ಸೌತ್ ಕೋರಿಯಾ ವಿಶ್ವ ಜಾಂಬೂರಿಯಲ್ಲಿ ಫಿಲೋಮಿನಾ ಪಿಯು ವಿದ್ಯಾರ್ಥಿಗಳು

0

ಪುತ್ತೂರು: ಸೌತ್ ಕೋರಿಯಾದಲ್ಲಿ ಅ.2ರಿಂದ ಅ.12ರ ವರೆಗೆ ನಡೆಯುವ 25ನೇ ಅಂತರಾಷ್ಟ್ರೀಯ ಸ್ಕೌಟ್ಸ್ ಗೈಡ್ಸ್ ಜಾಂಬೂರಿಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾರ್ಥನಾ ಬಿ, ಸಮೃದ್ಧಿ ಚೌಟ, ಮತ್ತು ಬಿ.ಎಸ್ ಅಫ್ಸಲ್ ಇವರು ಭಾಗವಹಿಸಲಿದ್ದಾರೆ.

ಪ್ರಥಮ ವಿಜ್ಞಾನ ವಿಭಾಗದ ಪ್ರಾರ್ಥನಾ ಬಿ. ಇವರು ದರ್ಬೆ ಪ್ರಕಾಶ್ ಡೆಂಟಲ್ ಕ್ಲಿನಿಕ್‌ನ ಡಾ.ಶ್ರೀಪ್ರಕಾಶ್ ಬಿ ಇವರ ಪುತ್ರಿ, ಪ್ರಥಮ ವಾಣಿಜ್ಯ ವಿಭಾಗದ ಎ. ಸಮೃದ್ಧಿ ಚೌಟ ಸರ್ವೆ ನಿವಾಸಿ ಪುಷ್ಪರಾಜ್ ಹಾಗೂ ಪ್ರೇಮ ದಂಪತಿಗಳ ಪುತ್ರಿ., ದ್ವಿತೀಯ ವಿಜ್ಞಾನ ವಿಭಾಗದ ಬಿ.ಎಸ್ ಅಫ್ಸಲ್ ಪರ್ಲಡ್ಕ ನಿವಾಸಿ ಬಿ.ಎಸ್ ಮಹಮ್ಮದ್ ಇಕ್ಭಾಲ್ ಮತ್ತು ಶಮೀರ ಎಂ. ಐ ದಂಪತಿಗಳ ಪುತ್ರ.
ಕಾಲೇಜಿನ ಪ್ರಾಂಶುಪಾಲ ರೆ.ಫಾ ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿ ಶುಭಹಾರೈಸಿದರು. ರೋವರ‍್ಸ್ ರೇಂಜರ‍್ಸ್‌ನ ಸಂಯೋಜಕರಾದ ಶರತ್ ಆಳ್ವ, ಚಂದ್ರಾಕ್ಷ ಮತ್ತು ಪೂರ್ಣಿಮ ಡಿ.ಎಸ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here