ಬಪ್ಪಳಿಗೆಯಲ್ಲಿ ಹಿಜರೀ ಹೊಸ ವರ್ಷಾಚರಣೆ

0

ಮುಹರ್ರಂ ತಿಂಗಳ ಮಹತ್ವ, ಆಶೂರಾ ದಿನದ ಆಚಾರಕರ್ಮಗಳ ಕಿರು ಪುರವಣಿ ಬಿಡುಗಡೆ
ಮುಹರ್ರಮ್ ತಿಂಗಳಿನಿಂದಲೇ ಬದುಕನ್ನು ಬದಲಾವಣೆಗೆ ತೆರೆದಿಡುವ ಭಾಗ್ಯವಂತರಾಗೋಣ -ಬಪ್ಪಳಿಗೆ ಫೈಝಿ

ಬಪ್ಪಳಿಗೆ: ಪ್ರವಾದಿ (ಸ.ಅ.)ರ ಹಿಜ್ರಾವನ್ನು ಆಧರಿಸಿ ರೂಪಿಸಲಾದ ಹಿಜರೀ ಕಾಲಗಣನೆ ಪ್ರಕಾರ ಬರುವ ಮೊದಲನೇ ತಿಂಗಳು ಮುಹರ್ರಂ ತಿಂಗಳಾಗಿದೆ. ನವ ವರ್ಷದ ಆಗ ಮನದ ಮೂಲಕ ಆಯುಷ್ಯದ ವರ್ಷವೊಂದನ್ನು ಕಳೆದುಕೊಳ್ಳುತ್ತಿದ್ದೇವೆಂಬ ವಾಸ್ತವವನ್ನು ಒಳಗೊಂಡ ಬಳಿಕ ಉಳಿದಿರುವುದು ಹಳೆ ಬದುಕಿನ ಅವಲೋಕನ ಮತ್ತು ಹೊಸ ಬದುಕಿನ ಮರು ಸಂಯೋಜನೆಯಾಗಿದೆ. ಮಾನವ ಜಗತ್ತಿನ ಇತಿಹಾಸದಲ್ಲಿ ನಿರ್ಣಾಯಕ ಘಟನೆಗಳಿಗೆ ಸಾಕ್ಷಿಯಾಗಿರುವ ಮುಹರ್ರಂನ ಪ್ರಾರಂಭದಿಂದಲೇ ಬದುಕನ್ನು ಬದಲಾವಣೆಗೆ ತೆರೆದಿಡುವ ಭಾಗ್ಯವಂತರಾಗೋಣ ಎಂದು ಬಪ್ಪಳಿಗೆ ಮಸೀದಿಯ ಖತೀಬರಾದ ಬಹು ಸಿರಾಜುದ್ದೀನ್ ಫೈಝಿ ನುಡಿದರು. ಅವರು ಅನ್ಸಾರುಲ್ ಇಸ್ಲಾಂ ಯುವಕ ಸಮಿತಿ ಹಾಗೂ ಬಪ್ಪಳಿಗೆ ಮದ್ರಸ ವಿದ್ಯಾರ್ಥಿಗಳ ಸಂಘಟನೆಯಾದ SKSBV ಆಶ್ರಯದಲ್ಲಿ ಹಿಜರೀ ಹೊಸ ವರ್ಷಾಚರಣೆ ಪ್ರಯುಕ್ತ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಮಸೀದಿ ಅಧ್ಯಕ್ಷ ಅಬ್ದುಲ್ ಹಮೀದ್ ಹಾಜಿ ಲವ್ಲಿ ಅಧ್ಯಕ್ಷತೆ ವಹಿಸಿದ್ದರು.ಮದ್ರಸ ಮುಖ್ಯೋಪಾಧ್ಯಯರೂ ಮಸೀದಿ ಸಹಾಯಕ ಖತೀಬರೂ ಆದ ಬಹು ಶಾಫಿ ಮೌಲವಿ ಸಂದೇಶ ನೀಡುತ್ತಾ ಸಜ್ಜನರಿಗೆ ಸಹಾಯಕವಾದ ನಿರ್ಮಾಣ ಮತ್ತು ನಿರ್ನಾಮದ ಗತ ಚರಿತ್ರೆಯ ನೆನಪುಗಳ ಮುಹರ್ರಂ ತಿಂಗಳೊಂದಿಗೆ ಹೊಸ ವರ್ಷಾಗಮಿಸಿದೆ. ಈ ತಿಂಗಳಲ್ಲಿ ಒಂಭತ್ತು ಹಾಗೂ ಹತ್ತನೇ ದಿನವನ್ನು ಸತ್ಕರ್ಮಗಳಿಂದ ಧನ್ಯಗೊಳಿಸಬೇಕು. ಉಪವಾಸಕ್ಕೆ ಬಹಳ ಪ್ರಾಧಾನ್ಯತೆ ಇದೆ. ಸಹಾಬಿಗಳು ಆಶೂರಾ ಉಪವಾಸವನ್ನು ಬಹಳ ಮಹತ್ವದ ದೃಷ್ಟಿಯಿಂದಲೇ ಆಚರಿಸುತ್ತಿದ್ದು, ಮಕ್ಕಳಿಗೂ ಅಂದಿನ ಉಪವಾಸದ ತರಬೇತು ನೀಡುತ್ತಿದ್ದರು. ಕುಟುಂಬಿಕರಲ್ಲಿ ವಿಶೇಷ ವಿಶಾಲತೆಯನ್ನು ತೋರುತ್ತಿದ್ದರು ಎಂದರು.

