ವಿಟ್ಲ: ವಿವಿಧ ದೇಶಗಳ ಸಂಸ್ಕೃತಿಯನ್ನು ಬಿಂಬಿಸುವ ನಿಟ್ಟಿನಲ್ಲಿ ಆಗಸ್ಟ್ 1ರಿಂದ 12ರ ವರೆಗೆ ದಕ್ಷಿಣ ಕೊರಿಯಾದಲ್ಲಿ ನಡೆಯಲಿರುವ ಸ್ಕೌಟ್ & ಗೈಡ್ ವಿಶ್ವ ಜಾಂಬೂರಿ ಉತ್ಸವಕ್ಕೆ ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲಾ ಹತ್ತನೇ ತರಗತಿಯ ವಿದ್ಯರ್ಥಿಗಳಾದ ಸೃಜನಾ ರೈ ಎ.,ಹಾಗೂ ಅನಿಶ್ ಕೃಷ್ಣ ಆಚಾರ್ ರವರು ಆಯ್ಕೆಯಾಗಿದ್ದಾರೆ.
ಸೃಜನಾ ರೈ ಎ.ರವರು ಸವಿತಾ ಕೆ ಹಾಗೂ ಸತೀಶ್ ಕುಮಾರ್ ಎ. ರವರ ಪುತ್ರಿಯಾಗಿದ್ದಾರೆ. ಅನಿಶ್ ಕೃಷ್ಣ ಆಚಾರ್ ರವರು ಮಮತಾ ಎಸ್. ಹಾಗೂ ಎಂ. ಶ್ರೀನಿವಾಸ್ ಆಚಾರ್ ರವರ ಪುತ್ರರಾಗಿದ್ದಾರೆ.
ಜು. 31ರಂದು ದಕ್ಷಿಣ ಕನ್ನಡ ತಂಡದ 46 ವಿದ್ಯಾರ್ಥಿಗಳು ಮತ್ತು 5 ಶಿಕ್ಷಕರು ಮಂಗಳೂರಿನಿಂದ ಬೆಂಗಳೂರು ಮತ್ತು ಹಾಂಕಾಂಗ್ ಮೂಲಕ ದಕ್ಷಿಣ ಕೊರಿಯಾಕ್ಕೆ ತೆರಳಿ, ಭಾರತವನ್ನು ಪ್ರತಿನಿಧಿಸಲಿದ್ದಾರೆ. ಶಾಲಾ ಸ್ಕೌಟ್ & ಗೈಡ್ ತರಬೇತುದಾರರಾದ ಜಯಶ್ರೀ ಯವರು ತರಬೇತುಗೊಳಿಸಿದ್ದಾರೆ ಎಂದು ಶಾಲಾ ಪ್ರಾಂಶುಪಾಲರಾದ ಜಯರಾಮ ರೈ ಯವರು ತಿಳಿಸಿದ್ದಾರೆ.