*ಸುದ್ದಿ ವರದಿ ಫಲಶುತಿ
ಪುತ್ತೂರು: ಪುತ್ತೂರು ಕುಂಬ್ರ-ಬೆಳ್ಳಾರೆ ರಾಜ್ಯ ರಸ್ತೆಯಲ್ಲಿ ಕುಂಬ್ರದಿಂದ ಒಂದೂವರೆ ಕಿ.ಮೀ ದೂರದ ಸಾರೆಪುಣಿ ಕೊಲ್ಲಾಜೆಯಲ್ಲಿ ರಸ್ತೆ ಬದಿಯಲ್ಲಿದ್ದ ಅಪಾಯಕಾರಿ ಮರವನ್ನು ಅರಣ್ಯ ಇಲಾಖಾ ಅಧಿಕಾರಿಗಳು ಮೆಸ್ಕಾಂ ಅಧಿಕಾರಿಗಳ ಸಹಕಾರದೊಂದಿಗೆ ತೆರವುಗೊಳಿಸಿದ್ದಾರೆ. ಬಹಳ ಹಳೆಯ ಮರ ಇದಾಗಿದ್ದು ರಸ್ತೆಗೆ ವಾಲಿ ನಿಂತಿತ್ತು. ಈ ಮರದಡಿಯಿಂದಲೇ ವಿದ್ಯುತ್ ತಂತಿ ಕೂಡ ಹಾದು ಹೋಗಿತ್ತು ಅಲ್ಲದೆ ಮರದ ಬುಡದಲ್ಲೇ ಬಸ್ಸು ತಂಗುದಾಣವಿದ್ದು ಮರ ಎಲ್ಲಾದರೂ ಬಿದ್ದರೆ ಜೀವ ಹಾನಿ ಸಂಭವಿಸುವ ಸಾಧ್ಯತೆ ಇರುವ ಬಗ್ಗೆ ಸುದ್ದಿ ಬಿಡುಗಡೆ ವರದಿ ಬಿತ್ತರಿಸಿತ್ತು. ವರದಿಗೆ ಸ್ಪಂದಿಸಿದ ಅರಣ್ಯ ಇಲಾಖಾ ಅಧಿಕಾರಿಗಳು ಮರವನ್ನು ತೆರವುಗೊಳಿಸಿದ್ದಾರೆ. ಅರಣ್ಯಾಧಿಕಾರಿ ಕಿರಣ್, ಬೀಟ್ ಫಾರೆಸ್ಟರ್ಗಳಾದ ಲಿಂಗರಾಜ್, ದೇವಪ್ಪ, ಕುಂಬ್ರ ಮೆಸ್ಕಾಂ ಜೆ.ಇ ರವೀಂದ್ರ, ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ನಿರ್ದೇಶಕ ಕೃಷ್ಣ ಕುಮಾರ್ ರೈ ಕೆದಂಬಾಡಿಗುತ್ತು, ಅರಿಯಡ್ಕ ಗ್ರಾಪಂ ಸದಸ್ಯ ರಾಜೇಶ್ ಮಣಿಯಾಣಿ ಹಾಗೂ ಮೆಸ್ಕಾಂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.