ಪುತ್ತೂರು :ದರ್ಬೆ ಲಿಟ್ಲ್ ಫ್ಲವರ್ ಶಾಲೆಯಲ್ಲಿ ಸ್ಕೌಟ್,ಗೈಡ್ ಕಬ್ ಮತ್ತು ಬುಲ್ ಬುಲ್ ದಳದ ವತಿಯಿಂದ ವನ ಮಹೋತ್ಸವವು ಜು.21ರಂದು ನೆರವೇರಿತು.
ಶಾಲಾ ನಿವೃತ್ತ ಶಿಕ್ಷಕಿ ಡೋರತಿ ಮೇರಿ ಡಿ’ಸೋಜ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾ ಸಂಚಾಲಕಿ ಭಗಿನಿ ಪ್ರಶಾಂತಿ ಬಿ.ಎಸ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರಾಮಚಂದ್ರ ಭಟ್, ಶಾಲಾ ಸುರಕ್ಷಾ ಸಮಿತಿ ಅಧ್ಯಕ್ಷ ಸತೀಶ್ ಆರ್, ರಕ್ಷಕ ಶಿಕ್ಷಕ ಸಂಘದ ಸದಸ್ಯ ಪ್ರವೀಣ್ ಕುಂಬ್ರ ಹಾಗು ಶಾಲಾ ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ. ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗೈಡ್ ವಿದ್ಯಾರ್ಥಿನಿ ಫಾತಿಮತ್ ಸನ ವನಮಹೋತ್ಸವದ ಕುರಿತು ಭಾಷಣ ಮಾಡಿದರು. ಶಾಲಾ ಗೈಡ್ಸ್ ವಿದ್ಯಾರ್ಥಿಗಳು ಪ್ರಾರ್ಥಸಿದರು. ಗೈಡ್ ಶಿಕ್ಷಕಿ ದೀಕ್ಷಾ ಸ್ವಾಗತಿಸಿ. ಬುಲ್ ಬುಲ್ ಶಿಕ್ಷಕಿ ಮಮತಾ ವಂದಿಸಿದರು.
ಸ್ಕೌಟ್ ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮ ಬಳಿಕ ವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು. ಸ್ಕೌಟ್ ,ಗೈಡ್, ಕಬ್ ಮತ್ತು ಬುಲ್ ಬುಲ್ ಮಕ್ಕಳಿಂದ ದರ್ಬೆ ವೃತ್ತದ ಮೂಲಕ ಆಕರ್ಷಕ ಪಥ ಸಂಚಲನ ನಡೆಯಿತು. ಗೈಡ್ ಶಿಕ್ಷಕಿ ವಿಲ್ಮಾ ಫೆರ್ನಾಂಡೀಸ್, ಬುಲ್ ಬುಲ್ ಶಿಕ್ಷಕಿ ಜೋಸ್ಲಿನ್ ಪಾಯಸ್, ಗೈಡ್ ಶಿಕ್ಷಕಿ ನಳಿನಾಕ್ಷಿ , ಕಬ್ ಶಿಕ್ಷಕಿ ಸುಶ್ಮಿತಾ ಹಾಗೂ ಸ್ಕೌಟ್ ಶಿಕ್ಷಕಿ ಭವ್ಯ ಸಹಕರಿಸಿದರು.