





ಹಿರೇಬಂಡಾಡಿ: ಸರಕಾರಿ ಪ್ರೌಢಶಾಲೆ ಹಿರೇಬಂಡಾಡಿ ಇಲ್ಲಿ ಶಾಲಾ ಮುಖ್ಯಶಿಕ್ಷಕ ಹರಿಕಿರಣ್ ಕೆ ಅವರ ಅಧ್ಯಕ್ಷತೆಯಲ್ಲಿ ನಡೆದ ಹಿರಿಯ ವಿದ್ಯಾರ್ಥಿ ಸಂಘದ ಮಹಾಸಭೆಯಲ್ಲಿ 2023-25ನೇ ಸಾಲಿಗೆ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.



ಅಧ್ಯಕ್ಷರಾಗಿ ಜಯಂತ, ಉಪಾಧ್ಯಕ್ಷರಾಗಿ ಗಣ್ಯಶ್ರೀ, ಕಾರ್ಯದರ್ಶಿಯಾಗಿ ಮುಜಿತಬ, ಜೊತೆ ಕಾರ್ಯದರ್ಶಿಯಾಗಿ ಹರಿಣಾಕ್ಷಿ, ಕೋಶಾಧಿಕಾರಿಯಾಗಿ ಪ್ರಜನ್, ಕ್ರೀಡಾ ಕಾರ್ಯದರ್ಶಿಯಾಗಿ ಕಿರಣ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶ್ರೀರಕ್ಷಾ, ಸಂಘಟನಾ ಕಾರ್ಯದರ್ಶಿಯಾಗಿ ವಿಕಾಸ್, ಯಕ್ಷಿತ ಹಾಗೂ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಸುಮಂತ್, ಗಗನ್, ಸೃಜನ್, ಕೃತಿ, ಕಾವ್ಯಶ್ರೀ ವಳಕಡಮ ಮತ್ತು ಪ್ರಾರ್ಥನಾರವರು ಆಯ್ಕೆಯಾದರು. ದೈಹಿಕ ಶಿಕ್ಷಣ ಶಿಕ್ಷಕ ಸೀತಾರಾಮ ಗೌಡ ಬಿ., ಇಂಗ್ಲೀಷ್ ಭಾಷಾ ಶಿಕ್ಷಕ ವಸಂತ ಕುಮಾರ್ ಪಲ್ಲಡ್ಕ ಉಪಸ್ಥಿತರಿದ್ದರು.












