ಅಧ್ಯಕ್ಷೆ: ಸುರೇಖಾ ಮೋಹನ್‌ದಾಸ್, ಕಾರ್ಯದರ್ಶಿ: ದೇವಕಿ ಹಿರಿಂಜ
ರಾಮಕುಂಜ: ಸಾರ್ವಜನಿಕ ವರಮಹಾಲಕ್ಷ್ಮೀ ಪೂಜಾ ಸಮಿತಿ ರಾಮಕುಂಜ-ಹಳೆನೇರೆಂಕಿ ಇದರ ವತಿಯಿಂದ ನಡೆಯುವ 19ನೇ ವರ್ಷ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಅಧ್ಯಕ್ಷೆಯಾಗಿ ಸುರೇಖಾ ಮೋಹನ್‌ದಾಸ್ ಬರೆಂಬಾಡಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ದೇವಕಿ ಹಿರಿಂಜ ಆಯ್ಕೆಯಾಗಿದ್ದಾರೆ.
18ನೇ ವರ್ಷದ ಸಮಿತಿಯ ಅಧ್ಯಕ್ಷೆ ಮಂಜುಳಾ ಚಂದ್ರಶೇಖರ್ ಕಲ್ಲೇರಿ ಇವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ನೂತನ ಸಮಿತಿ ರಚಿಸಲಾಯಿತು. ಕೋಶಾಧಿಕಾರಿಯಾಗಿ ಶ್ವೇತಾ ದಿನೇಶ್ ಬದೆಂಜ, ಜೊತೆ ಕಾರ್ಯದರ್ಶಿಯಾಗಿ ಯಶೋಧ ಪರಕ್ಕಾಲು, ಉಪಾಧ್ಯಕ್ಷರಾಗಿ ಸುಶೀಲಾ ವಳೆಂಜರವರನ್ನು ಆಯ್ಕೆ ಮಾಡಲಾಯಿತು. ಸಮಿತಿ ಸದಸ್ಯರಾಗಿ ಪುಷ್ಪಾವತಿ ಬರೆಂಬೆಟ್ಟು, ಸವಿತಾ ಬರೆಂಬೆಟ್ಟು, ಬಬಿತ ಕಲ್ಲೇರಿ, ಜಯಶ್ರೀ ಇರ್ಕಿ, ವಿಶಾಲಾಕ್ಷಿ ಕುದ್ಕೋಳಿ, ಸುಮಿತ್ರಾ ಪಾಲೆತ್ತಡ್ಡ, ಜಾನಕಿ ಕೊರಗಪ್ಪ ಗೌಡ, ನಳಿನಿ ಬರೆಂಬಾಡಿ, ಸೌಮ್ಯ ಬರೆಂಬಾಡಿ, ಕಾವ್ಯ ವರ್ನಂಡ, ಕುಶಲ ಎಸ್.ಹಳೆನೇರೆಂಕಿ, ಗೀತಾ ಹಳೆನೇರೆಂಕಿ, ಪದ್ಮಾವತಿ ರಾಮಂಡ ಆಯ್ಕೆಯಾದರು. ಗೌರವ ಸಲಹೆಗಾರರಾದ ರತ್ನಾವತಿ ಬಟ್ಟೋಡಿ, ಹೇಮಾವತಿ ಹಲ್ಯಾರ, ಮಂಜುಳಾ ಚಂದ್ರಶೇಖರ ಕಲ್ಲೇರಿ, ತೇಜಸ್ವಿನಿಶೇಖರ ಗೌಡ ಕಟ್ಟಪುಣಿ, ವಸಂತಿ ಕನೆಮಾರು, ವಿಮಲ ಕರುಣಾಕರ, ಪ್ರಮೀಳಾ ಹೇಮಾಕ್ಷ, ಸುಚೇತಾ ಬರೆಂಬೆಟ್ಟು, ಲೀಲಾವತಿ ಮಡೆಂಜಿಮಾರ್, ಪ್ರೇಮಲತಾ ಪರಂದಾಜೆ, ಧರ್ಮಪಾಲ ರಾವ್, ಲಕ್ಷ್ಮೀನಾರಾಯಣ ರಾವ್ ಆತೂರು, ಅಶೋಕ ಹಲ್ಯಾರ, ಹರೀಶ್ ಬರಮೇಲು, ಮೀನಾಕ್ಷಿ ಆನ, ಜಾಹ್ನವಿ ಕಟ್ಟಪುಣಿ, ಹೇಮಾವತಿ ಪೂಜಾರಿ ಆತೂರು, ಸವಿತಾ ಕದ್ರ, ಕುಸುಮಾ ಭಟ್ ರಾಮಕುಂಜ, ವೇದಾವತಿ ಬಟ್ಟೋಡಿ ಆಯ್ಕೆಯಾದರು.