ಪುತ್ತೂರು: ನಾನು ಕೂಡಾ ಬಿಲ್ಲವ. ನಮ್ಮ ಬಿಲ್ಲವ, ಈಡಿಗ, ನಾಮದಾರಿ ಸಮಾಜಕ್ಕೆ ಯಾವುದೇ ತರದ ಅನ್ಯಾಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾಗಲಿ, ಕಾಂಗ್ರೆಸ್ ಆಗಲಿ ಮಾಡಿಲ್ಲ. ನಮ್ಮ ಸಮಾಜಕ್ಕೆ ಪ್ರಾತಿನಿಧ್ಯ ಕಾಂಗ್ರೆಸ್ ನೂರಕ್ಕೆ ನೂರು ನೀಡಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಅವರು ಮಂಗಳೂರಿನಲ್ಲಿ ಬಿಲ್ಲವ ಮುಖಂಡರ ಸಭೆಯಲ್ಲಿ ಹೇಳಿದ ಮಾತಿಗೆ ಪುತ್ತೂರಿನಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷಾರತ ಇಲಾಖೆ ಸಚಿವ ಮಧು ಬಂಗಾರಪ್ಪ ಅವರು ಪತ್ರಿಕಾ ಮಾದ್ಯಮದವರ ಪ್ರಶ್ನೆಗೆ ಉತ್ತಿರಿಸಿದ್ದಾರೆ.
ಜು.22ರಂದು ಅವರು ಪುತ್ತೂರು ಗೆಜ್ಜೆಗಿರಿ ಕ್ಷೇತ್ರಕ್ಕೆ ತೆರಳುವ ಮುಂದೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ಚುನಾವಣಾ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯ ಬಳಿಕ ಮಾತನಾಡಿದರು. ಕಾಂಗ್ರೆಸ್ ನಮ್ಮ ಸಮಾಜಕ್ಕೆ ಪ್ರಾತಿನಿಧ್ಯ ನೀಡಿದೆ. ಕರಾವಳಿ ಭಾಗಕ್ಕೆ ನಿಗಮವನ್ನು ನೀಡಲಿದೆ. ಬಿಲ್ಲವ, ಈಡಿಗರ, ದೀವರ ಸಮಾಜಕ್ಕೆ ಯಾವುದೇ ಅನ್ಯಾಯವನ್ನು ಕಾಂಗ್ರೆಸ್ ಸರಕಾರ ಮಾಡಿಲ್ಲ. ಕಡೆಗಣಿಸಿಯೂ ಇಲ್ಲ. ಕಡೆಗಣಿಸಲು ನಾವು ಬಿಡುವುದೂ ಇಲ್ಲ. ಇದರ ಜೊತೆಗೆ ನಾನು ಇಲ್ಲಿ ಅಧಿಕಾರದಲ್ಲಿರುವಾಗ ಆ ತರದ ಪ್ರಶ್ನೆ ಉದ್ಭವವೂ ಆಗುವುದಿಲ್ಲ. ಬಿ.ಕೆ.ಹರಿಪ್ರಸಾದ್ ಅವರು ಯಾವ ಭಾವನೆಯಿಂದ ಮಾತನಾಡಿದ್ದಾರೆ ಎಂದು ಗೊತ್ತಿಲ್ಲ. ಅವರಲ್ಲಿ ಚರ್ಚೆ ಮಾಡುತ್ತೇವೆ. ನಾನು ಅವರ ಹೇಳಿಕೆಯನ್ನು ಕೇಳಿದ್ದೇನೆ. ಅವರು ಸಿದ್ದರಾಮಯ್ಯ ಅವರಿಗೆ ಹೇಳಿದ ಮಾತಲ್ಲ ಎಂದವರು ಹೇಳಿದರು.