ಸುಳ್ಳು ಆರೋಪ ಹೊರಿಸಿ ದೂರು ನೀಡಿದವರ ವಿರುದ್ಧ ಕಾನೂನು ಕ್ರಮಕ್ಕೆ ಎಸ್ಪಿಗೆ ಪ್ರದೀಪ್ ಪಾಂಬಾರು ದೂರು

0

ಪುತ್ತೂರು:ತನಗೆ ಹಲ್ಲೆ ನಡೆಸಿ, ಚಿನ್ನದ ಉಂಗುರ ಹಾಗೂ ನಗದು ದೋಚಿದ ಪ್ರಕರಣಕ್ಕೆ ಸಂಬಂಧಿಸಿ ಅಪರಿಚಿತ ವ್ಯಕ್ತಿಗಳು ತನ್ನ ವಿರುದ್ಧ ಸುಳ್ಳು ಆರೋಪ ಹೊರಿಸಿ ದೂರು ನೀಡಿರುವ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಬೆಂಗಳೂರು ಪಿಆರ್ ಗೋಮ್ಸ್ ರಿಯಲ್ ಎಸ್ಟೇಟ್‌ನ ಮಾಲಕ ಕೊಳ್ತಿಗೆ ನಿವಾಸಿ ಪ್ರದೀಪ್ ಕುಮಾರ್ ರೈ ಪಾಂಬಾರು ಅವರು ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ದೂರು ನೀಡಿದ್ದಾರೆ.

ಜು.18ರಂದು ರಾತ್ರಿ ನಡೆದ ಘಟನೆಯ ಕುರಿತು ಎಸ್ಪಿಯವರಿಗೆ ಮಾಹಿತಿ ನೀಡಲಾಗಿದೆ.ಆದರೆ ಅಪರಿಚಿತ ವ್ಯಕ್ತಿ ಮಹಾವೀರ ಆಸ್ಪತ್ರೆಯಲ್ಲಿ ದಾಖಲಾಗಿ ನನ್ನ ವಿರುದ್ಧ ಸುಳ್ಳು ಆರೋಪ ಹೊರಿಸಿ ದೂರು ನೀಡಿದ್ದಾರೆ.ಆರೋಪಿಯೋರ್ವ ನನ್ನ ಮೇಲೆ ಹಲ್ಲೆ ಮಾಡಿ, ದರೋಡೆ ಮಾಡಿದ್ದ ಸಂದರ್ಭದಲ್ಲೂ ಈತ ಆರೋಪಿಗಳೊಂದಿಗೆ ಆ ಸ್ಥಳದಲ್ಲಿ ಇರಲಿಲ್ಲ.

ಘಟನೆ ಕುರಿತು ನಾನು ನೀಡಿರುವ ದೂರಿಗೆ ವಿರುದ್ಧವಾಗಿ ನನ್ನ ವಿರುದ್ಧ ಸುಳ್ಳು ಆರೋಪದೊಂದಿಗೆ ದೂರು ನೀಡಿರುವುದು ನಾನು ನೀಡಿರುವ ಪ್ರಕರಣವನ್ನು ಕುಂಠಿತಗೊಳಿಸುವ ಉದ್ದೇಶದಿಂದಲೇ ಆಗಿದೆ.ಎದುರುದಾರರು ನನ್ನ ವಿರುದ್ಧ ಆರೋಪಿಸಿರುವ ವಿಚಾರಗಳೆಲ್ಲವೂ ಸತ್ಯಕ್ಕೆ ದೂರವಾಗಿದ್ದು, ಆಧಾರ ರಹಿತವಾಗಿರುತ್ತದೆ.ಎದುರುದಾರರು ಆರೋಪಿಸಿದಂತೆ, ನಾನು ನನ್ನ ಕಾರಿನಲ್ಲಿ ನೆಹರುನಗರದಿಂದ ಮುರಕ್ಕೆ ಹೋಗಿ ಎದುರುದಾರರಿಗೆ ಬೈದು, ಹಲ್ಲೆ ಮಾಡಿ ತೆರಳಿದ್ದರೆ ಆ ಸಮಯದ ಮತ್ತು ಆ ಸ್ಥಳದ ಫೊಟೊಗಳನ್ನು ಅಥವಾ ಸಿ.ಸಿ ಕ್ಯಾಮರಾ ಫೂಟೇಜ್ ಅನ್ನು ಇಲಾಖೆಗೆ ಒಪ್ಪಿಸಿದಲ್ಲಿ ಎದುರುದಾರರ ಸುಳ್ಳು ಪ್ರಕರಣದ ಬಣ್ಣ ಬಯಲಾಗುತ್ತದೆ.

ಆದುದರಿಂದ ಎದುರುದಾರರ ಸುಳ್ಳು ದೂರಿನಲ್ಲಿ ಆರೋಪಿಸಿರುವ ವಿಚಾರದ ಬಗ್ಗೆ ಪೊಲೀಸ್ ಇಲಾಖೆಯಿಂದ ತನಿಖೆಗಾಗಿ ಮಾರ್ಗದ ಬದಿಯಲ್ಲಿರುವ ಅಂಗಡಿ ಕಟ್ಟಡ ಹಾಗೂ ಇನ್ನಿತರ ಸ್ಥಳಗಳಲ್ಲಿ ಅಳವಡಿಸಿರುವ ಸಿ.ಸಿ. ಕ್ಯಾಮೆರವನ್ನು ಪರಿಶೀಲಿಸಿ ಅದರ ಪೂಟೇಜ್‌ಗಳನ್ನು ನೋಡಿ, ಸುಳ್ಳು ಫಿರ್ಯಾದಿಯನ್ನು ನೀಡಿರುವ ಎದುರುದಾರರ ವಿರುದ್ಧ ಕಠಿಣ ಕಾನೂನು ಕ್ರಮವನ್ನು ಕೈಗೊಂಡು ನನಗೆ ನ್ಯಾಯ ಒದಗಿಸಬೇಕು ಎಂದು ಪ್ರದೀಪ್ ಕುಮಾರ್ ರೈ ಪಾಂಬಾರು ಅವರು ಎಸ್ಪಿಯವರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here