ಫಿಲೋಮಿನಾ ಪಿ.ಯು ಕಾಲೇಜಿನಲ್ಲಿ ಇಂಟರ‍್ಯಾಕ್ಟ್ ಕ್ಲಬ್ ಪದಗ್ರಹಣ ಸಮಾರಂಭ

0

ಪುತ್ತೂರು: ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ರೋಟರಿ ಕ್ಲಬ್ ಪುತ್ತೂರು ಸಿಟಿ ಪ್ರಾಯೋಜಕತ್ವದ ಇಂಟರ‍್ಯಾಕ್ಟ್ ಕ್ಲಬ್‌ನ ಪದಗ್ರಹಣ ಕಾರ್ಯಕ್ರಮವು ಜು.21ರಂದು ಕಾಲೇಜು ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಜಿಲ್ಲಾ ಇಂಟರ‍್ಯಾಕ್ಟ್ ಕ್ಲಬ್‌ನ ಅಧ್ಯಕ್ಷರಾದ ಮಂಜುನಾಥ ಆಚಾರ್ಯ ಮಾತಾನಾಡಿ ವಿದ್ಯಾರ್ಥಿಗಳು ಸಮಾಜದಲ್ಲಿನ ಅಗತ್ಯತೆಯನ್ನು ಅರಿತುಕೊಂಡು ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ರೋಟರಿ ಕ್ಲಬ್ ಸಮಾಜದ ಸೇವೆಗೆ ಮಾದರಿಯಾಗಿದೆ ಎಂದು ರೋಟರಿ ಸಂಸ್ಥೆಯ ಕಾರ್ಯವ್ಯಾಪಿ, ಉದ್ದೇಶದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.

ಇನ್ನೋರ್ವ ಮುಖ್ಯ ಅತಿಥಿಗಳಾದ ಕಾಲೇಜಿನ ಪ್ರಾಂಶುಪಾಲ ರೆ.ಫಾ ಅಶೋಕ್ ರಾಯನ್ ಕ್ರಾಸ್ತಾ ಮಾತಾನಾಡಿ, ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣವನ್ನು ಬೆಳೆಸಲು ರೋಟರಿ ಕ್ಲಬ್‌ನಂತಹ ಸಂಸ್ಥೆಗಳು ಸಹಕಾರಿಯಾಗಿದೆ. ಕಲಿಕೆಯ ಜೊತೆಗೆ ಸಮಾಜ ಸೇವೆಯಲ್ಲಿಯೂ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿ ಕೊಳ್ಳಬೇಕು. ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಇದು ಸಹಕಾರಿಯಾಗಿದೆ ಎಂದರು.

