಿ ಸಭಾಂಗಣದಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ಜರಗಲಿದೆ.
ನಮ್ಮ ಟಿ.ವಿ ನವೀನ್ ಶೆಟ್ಟಿರವರಿಂದ ಆಟಿ ಭಾಷಣ:
ಬೆಳಿಗ್ಗೆ ಸಭಾ ಕಾರ್ಯಕ್ರಮ ಜರಗಲಿದ್ದು ನಮ್ಮ ಟಿ.ವಿ ಚಾನೆಲಿನ ನವೀನ್ ಶೆಟ್ಟಿ ಎಡ್ಮೆರ್ ರವರಿಂದ ಆಟಿ ಕುರಿತು ಭಾಷಣ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಸಹಕಾರಿ ರತ್ನ ಸವಣೂರು ಸೀತಾರಾಮ್ ರೈರವರು ವಹಿಸಲಿದ್ದಾರೆ.
ಆಟಿದ ಆಟಿಲ್ ನಲ್ಲಿ ಏನೇನಿದೆ:
ತುಳುವರ ಆಟಿದ ಆಟಿಲ್ ನಲ್ಲಿ ಬೆಳಿಗ್ಗೆ ಬಾಯಾರಿಕೆಗೆ ಪದೆಂಜಿ ಪೇರ್, ಪತ್ರೋಡೆ, ಬಾಜಿಲ್, 11 ಗಂಟೆಗೆ ತೆಲಿ ಬಾಜೆಲ್, ಮಧ್ಯಾಹ್ನದ ಬಂಜಾರ ಊಟದಲ್ಲಿ ಅಂಬಡೆ, ಮಾವಿನಕಾಯಿ, ಕರಂಡೆ ಕಾಯಿಯ ಉಪ್ಪಿನಕಾಯಿ, ತಿಮರೆ ಚಟ್ನಿ, ಕುಡು ಚಟ್ನಿ, ಪೂಂಬೆ ಚಟ್ನಿ, ತೆಕ್ಜರೆದ ತಲ್ಲಿ, ತಜಂಕ್ ಪೆಲತ್ತರಿ ಸುಕ್ಕ, ಕಣಿಲೆ ಸುಕ್ಕ, ಉಪ್ಪಡ್ ಪಚ್ಚಿಲ್, ತೇಟ್ಲ ಗಸಿ, ಕಾಯ್ತಿನ ಪತ್ರೋಡೆ, ತಜಂಕ್ ದ ಅಂಬಡೆ, ಮಂಜಲ್ ಇರೆತ ಗಟ್ಟಿ, ಬಾರೆದ ಇರೆತ ಗಟ್ಟಿ, ಪೆಲಕ್ಕಾಯಿದ ಗಟ್ಟಿ, ನೀರ್ದೋಸೆ, ಸೇಮೆ ಪೇರ್, ಪೆಲಕಾಯಿದ ಗಾರಿಗೆ, ನುರ್ಗೆ ತಪ್ಪುದ ಉಪ್ಪುಗರಿ, ಗಂಜಿ(ಕಜೆ ಅರಿ), ನುಪ್ಪು, ಕುಡುತ್ತ ಸಾರ್, ಉಪ್ಪುಂಚಿ, ತೌತೆ ಗಸಿ, ಕುಕ್ಕು ಪೆಜಕಾಯಿದ ಪಜ್ಜಿ ಕಜಿಪು, ಸಂಡಿಗೆ, ಪೆಲಕಾಯಿದ ಹಪ್ಪಳ, ಕಾಯ್ತಿನ ಪುಲಿಕೊಟೆ, ಬೆಯಿಪ್ಪಾಯಿನ ಪೆಲತ್ತರಿ, ಪೊತ್ತುದಿನ ಕುಡುಅರಿ, ಮೀನು ಮಾಂಸದ ಖಾದ್ಯಗಳಾದ ಎಟ್ಟಿ ಚಟ್ನಿ, ಕೊಲ್ಲತ್ತಾರು ಚಟ್ನಿ, ಕಡ್ಲೆ ಬಲ್ಯಾರ್ ಸುಕ್ಕ, ಕೋರಿ ಸುಕ್ಕ, ಕೋರಿ ರೊಟ್ಟಿ, ನುಂಗೆಲ್ ಮೀನ್ದ ಕಜಿಪು, ಸಿಹಿ ಖಾದ್ಯಗಳಾದ ಮನ್ನಿ, ಮೆಂತೆ ಗಂಜಿ, ಪದೆಂಜಿ ಸಲಾಯಿ ಪಾಯ್ಸ, ಪೆಲಕ್ಕಾಯಿ+ಕಡ್ಲೆ ಸಲಾಯಿ ಪಾಯ್ಸ, ಅಲೆ, ಸಂಜೆ ಚಾ, ಗೋಳಿಬಜೆ ಹೀಗೆ 49 ಬಗೆಯ ಖಾದ್ಯಗಳನ್ನೊಳಗೊಂಡಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೂ.349 ಕ್ಕೆ 49 ಬಗೆಯ ‘ಬಂಜಾರ’ ಊಟ:
ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಘಮಘಮಿಸುವ ಆಟಿ ಊಟ, ಸಂಜೆಯ ಉಪಹಾರ ಸೇರಿದಂತೆ 49 ಬಗೆಯ ಬಾಯಿ ಚಪ್ಪರಿಸುವ ತಿಂಡಿ-ತಿನಸುಗಳು ರೂ.349 ದರಕ್ಕೆ ಲಭ್ಯವಿದೆ. ಸ್ಪೆಷಲ್ ಆಟಿ ಬಂಜಾರ ಊಟದ ಕೂಪನ್ ಹೊಟೇಲ್ ಪ್ರಶಾಂತ್ ಮಹಲ್ ನಲ್ಲಿ ಲಭ್ಯವಿದ್ದು ಗ್ರಾಹಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಆಟಿ ಕೂಟವನ್ನು ಯಶಸ್ವಿಗೊಳಿಸಬೇಕು. ಹೆಚ್ಚಿನ ಮಾಹಿತಿಗೆ 08251-450029, 7349349735, 7829347459 ನಂಬರಿಗೆ ಸಂಪರ್ಕಿಸಬಹುದಾಗಿದೆ.