ಪುತ್ತೂರು: ಗಾಂಜಾ ಸೇವಿಸಿ ಸಾರ್ವಜನಿಕ ಸ್ಥಳದಲ್ಲಿ ಅನುಚಿತವಾಗಿ ವರ್ತಿಸಿದ ಆರೋಪದಲ್ಲಿ ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ನಿವಾಸಿ ಮಹಮ್ಮದ್ ರಫೀಕ್(24ವ.)ಹಾಗೂ ಕಬಕ ಗ್ರಾಮದ ಬಲ್ನಾಡು ನಿವಾಸಿ ಮೊಹಮ್ಮದ್ ಶಫೀಕ್(24ವ.) ಎಂಬವರ ವಿರುದ್ಧ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜು.24ರಂದು ಸಂಜೆ 5 ಗಂಟೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯ ಉಪನಿರೀಕ್ಷಕರು (ಕಾ&ಸು) ಸಿಬ್ಬಂದಿಗಳೊಂದಿಗೆ ರೌಂಡ್ಸ್‌ನಲ್ಲಿದ್ದ ವೇಳೆ ಉಪ್ಪಿನಂಗಡಿ ಪೃಥ್ವಿ ಕಾಂಪ್ಲೆಕ್ಸ್ ಬಳಿ ಹೋದಾಗ ಇವರು ಮಾದಕ ಅಮಲು ಸೇವನೆ ಮಾಡಿ ಹೀನಾಯವಾಗಿ ಮಾತನಾಡುತ್ತಾ ಅನುಚಿತವಾಗಿ ವರ್ತಿಸುತ್ತಿದ್ದರು. ಇಬ್ಬರನ್ನು ವಿಚಾರಿಸಿದಾಗ ಮಾದಕ ದ್ರವ್ಯ ಗಾಂಜಾ ಸೇವನೆ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾರೆ. ಇವರಿಂದ ಸಿಲ್ವರ್ ನೀಲಿ ಬಣ್ಣದ ಪ್ಯಾನಲ್ ಇರುವ VIVO ಕಂಪನಿಯ ಹ್ಯಾಂಡ್ ರೈಡ್ ಮೊಬೈಲ್-1, ನೀಲಿ ಬಣ್ಣದ ಪ್ಯಾನಲ್ ಇರುವ Redmi ಕಂಪನಿಯ ಹ್ಯಾಂಡ್ ರೈಡ್ ಮೊಬೈಲ್-1 ಸ್ವಾಧೀನಪಡಿದ್ದು, ಸ್ವಾಧೀನಪಡಿಸಿದ ಮೊಬೈಲ್‌ಗಳ ಅಂದಾಜು ಮೌಲ್ಯ 15 ಸಾವಿರ ರೂ.ಎಂದು ಅಂದಾಜಿಸಲಾಗಿದೆ. ಆಪಾದಿತರನ್ನು ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿದ್ದು ವೈದ್ಯರು ಮಹಮ್ಮದ್ ರಫೀಕ್ ಮತ್ತು ಮೊಹಮ್ಮದ್ ಶಫೀಕ್‌ರನ್ನು ಪರೀಕ್ಷಿಸಿ ಗಾಂಜಾ ಸೇವನೆ ಮಾಡಿದ ಬಗ್ಗೆ ಪಾಸಿಟಿವ್ ದೃಢಪತ್ರ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ:27(B) ಎನ್‌ಡಿಪಿಎಸ್ ಆಕ್ಟ್‌ನಂತೆ ಪ್ರಕರಣ ದಾಖಲಾಗಿದೆ.