ಬಡಗನ್ನೂರು ಹಾಲು ಉತ್ಪಾದಕ ಸಹಕಾರಿ ಸಂಘದ ಅಧ್ಯಕ್ಷರಾಗಿ ಆಯ್ಕೆ

0

ಬಡಗನ್ನೂರು: ಬಡಗನ್ನೂರು ಹಾಲು ಉತ್ಪಾದಕರ ಸಹಕಾರ ಸಂಘದ ಮುಂದಿನ 5 ವರ್ಷಗಳ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಮೂಲಕ ಆಯ್ಕೆ ನಡೆಯಿತು ಮತ್ತು ನಿರ್ದೇಶಕರುಗಳ ಅವಿರೋಧ ಆಯ್ಕೆ ನಡೆದಿದೆ. ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯನ್ನು ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಛೇರಿ ಪುತ್ತೂರು ಉಪವಿಭಾಗದ ಶೋಭಾ ಎನ್.ಎಸ್.ರವರು ರಿಟರ್ನಿಂಗ್ ಅಧಿಕಾರಿಯಾಗಿ ಚುನಾವಣೆ ನಡೆಸಿಕೊಟ್ಟರು. ಅಧ್ಯಕ್ಷರಾಗಿ ಸೀತಾರಾಮ ಗೌಡ ಉಳಯ, ಉಪಾಧ್ಯಕ್ಷರಾಗಿ ಹೇಮಾಲತಾ ಗೌಡ ಸಂಪಿಗೆಮಜಲು ಹಾಗೂ ನಿರ್ದೇಶಕರುಗಳಾಗಿ ನಾರಾಯಣ ನಾಯ್ಕ ನೇರ್ಲಪ್ಪಾಡಿ, ಸುಬ್ರಾಯ ನಾಯಕ್ ಮೇಗಿನಮನೆ, ಶಿವಚಂದ್ರ ಕುಲಾಲ್ ಪೈರ್ಪುಣಿ, ರವಿ ರೈ ಕೆಳಗಿನಪೇರಾಲು, ಯಶೋಧ ರೈ ಕೊಯಿಲ, ಸುಧಾ ಗೌಡ ಪಕ್ಯೋಡ್, ಲೀಲಾವತಿ ಕಟ್ಟಾವು, ಪದ್ಮಶ್ರೀ ರೈ ಬಡಕ್ಕಾಯೂರು ಇವರುಗಳು ಆಯ್ಕೆಯಾಗಿದ್ದಾರೆ. ಸಂಘದ ಕಾರ್ಯದರ್ಶಿ ಮೋಹನ್ ಎಂ ಸಹಕರಿಸಿದರು.

LEAVE A REPLY

Please enter your comment!
Please enter your name here