8 ವರ್ಷಗಳ ಹಿಂದಿನ ಅಪಘಾತ ಪ್ರಕರಣ- ಆರೋಪಿ ಬಸ್ ಚಾಲಕ ದೋಷಮುಕ್ತ

0

ಪುತ್ತೂರು:8 ವರ್ಷಗಳ ಹಿಂದೆ ನಡೆದಿದ್ದ ಅಪಘಾತ ಪ್ರಕರಣವೊಂದರ ಆರೋಪಿಯಾಗಿದ್ದ ಬಸ್ ಚಾಲಕನನ್ನು ನ್ಯಾಯಾಲಯ ದೋಷಮುಕ್ತಗೊಳಿಸಿದೆ.
01/11/2015ರಂದು ಉದನೆ ಗ್ರಾಮದ ಉದನೆ ಪೇಟೆ ಎಂಬಲ್ಲಿ ಗುಂಡ್ಯ ಕಡೆಯಿಂದ ಧರ್ಮಸ್ಥಳ ಕಡೆಗೆ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕೆಎಸ್‌ಆರ್‌ಟಿಸಿ ಬಸ್ ಧರ್ಮಸ್ಥಳ ಕಡೆಯಿಂದ ಸುಬ್ರಮಣ್ಯ ಕಡೆಗೆ ಬರುತ್ತಿದ್ದ ಒಮ್ನಿ ಕಾರೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಪ್ರಯಾಣಿಕರೊಬ್ಬರಿಗೆ ತೀವ್ರತರವಾದ ರಕ್ತ ಗಾಯ ಉಂಟಾಗಿ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.ಇತರ ಪ್ರಯಾಣಿಕರಿಗೂ ಗಂಭೀರ ಗಾಯವಾಗಿತ್ತು.ಘಟನೆಗೆ ಸಂಬಂಧಿಸಿ, ಅತಿವೇಗ ಮತ್ತು ನಿರ್ಲಕ್ಷ್ಯತನದ ಚಾಲನೆಯೇ ಘಟನೆಗೆ ಕಾರಣ ಎಂದು ಆರೋಪಿಸಿ ಕೆ.ಎಸ್.ಆರ್.ಟಿ.ಸಿ ಬಸ್ಸಿನ ಚಾಲಕ ಯಲ್ಲಪ್ಪ ದಳವಾಯಿ ಎಂಬವರ ವಿರುದ್ಧ, ರವಿ ಎಂಬವರು ನೀಡಿದ್ದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಸರಕಾರಿ ಅಭಿಯೋಜನೆ ಪರವಾಗಿ ಸುಮಾರು 21 ಸಾಕ್ಷಿಗಳ ಪೈಕಿ 13 ಮಂದಿಯನ್ನು ವಿಚಾರಣೆ ನಡೆಸಿ ಸುಮಾರು 21 ದಾಖಲೆಗಳನ್ನು ತಮ್ಮ ಪರವಾಗಿ ಗುರುತಿಸಿದ್ದು ಸದರಿ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯ ಪರವಾಗಿ ನ್ಯಾಯವಾದಿ ಮಹೇಶ್ ಕಜೆ ಅವರ ವಾದವನ್ನು ಆಲಿಸಿದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ನ್ಯಾಯಾಲಯದ ನ್ಯಾಯಾಧೀಶರಾದ ಶಿವಣ್ಣ ಎಚ್.ಆರ್‌ರವರು ಆರೋಪಿ ಯಲ್ಲಪ್ಪ ದಳವಾಯಿರವರನ್ನು ಪ್ರಕರಣದಿಂದ ದೋಷಮುಕ್ತಿಗೊಳಿಸಿ ಆದೇಶ ನೀಡಿದ್ದಾರೆ.

LEAVE A REPLY

Please enter your comment!
Please enter your name here