ಸ್ವಸಹಾಯ ಸಂಘಗಳ ಚಟುವಟಿಕೆಗಳ ನಿಗಾ ಇಡಲು ಲೋಕೋಸ್  ಆ್ಯಪ್‌ 

0

ಪುತ್ತೂರು, ಕಡಬದಲ್ಲಿ ಮಾಹಿತಿ ಅಪ್‌ಲೋಡ್‌ಗೆ ಬಾಕಿ

ಪುತ್ತೂರು:ಗ್ರಾಮೀಣ ಅಭಿವೃದ್ಧಿ ಸಚಿವಾಲಯ ರಾಜ್ಯದ ಸಂಜೀವಿನಿ ಸ್ವಸಹಾಯ ಸಂಘಗಳ ಸಮಗ್ರ ಮಾಹಿತಿಯನ್ನು ಪಡೆಯಲು, ನಿಗಾ ಇಡಲು ಹಾಗು ಪಾರದರ್ಶಕತೆಯನ್ನು ಖಾತರಿ ಪಡಿಸಲು ಲೋಕೋಸ್ ಆ್ಯಪ್‌  ಅನ್ನು ಅಭಿವೃದ್ಧಿಪಡಿಸಲಾಗಿದ್ದು, ಈ  ಆ್ಯಪ್‌  ನಲ್ಲಿ ಸಂಜೀವಿನಿ ಸ್ವಹಾಯ ಸಂಘಗಳು ತಮ್ಮ ಸಂಘದ ಮಾಹಿತಿ ಅಪ್‌ಲೋಡ್ ಮಾಡಬೇಕಾಗಿದೆ.ಪುತ್ತೂರು ಕಡಬದಲ್ಲಿ ಬಹುತೇಕ ಸಂಘಗಳು ಮಾಹಿತಿ ನೀಡದೆ  ಆ್ಯಪ್‌ ಲೋಡ್‌ಗೆ ಬಾಕಿ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ.


ಲೋಕೋಸ್  ಆ್ಯಪ್‌ ನಿಂದ ಸ್ವಸಹಾಯ ಸಂಘದಲ್ಲಿ ಸದಸ್ಯರ ಉಳಿತಾಯ ಸಾಲ ವಿತರಣೆ, ಮರುಪಾವತಿ ಬಗ್ಗೆ ತಾಲೂಕಿನಿಂದ ಹಿಡಿದು ಕೇಂದ್ರ ಸರಕಾರದ ತನಕ ಮಾಹಿತಿ ಲಭ್ಯವಾಗುತ್ತದೆ. ಸದಸ್ಯರು ಸರಿಯಾದ ಸಮಯಕ್ಕೆ ಮರುಪಾವತಿ ಮಾಡುತ್ತಿದ್ದರೆ ಸ್ವ ಉದ್ಯೋಗಕ್ಕೆ ಸಮರ್ಪಕವಾದ ಮಾಹಿತಿ ನೀಡುವುದು.ಸರಕಾರದಿಂದ ಸಿಗುವ ಸಬ್ಸಿಡಿ, ಸದಸ್ಯರ ಅಭಿವೃದ್ಧಿಗೆ ಬೇಕಾದ ಮಾಹಿತಿಯನ್ನು  ಆ್ಯಪ್‌  ಮೂಲಕ ಸಂಗ್ರಹಿಸಿ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಲು ಇದು ಸಹಕಾರಿಯಾಗುತ್ತದೆ.


ಸಮಗ್ರ ಮಾಹಿತಿ:
ಲೋಕೋಸ್  ಆ್ಯಪ್‌ ಮೂಲಕ, ಸ್ವಸಹಾಯ ಸಂಘದಲ್ಲಿ ಲೋಪ ಕಂಡು ಬಂದರೆ ಪರಿಶೀಲಿಸಿ ಸೂಕ್ತ ಕ್ರಮ ಕುರಿತು ಸಂಘದ ಸದಸ್ಯರಿಗೆ ಮಾಹಿತಿ ನೀಡಲು ಸಾಧ್ಯವಾಗುತ್ತದೆ.ಸರಕಾರದಿಂದ ಸಿಗುವ ಅನುದಾನದ ಬಗ್ಗೆ ಸಮಗ್ರ ಮಾಹಿತಿ ದೊರೆಯುತ್ತದೆ.ಸಾಮಾಜಿಕ ಭದ್ರತೆ ಯೋಜನೆಗಳೊಂದಿಗೆ ಸದಸ್ಯರ ಪಾಲ್ಗೊಳ್ಳುವಿಕೆ ಹಾಗು ಸ್ಥಿತಿಗತಿಯನ್ನು ತಿಳಿಯಲು  ಆ್ಯಪ್‌  ಸಹಕಾರಿಯಾಗಿದೆ. ಸಾಮಾಜಿಕ ಭದ್ರತಾ ಯೋಜನೆಗಳಾದ ಪ್ರಧಾನಮಂತ್ರಿ ಜೀವನ್ ಜ್ಯೋತಿ ವಿಮೆ, ಪ್ರಧಾನಮಂತ್ರಿ ಸುರಕ್ಷಾ ವಿಮೆ, ಅಟಲ್ ಪಿಂಚಣಿ, ಆರೋಗ್ಯ ವಿಮೆ, ಜಾನುವಾರುಗಳ ವಿಮೆ ಯೋಜನೆಗಳನ್ನು ಸಂಘದ ಸದಸ್ಯರು ಮಾಡಿಸಿರದಿದ್ದರೆ  ಆ್ಯಪ್‌  ನಲ್ಲಿ ತಿಳಿಯುತ್ತದೆ.

ಪುತ್ತೂರಿನಲ್ಲಿ 766 ಸಂಘಗಳಿದ್ದು, 8,728 ಸದಸ್ಯರಿದ್ದಾರೆ. ಕಡಬದಲ್ಲಿ 865 ಸಂಘಗಳಿದ್ದು, 9,933 ಸದಸ್ಯರಿದ್ದಾರೆ.ಆದರೆ ಇಲ್ಲಿನ ತನಕ 269 ಸಂಘ ಮಾತ್ರ ಲೋಕೋಸ್ ಆಪ್‌ಗೆ ಮಾಹಿತಿ ಅಪ್‌ಲೋಡ್ ಮಾಡಿದೆ ಎಂದು ಎನ್.ಆರ್.ಎಲ್.ಎಂನ ವಲಯ ಮೇಲ್ವಿಚಾರಕಿ ನಮಿತಾ ತಿಳಿಸಿದ್ದಾರೆ

LEAVE A REPLY

Please enter your comment!
Please enter your name here