ಪುತ್ತೂರು: ಗೃಹಲಕ್ಷ್ಮೀ ನೋಂದಣಿಗೆ ಸಂಪೂರ್ಣ ಉಚಿತ ನೋಂದಣಿಯಾಗಿರುತ್ತದೆ. ನೋಂದಣಿಗೆ ಹಣ ಕೇಳಿದರೆ ಕ್ರಮವನ್ನೂ ಕೈಗೊಳ್ಳಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾಧಿಕಾರಿ ಶ್ರೀಲತಾ ಅವರು ತಿಳಿಸಿದ್ದಾರೆ.
ಪಂಚಾಯಿತ್‌ಗಳು ಅಥವಾ ಒನ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿದಾಗ ಹಣ ನೀಡದಂತೆ ಮುನ್ನೆಚ್ಚರಿಕೆ ನೀಡುತ್ತಿದ್ದಾರೆ. ಆದರೂ ಅಲ್ಲಲ್ಲಿ ಹಣ ಕೇಳುತ್ತಿರುವ ದೂರುಗಳು ಬರುತ್ತಲೇ ಇವೆ. ಬಹಳಷ್ಟು ಕಡೆ ಹೆಣ್ಣು ಮಕ್ಕಳು ನೋಂದಣಿಗೆಂದು ಬಂದಾಗ ಹೆಚ್ಚು ಕೆಲಸ ಹಿಡಿಯುತ್ತದೆ. ತಲೆ ನೋವಿಲ್ಲದೇ ಬೇಗನೇ ಕೆಲಸ ಮುಗಿಯಲಿ ಎಂದು ಹಣ ನೀಡಿರುವ ಸನ್ನಿವೇಶಗಳೂ ಇವೆ. ಕೆಲವೊಮ್ಮೆ ಅಲ್ಲಿನ ಸಿಬ್ಬಂದಿಗಳೇ ಹಣ ಕೇಳಿದ್ದಾರೆ ಎಂಬ ಆರೋಪ ಇದೆ. ನೋಂದಣಿಗೆ ಹೋದ ಫಲಾನುಭವಿಗಳು ಯಾವುದೇ ಕಾರಣಕ್ಕೂ ಹಣವನ್ನು ನೀಡಬಾರದು. ಈ ಕುರಿತು ಕುದ್ದು ಕೆಲವು ಕಡೆ ಪರಿಶೀಲನೆ ನಡೆಸಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.