ಪುತ್ತೂರು: ಕಳೆದ ಕೆಲವು ತಿಂಗಳಿಂದ ಅನಾರೋಗ್ಯ ಪೀಡಿತರಾಗಿ ಮನೆಯಲ್ಲಿ ಹಾಸಿಗೆ ಹಿಡಿದ ಕೂಲಿ ಕಾರ್ಮಿಕ ಬನ್ನೂರು ಗ್ರಾಮದ ಅಡಚಿಲಡ್ಕ ನಿವಾಸಿ ನಾರಾಯಣ ಎಂಬವರ ಮನೆಗೆ ಶಾಸಕರು ಜು.24ರಂದು ರಾತ್ರಿ ಭೇಟಿ ನೀಡಿದರು.
ಮೇಸ್ತ್ರಿ ಕೆಲಸ ಮಾಡುತ್ತಿದ್ದ ನಾರಾಯಣರವರಿಗೆ ದಿಢೀರನೆ ಅನಾರೋಗ್ಯ ಕಾಣಿಸಿಕೊಂಡಿದೆ. ಕಡುಬಡತನದ ಈ ಕುಟುಂಬಕ್ಕೆ ಇವರೇ ಆಧಾರ ಸ್ತಂಬವಾಗಿದ್ದರು. ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಕುಟುಂಬದ ಸಂಕಷ್ಟದ ಬಗ್ಗೆ ಶಾಸಕರಿಗೆ ತಿಳಿಸಿದ್ದರು. ಸೋಮವಾರ ರಾತ್ರಿ ಮನೆಗೆ ಭೇಟಿ ನೀಡಿದ ಶಾಸಕರು ಆರ್ಥಿಕ ನೆರವು ನೀಡಿದರು. ಈ ಸಂದರ್ಭದಲ್ಲಿ ಕೋಡಿಂಬಾಡಿ ಗ್ರಾ.ಪಂ ಸದಸ್ಯ ಜಯಪ್ರಕಾಶ್ ಬದಿನಾರ್ ಸೇರಿದಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.