ಜು.30 ಪಡ್ನೂರಿನಲ್ಲಿ ಆಟಿಡೊಂಜಿ ದಿನ ಕೆಸರ್‍ದ ಗೊಬ್ಬುಲು

0

ಪುತ್ತೂರು:ಶ್ರೀ ಜನಾರ್ದನ ಯುವಕ ಮಂಡಲ ಮತ್ತು ಶ್ರೀ ಸರಸ್ವತಿ ಯುವತಿ ಮಂಡಲ ಪಡ್ನೂರು ಇದರ ಸುವರ್ಣ ಮಹೋತ್ಸವದ ಅಂಗವಾಗಿ ಬನ್ನೂರು ಗ್ರಾಮ ಪಂಚಾಯತ್‌ನ ಸಹಯೋಗದೊಂದಿಗೆ ಆಟಿಡೊಂಜಿ ಕೆಸರ್‍ದ ಗೊಬ್ಬುಲು-2023 ಕಾರ್ಯಕ್ರಮಗಳು ಜು.30ರಂದು ಕುಂಜಾರು ಮದಗ ಶ್ರೀ ಜನಾರ್ದನ ದೇವಸ್ಥಾನದ ಎದುರುಗದ್ದೆಯಲ್ಲಿ ನಡೆಯಲಿದೆ.


ಕಾರ್ಯಕ್ರಮದಲ್ಲಿ ಕುಂಜಾರು ಮದಗ ಶ್ರೀ ಜನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಾರಕರೆ ವೆಂಕಟ್ರಮಣ ಭಟ್ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಮಾಜಿ ಶಾಸಕ ಸಂಜೀವ ಮಠಂದೂರು ಉದ್ಘಾಟಿಸಲಿದ್ದಾರೆ. ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಪೂವಪ್ಪ ದೇಂತಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್, ಬನ್ನೂರು ಗ್ರಾ.ಪಂ ಅಧ್ಯಕ್ಷೆ ಜಯ ಏಕ, ಉಪಾಧ್ಯಕ್ಷದೆ ಗೀತಾ ಕೊಡಂಗೆ, ಪಿಡಿಓ ಚಿತ್ರಾವತಿ, ಸುವರ್ಣ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ವಿಶ್ವನಾಥ ಗೌಡ ಪಟ್ಟೆ ಹಾಗೂ ಪಡ್ನೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರಾಮಣ್ಣ ಗೌಡ ಪುಳು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.


ಸಂಜೆ ಸಮಾರೋಪ:
ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಯುವಕ ಮಂಡಲದ ಅಧ್ಯಕ್ಷ ರಾಜೇಶ್ ಆಟಿಕ್ಕು ಅಧ್ಯಕ್ಷತೆ ವಹಿಸಲಿದ್ದಾರೆ. ಎಪಿಎಂಸಿ ಮಾಜಿ ಸದಸ್ಯ ಬಾಲಕೃಷ್ಣ ಜೋಯಿಸ ಯರ್ಮುಂಜ, ಬನ್ನೂರು ಗ್ರಾ.ಪಂ ಸದಸ್ಯರಾದ ರಮಣಿ ಡಿ ಗಾಣಿಗ, ಗಿರಿಧರ ಪಂಜಿಗುಡ್ಡೆ, ಶ್ರೀನಿವಾಸ ಪೆರ್‍ವೋಡಿ, ಗಣೇಶ ಯರ್ಮುಂಜಪಳ್ಳ, ವಿಮಲ ಹರೀಶ್, ಸರಸ್ವತಿ ಯುವತಿ ಮಂಡಲದ ಅಧ್ಯಕ್ಷೆ ರೇವತಿ ಪಂಜಿಗುಡ್ಡೆ ಹಾಗೂ ಗೌರವಾಧ್ಯಕ್ಷೆ ಸಾವಿತ್ರಿ ಕೊಡಂಗೆ ಅತಿಥಿಗಳಾಗಿ ಆಗಮಿಸಲಿದ್ದಾರೆ.


ಸ್ಪರ್ಧೆಗಳು:
ಕಾರ್ಯಕ್ರಮದಲ್ಲಿ ಪುರುಷರಿಗೆ ಕಬಡ್ಡಿ, ವಾಲಿಬಾಲ್, ಹಗ್ಗಜಗ್ಗಾಟ, ಗೂಟ ಓಟ, ಮಹಿಳೆಯರಿಗೆ ತ್ರೋಬಾಲ್, ಹಗ್ಗ ಜಗ್ಗಾಟ, ಚೆನ್ನೆಮಣೆ, ಹಾಳೆ ಎಳೆಯುವುದು, ಮಕ್ಕಳಿಗೆ ಕಬಡ್ಡಿ, ಕಂಬಳ ಓಟ ಹಾಗೂ ಗೂಟೋಟ ಸ್ಪರ್ಧೆಗಳು ನಡೆಯಲಿದೆ.


ಆಧಾರ್ ನೊಂದಣಿ, ತಿದ್ದುಪಡಿ:
ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಂಚೆ ಇಲಾಖೆಯ ಸಹ ಭಾಗಿತ್ವದಲ್ಲಿ ಆಧಾರ್ ನೋಂದಣಿ, ತಿದ್ದುಪಡಿ, ಅಂಚೆ ಉಳಿತಾಯ ಖಾತೆಗೆ ಆಧಾರ್ ಜೋಡಣೆ ಮತ್ತು ಅಂಚೆ ಇಲಾಖೆಯ ಇತರ ಸೌಲಭ್ಯಗಳ ಮಾಹಿತಿ ಹಾಗೂ ಹೊಸದಾಗಿ ಖಾತೆ ತೆರಯುವ ಸೌಲಭ್ಯಗಳು ದೊರೆಯಲಿದೆ. ಇದಕ್ಕಾಗಿ ರೇಶನ್ ಕಾರ್ಡ್, ಓಟರ್ ಐಡಿ, ಪಾನ್‌ಕಾರ್ಡ್, ಮಾರ್ಕ್ಸ್‌ಕಾರ್ಡ್, ಜನನಪ್ರಮಾಣ ಪತ್ರ, ಪಾಸ್‌ಪೋರ್ಟ್ ಹಾಗೂ ಮೊಬೈಲ್‌ಗಳೊಂದಿಗೆ ಆಗಮಿಸಿ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳುವಂತೆ ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here