ನೇರಳಕಟ್ಟೆ: ಗಾಳಿ ಮಳೆಗೆ ಮರಬಿದ್ದ ಹಿನ್ನೆಲೆ – ಮಾಣಿ-ಕಬಕ ಮಧ್ಯೆ ಹೆದ್ದಾರಿ ಬಂದ್

0

ವಿಟ್ಲ: ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನೇರಳಕಟ್ಟೆ ಬಳಿ ಮರವೊಂದು ರಸ್ತೆಗಡ್ಡವಾಗಿ ಬಿದ್ದ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ತೊಡಕಾಗಿದೆ.
ಗಾಳಿ ಮಳೆಗೆ ಮರದ ಜೊತೆಗೆ ವಿದ್ಯುತ್ ಕಂಬಗಳು ನೆಲಕ್ಕುರುಳಿದೆ.

ಘಟನೆಯಿಂದಾಗಿ ರಸ್ತೆಯ ಎರಡೂ ಕಡೆಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದೆ. ಕೆಲವೊಂದು ವಾಹನಗಳು ಕೊಡಾಜೆ ವೀರಕಂಬ ಮೂಲಕ ಕಲ್ಲಡ್ಕ ತಲುಪಿ ಸಂಚಾರ ನಡೆಸಿದರೆ ಕೆಲವೊಂದು ವಾಹನಗಳು ಕಬಕ ವಿಟ್ಲ ಮೂಲಕ ಕಲ್ಲಡ್ಕ ತಲುಪಿ ಸಂಚಾರ ನಡೆಸಿವೆ. ವಿದ್ಯುತ್ ಇಲಾಖೆ, ಅರಣ್ಯ ಇಲಾಖೆ, ವಿಟ್ಲ ಠಾಣಾ ಪೊಲೀಸರ ತಂಡ ಸ್ಥಳಕ್ಕೆ ತೆರಳಿ ಸ್ಥಳೀಯರೊಂದಿಗೆ ಸೇರಿಕೊಂಡು ತೆರವು ಕಾರ್ಯಾಚರಣೆ ನಡೆಸಿದರು.

LEAVE A REPLY

Please enter your comment!
Please enter your name here