ಜೋನ್ 4ರ ಅಸಿಸ್ಟೆಂಟ್ ಗರ್ವನರ್ ಲಾರೆನ್ಸ್ ಗೊನ್ಸಾಲ್ವಿಸ್ ಮಾತಾನಾಡಿ ವಿದ್ಯಾರ್ಥಿಗಳು ಉತ್ತಮ ಭಾಂದವ್ಯವನ್ನು ಬೆಳೆಸಲು ಈ ಸಂಸ್ಥೆಗಳು ಉತ್ತಮ ತಳಹದಿಯಾಗಿದೆ ಎಂದು ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅಂಚಿತ್ ಮಾತಾನಾಡಿ ರೋಟರಿ ಕ್ಲಬ್‌ನ ಉದ್ದೇಶವು ತನ್ನನ್ನು ಸಮಾಜಸೇವೆಯಲ್ಲಿ ತೊಡಗಸಿಕೊಳ್ಳುವಂತೆ ಮಾಡಿದೆ. ಎಂದು ರೋಟರಿ ಕ್ಲಬ್‌ನ ತನ್ನ ಅನುಭವಗಳನ್ನು ಹಂಚಿಕೊಂಡರು. ವೇದಿಕೆಯಲ್ಲಿ ರೋಟರಿಕ್ಲಬ್ ಪುತ್ತೂರು ಸಿಟಿಯ ಜೊತೆ ಕಾರ್ಯದರ್ಶಿಯಾದ ದಯಾನಂದ ಕೆ.ಎಸ್ ಮತ್ತು ರೋಟರಿ ಕ್ಲಬ್ ಪುತ್ತೂರು ಸಿಟಿಯ ಇಂಟರ‍್ಯಾಕ್ಟ್ ಕ್ಲಬ್‌ನ ಅಧ್ಯಕ್ಷ ಜೆರೋಮಿಸ್ ಪಾಯಸ್ ಉಪಸ್ಥಿತರಿದ್ದರು. ರೋಟರಿಕ್ಲಬ್ ಪುತ್ತೂರು ಸಿಟಿಯ ಪದಾಧಿಕಾರಿಗಳು, ಸರ್ವಸದಸ್ಯರು, ಕಾಲೇಜಿನ ಬೋಧಕ, ಬೋಧಕೇತರ ವರ್ಗ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರದರ್ಶನ ಕಲಾ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥಿಸಿ, ರೋಟರಿ ಕ್ಲಬ್ ಪುತ್ತೂರು ಸಿಟಿಯ ಅಧ್ಯಕ್ಷ ಗ್ರೇಸಿ ಗೊನ್ಸಾಲ್ವಿಸ್ ಸ್ವಾಗತಿಸಿ ನೂತನ ಇಂಟರ‍್ಯಾಕ್ಟ್ ಕ್ಲಬ್‌ನ ಪದಾಧಿಕಾರಿಗಳಿಗೆ ಪ್ರಮಾಣವಚನವನ್ನು ಬೋಧಿಸಿದರು. ನೂತನ ಇಂಟರ‍್ಯಾಕ್ಟ್‌ನ ಕಾರ್ಯದರ್ಶಿ ತನುಶ್ರೀ ವಂದಿಸಿ, ಇನ್‌ಸ್ಟಿಟ್ಯೂಷನಲ್ ಸರ್ವಿಸ್ ನಿರ್ದೇಶಕ ಪ್ರತೀಕ್ಷ ಕಾರ್ಯಕ್ರಮ ನಿರೂಪಿಸಿದರು.

ಇಂಟರ‍್ಯಾಕ್ಟ್ ಕ್ಲಬ್‌ನ ನೂತನ ಅಧ್ಯಕ್ಷರಾಗಿ ವಿದ್ಯಾರ್ಥಿಗಳಾದ ಅಂಚಿತ್, ಉಪಾಧ್ಯಕ್ಷರಾಗಿ ಭವತ್, ಕಾರ್ಯದರ್ಶಿಯಾಗಿ ತನುಶ್ರೀ, ಜತೆ ಕಾರ್ಯದರ್ಶಿಯಾಗಿ ರಿತೇಶ್, ಕೋಶಾಧಿಕಾರಿಯಾಗಿ ತೇಜಸ್ವಿ, ಸಾರ್ಜಂಟ್ ಎಟ್ ಆಮ್ಸ್ ಆಗಿ ಎಂ ಆತ್ಮಿ, ಕ್ಲಬ್ ಸರ್ವೀಸ್ ನಿರ್ದೇಶಕರಾಗಿ ಆಕಾಶ್ ಸಾಲ್ಯಾನ್, ಇನ್‌ಸ್ಟಿಟ್ಯೂಷನಲ್ ಸರ್ವೀಸ್ ನಿರ್ದೇಶಕರಾಗಿ ಪ್ರತೀಕ್ಷ, ಕಮ್ಯೂನಿಟಿ ಸರ್ವೀಸ್ ನಿರ್ದೇಶಕರಾಗಿ ವರುಣ್, ಇಂಟರ್‌ನ್ಯಾಷನಲ್ ಸರ್ವೀಸ್ ನಿರ್ದೇಶಕರಾಗಿ ಗ್ಯಾನ್, ಇಂಟರ‍್ಯಾಕ್ಟ್ ಕ್ಲಬ್‌ನ ಸಂಯೋಜಕರಾಗಿ ಉಪನ್ಯಾಸಕಿಯರಾದ ಸತ್ಯಲತಾ ರೈ ಎಂ ಮತ್ತು ಸುಮಾ ಡಿ ಆಯ್ಕೆಯಾದರು.

LEAVE A REPLY

Please enter your comment!
Please enter your name here