ಗ್ರಾ.ಪಂ ಉಪ ಚುನಾವಣೆಯಲ್ಲಿ ಗೆಲುವು-ಪುತ್ತಿಲ ಪರಿವಾರದಿಂದ ಕಾರ್ಯಕರ್ತರಿಗೆ ಅಭಿನಂದನಾ ಸಭೆ

0

ಪುತ್ತೂರು: ಆರ್ಯಾಪು ಮತ್ತು ನಿಡ್ಪಳ್ಳಿ ಗ್ರಾಮ ಪಂಚಾಯತ್ ಉಪ ಚುನಾವಣೆಯ ಫಲಿತಾಂಶದ ಬಳಿಕ ಪುತ್ತಿಲ ಪರಿವಾರದಿಂದ ಮುಕ್ರಂಪಾಡಿ ಸುಭದ್ರಾ ಕಲ್ಯಾಣ ಮಂಟಪದಲ್ಲಿ ಮತದಾರರಿಗೆ, ಕಾರ್ಯಕರ್ತರಿಗೆ ಅಭಿನಂದನಾ ಸಭೆ ಮತ್ತು ಅಭ್ಯರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಅಭ್ಯರ್ಥಿಗಳನ್ನು ಸನ್ಮಾನಿಸಿದ ಹಿಂದೂ ಸಂಘಟನೆ ಮುಖಂಡ ಅರುಣ್ ಪುತ್ತಿಲ ಮಾತನಾಡಿ , ಜಡಿಮಳೆಯನ್ನು ಲೆಕ್ಕಿಸದೆ ಎರಡು ಕ್ಷೇತ್ರದಲ್ಲೂ ದುಡಿದ ದೇವ ದುರ್ಲಭ ಕಾರ್ಯಕರ್ತರು ನಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮವಹಿಸಿದರು. ನಮ್ಮಲ್ಲಿ ಅಽಕಾರವಿಲ್ಲ, ಹಣಬಲವಿಲ್ಲ ಆದರೂ ನಮ್ಮ ಜೊತೆ ನಿಷ್ಠಾವಂತ ಕಾರ್ಯಕರ್ತರಿದ್ದಾರೆ ಎನ್ನುವುದನ್ನು ಸಮಾಜಕ್ಕೆ ತೋರಿಸಿದರು ಎಂದು ಪುತ್ತಿಲ ಹೇಳಿದರು.
ಹಲವು ಆಮಿಷಗಳ, ಅಪಪ್ರಚಾರಗಳ, ಹಣ, ಹೆಂಡ ಹಂಚುವ ಮೂಲಕ ಎರಡು ಕ್ಷೇತ್ರದಲ್ಲೂ ಚುನಾವಣೆ ನಡೆಯಿತು. ಆದರೂ ಮತದಾರರು ಒಂದು ಕಡೆ ಅದ್ಬುತ ಗೆಲುವು ಕೊಟ್ಟು ಇನ್ನೊಂದರಲ್ಲಿ ವಿರೋಚಿತ ಸೋಲುಂಡೆವು. ಚುನಾವಣೆಯಲ್ಲಿ ಸೋಲು ಗೆಲುವು ಸಹಜ. ಎರಡನ್ನು ಸಮಚಿತ್ತದಿಂದ ಸ್ವೀಕರಿಸಿ ಕಾರ್ಯಕರ್ತರ ಜೊತೆ ಮುಂದೆಯೂ ಇರುತ್ತೇವೆ ಎಂದು ಆಸ್ವಾಸನೆಯನ್ನು ನೀಡಿದರು.

ಕಳೆದ ಕೆಲ ತಿಂಗಳುಗಳಿಂದ ನಡೆದ ವಿದ್ಯಾಮಾನಗಳಲ್ಲಿ ಕಾರ್ಯಕರ್ತರ ತಂಡ ನಮ್ಮ ಜೊತೆ ಗಟ್ಟಿಯಾಗಿ ನಿಂತಿದೆ. ಮುಂದಿನ ನಮ್ಮ ಹೋರಾಟಗಳು ಕಾಲದ ಜೊತೆ ಕಾರ್ಯಕರ್ತರ ಧ್ವನಿಯಂತೆ ಸಾಗಲಿದೆ ಎಂದರು.

ಅಭ್ಯರ್ಥಿಗಳಿಗೆ ಸನ್ಮಾನ: ಗೆಲುವು ಸಾಽಸಿದ ಆರ್ಯಾಪುನ ಅಭ್ಯರ್ಥಿ ಸುಬ್ರಹ್ಮಣ್ಯ ಬಲ್ಯಾಯ ದೊಡ್ಡಡ್ಕ ಹಾಗೂ ನಿಡ್ಪಳ್ಳಿಯಲ್ಲಿ ಸಣ್ಣ ಅಂತರದಲ್ಲಿ ಸೋಲುಂಡ ಜಗನ್ನಾಥ ರೈ ಕೊಳಂಬೆತ್ತಿಮಾರು ಇವರನ್ನು ಸನ್ಮಾನಿಸಲಾಯಿತು.
ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಮಾರ್ತ, ಪ್ರಧಾನ ಕಾರ್ಯದರ್ಶಿ ಉಮೇಶ್ ಗೌಡ ವೀರಮಂಗಲ, ಕಾರ್ಯದರ್ಶಿ ರವಿ ರೈ ಮಠ, ಕುಮಾರ ಸುಬ್ರಹ್ಮಣ್ಯ, ಪ್ರವೀಣ್ ಭಂಡಾರಿ ಸಹಿತ ಪ್ರಮುಖರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here