ನಿಡ್ಪಳ್ಳಿ ಗ್ರಾ.ಪಂ ಉಪ ಚುನಾವಣೆ- ಕಾಂಗ್ರೆಸ್ ಬೆಂಬಲಿತ ಸತೀಶ್ ಶೆಟ್ಟಿಗೆ ಗೆಲುವು

0

ಜಗನ್ನಾಥ ರೈ-208

ಸತೀಶ್ ಶೆಟ್ಟಿ-235

ಚಂದ್ರಶೇಖರ-85

ತಿರಸ್ಕೃತ-1

ಪುತ್ತೂರು: ನಿಡ್ಪಳ್ಳಿ ಗ್ರಾ.ಪಂನ ವಾರ್ಡ್-1ಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸತೀಶ್ ಶೆಟ್ಟಿ ಜಯ ಗಳಿಸಿದ್ದಾರೆ.
ವಾರ್ಡ್-1ರ ಸಾಮಾನ್ಯ ಮೀಸಲು ಕ್ಷೇತ್ರದ ಬಿಜೆಪಿ ಬೆಂಬಲಿತ ಸದಸ್ಯ ಮುರಳಿಕೃಷ್ಣ ಭಟ್ ರವರ ನಿಧನದಿಂದ ತೆರವಾದ ಸ್ಥಾನಕ್ಕೆ ಜು.23ರಂದು ನಡೆದ ಉಪ ಚುನಾವಣೆಯಲ್ಲಿ ಒಟ್ಟು 607 ಮತಗಳ ಪೈಕಿ 529 ಮತಗಳು ಚಲಾವಣೆಯಾಗಿದೆ. ಇದರಲ್ಲಿ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿ ಜಗನ್ನಾಥ ರೈ ಕೊಳಂಬೆತ್ತಿಮಾರ್ 208 ಮತ, ಕಾಂಗ್ರೆಸ್ ಬೆಂಬಲಿತ ಸತೀಶ್ ಶೆಟ್ಟಿ 235 ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿ ಚಂದ್ರಶೇಖರ ಪ್ರಭು 85 ಮತಗಳನ್ನು ಪಡೆದುಕೊಂಡಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಪಡೆದಿದ್ದ ಸ್ಥಾನವನ್ನು ಈ ಭಾರಿ ಕಾಂಗ್ರೆಸ್ ಕಸಿದುಕೊಂಡಿದೆ. ವಿಧಾನ ಸಭಾ ಚುನಾವಣೆಯಲ್ಲಿ ನಡೆದಂತೆ ಬಿಜೆಪಿ ನಿಡ್ಪಳ್ಳಿ ಗ್ರಾ.ಪಂ ಉಪಚುನಾವಣೆಯಲ್ಲಿಯೂ ಮೂರನೇ ಸ್ಥಾನ ಪಡೆದುಕೊಂಡಿದೆ

LEAVE A REPLY

Please enter your comment!
Please enter your name here