ಕಿರು ಪುರವಣಿ ಬಿಡುಗಡೆ: ಮುಹರ್ರಂ ಹತ್ತು ಆಶೂರಾದಿನದ ಮಹತ್ವ ಹಾಗೂ ಆ ದಿನದಲ್ಲಿ ನಿರ್ವಹಿಸಬೇಕಾದ ಆಚಾರಕರ್ಮಗಳ ಬಗ್ಗೆ ಸ್ಥಳೀಯ ಯುವಕ ಸಮಿತಿ ಹಾಗೂ ಮದ್ರಸ ವಿದ್ಯಾರ್ಥಿಗಳ ಸಂಘಟನೆಯಾದ SKSBV ಹೊರತಂದ ಕಿರು ಪುರವಣಿಯನ್ನು ಮಸೀದಿ ಅಧ್ಯಕ್ಷರಾದ ಅಬ್ದುಲ್ ಹಮೀದ್ ಹಾಜಿ ಲವ್ಲಿ ಯವರು ಯುವಕ ಸಮಿತಿ ಅಧ್ಯಕ್ಷ ಮೋನು ಬಪ್ಪಳಿಗೆಯವರಿಗೆ ನೀಡಿ ಬಿಡುಗಡೆ ಗೊಳಿಸಿದರು.
ಮಸೀದಿಯ ಮಾಜಿ ಅಧ್ಯಕ್ಷರುಗಳಾದ ಬಿ.ಹೆಚ್.ಮುಹಮ್ಮದ್ ಹಾಜಿ, ದಾವೂದ್ ಡಿ.ಎ., ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಯು.ಕೆ., ಮದ್ರಸ ಅಧ್ಯಾಪಕ ತಮೀಂ ಅನ್ಸಾರಿ, ಉಮರ್ ಮುಸ್ಲಿಯಾರ್,. ಯುವಕ ಸಮಿತಿಯ ನೂರುದ್ದೀನ್ ಬಿ.ಹೆಚ್., ಹಾರೂನ್ ರಶೀದ್, ಮೊದಲಾದವರು ಉಪಸ್ಥಿತರಿದ್ದರು. ಮದ್ರಸ ಅಧ್ಯಾಪಕ ಅಬ್ದುಲ್ ರವೂಫ್ ಮನ್ನಾನಿ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here