ಈಶ್ವರಮಂಗಲ ಗಜಾನನ ಶಾಲೆ ಹಾಗೂ ಹನುಮಗಿರಿ ಧರ್ಮಶ್ರೀ ಪ್ರತಿಷ್ಠಾನದಿಂದ ಕಾರ್ಗಿಲ್ ವಿಜಯ್ ದಿವಸ್ ಆಚರಣೆ

0

ಈಶ್ವರಮಂಗಲ: ಈಶ್ವರಮಂಗಲದ ಅಮರಗಿರಿಯಲ್ಲಿ ಧರ್ಮಶ್ರೀ ಪ್ರತಿಷ್ಠಾನ ಹನುಮಗಿರಿ ಹಾಗೂ ಗಜಾನನ ಶಾಲೆ ಇದರ ವತಿಯಿಂದ ಕಾರ್ಗಿಲ್ ವಿಜಯೋತ್ಸವ ದಿನವನ್ನು ಜಂಟಿಯಾಗಿ ಆಚರಿಸಲಾಯಿತು.

ಗಜಾನನ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಕೆ ಶಾಮಣ್ಣ ಧ್ವಜಾರೋಹಣವನ್ನು ನೆರವೇರಿಸಿದರು. ಅತಿಥಿಗಳಿಂದ ಭಾರತಮಾತೆ ವಿಗ್ರಹ ಹಾಗೂ ಹುತಾತ್ಮ ಯೋಧರ ವಿಜಯ ಮುಷ್ಠಿ ಸ್ಮಾರಕಕ್ಕೆ ಪುಷ್ಪಾರ್ಚನೆಯನ್ನು ನೆರವೇರಿಸಿ, ದೀಪ ಪ್ರಜ್ವಲಿಸಿದರು.

ಮುಖ್ಯ ಅತಿಥಿ ನಿವೃತ್ತ ಯೋಧ ಶ್ರೀ. ಪ್ರವೀಣ್ ಮಾತನಾಡಿ ತಮ್ಮ ಸೈನಿಕ ವೃತ್ತಿ ಜೀವನದ ಅನುಭವಗಳನ್ನು, ಕಾರ್ಗಿಲ್ ಯುದ್ದದ ಸಮಯದಲ್ಲಿ ತಮಗಾದ ಅನುಭವಗಳನ್ನು ಹಂಚಿಕೊಂಡರು.

ಇನ್ನೋರ್ವ ಅತಿಥಿ ಸೈನಿಕ ಸುಕೇಶ್ ಮಾತನಾಡಿ ‘ಆಪರೇಷನ್ ವಿಜಯ್’ ಬಗ್ಗೆ ತಿಳಿಸಿದರು. ಅತಿಥಿಗಳಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಶಿವರಾಮ ಶರ್ಮ, ನಾಗರಾಜ ಭಟ್, ಗಜಾನನ ಶಾಲೆಯ ಶಿಕ್ಷಕ ವೃಂದದವರು ಮತ್ತು ಊರಿನ ಬಂಧುಗಳು ಭಾಗವಹಿಸಿದರು.

ಗಜಾನನ ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪ್ರಾರ್ಥಿಸಿದರು. ಧರ್ಮಶ್ರೀ ಪ್ರತಿಷ್ಠಾನದ ಧರ್ಮದರ್ಶಿ ಹಾಗೂ ಗಜಾನನ ಶಾಲಾ ಸಂಚಾಲಕ ಶಿವರಾಮ ಪಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿ, ವಂದಿಸಿದರು. ಶಿಕ್ಷಕ ಅಕ್ಷತಾ ಮತ್ತು ಶ್ರೀಮತಿ ಸುಮಲತಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here