ಪುತ್ತೂರು: ದಕ್ಷಿಣ ಕೋರಿಯದಲ್ಲಿ ನಡೆಯಲಿರುವ 25ನೇ ಅಂತರಾಷ್ಟ್ರೀಯ ಜಾಂಬೂರಿ -2023ಕ್ಕೆ ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಶಿಕ್ಷಕಿ ಸಹಿತ ಮೂವರು ಆಯ್ಕೆಗೊಂಡಿದ್ದಾರೆ.
ಆ.1ರಿಂದ 12ರ ತನಕ ‘ಡ್ರೈವ್ ಯುವರ್ ಡ್ರೀಮ್’ ಎಂಬ ಧೈಯ ದೊಂದಿಗೆ ಸೌತ್ ಕೋರಿಯಾದಲ್ಲಿ ನಡೆಯಲಿರುವ 25ನೇ ಅಂತರಾಷ್ಟ್ರೀಯ ಜಾಂಬೂರಿಗೆ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಪ್ರಾರ್ಥನಾ ಟಿ, ಶಿಲ್ಪಾ ಬಿ, ಚಿಂತನ್ ಸಾಲಿಯಾನ್ ಮತ್ತು ಶಿಕ್ಷಕಿ ಸುನೀತ ಎಂ ಅವರು ಭಾಗವಹಿಸಲಿದ್ದಾರೆ ಎಂದು ಶಾಲೆಯ ಸಂಚಾಲಕ ಹೇಮನಾಥ ಶೆಟ್ಟಿ ಮತ್ತು ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮೀ ಎ ತಿಳಿಸಿದ್ದಾರೆ.