ಅನ್‌ಲೈನ್ ಮಾರ್ಕೆಟಿಂಗ್ ಅಗತ್ಯ – ಕೇಶವರಾಮ್
ಅನಿವಾರ್ಯಕ್ಕೆ ತಕ್ಕಂತೆ ಅಪ್‌ಡೇಟ್ ಆಗಬೇಕು -ಕೇಶವ ಅಮೈ
ಪುತ್ತೂರು: ಲಘು ಉದ್ಯೋಗ ಭಾರತಿ ಕರ್ನಾಟಕ ಇದರ ಪುತ್ತೂರು ಘಟಕ ಮತ್ತು ಸುಳ್ಯ ತಾಲೂಕಿನ ಉದ್ದಿಮೆದಾರ ಸದಸ್ಯರಿಗೆ ಡಿಜಿಟಲ್ ಮಾರ್ಕೆಟಿಂಗ್ ಮತ್ತು ಸೋಷಿಯಲ್ ಮೀಡಿಯಾದ ಉಪಯುಕ್ತತೆಯ ಕುರಿತು ತರಬೇತಿ ಕಾರ್ಯಕ್ರಮ ಜು.26ರಂದು ಇಲ್ಲಿನ ಏಳ್ಮುಡಿ ಪ್ರಭು ಸಂಕೀರ್ಣದಲ್ಲಿರುವ ಪ್ರೇರಣಾ ಟ್ರಸ್ಟ್ ಹಾಲ್‌ನಲ್ಲಿ ನಡೆಯಿತು.
ಕೋಕೋಗುರು ಕೋಕನಟ್ ಇಂಡಸ್ಟ್ರೀಸ್ ಮತ್ತು ಕೋಕೋಗುರು ಅಡಿಗೆ ಮನೆಯ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸ್ವತಃ ಕಂಪ್ಯೂಟರ್ ಇಂಜಿನಿಯರ್ ಆಗಿರುವ ಕೇಶವರಾಮ್ ಬೋನಂತಾಯ ಅವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಸ್ವಂತ ಉದ್ಯಮದಲ್ಲಿ ತಾವು ತಮ್ಮ ತಂಡದೊಂದಿಗೆ ಯಾವ ರೀತಿ ಆನ್‌ಲೈನ್ ಮಾರ್ಕೆಟಿಂಗ್ ಉಪಯೋಗವನ್ನು ಪಡೆದುಕೊಳ್ಳುತ್ತಿದ್ದೇನೆ ಎಂಬುದನ್ನು ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು. ಈ ಸಂದರ್ಭದಲ್ಲಿ ಸಂವಾದ ಕಾರ್ಯಕ್ರಮ ನಡೆಯಿತು.
ಅನಿವಾರ್ಯಕ್ಕೆ ತಕ್ಕಂತೆ ಅಪ್‌ಡೇಟ್ ಆಗಬೇಕು:
ಲಘು ಉದ್ಯೋಗ ಭಾರತಿ ಪುತ್ತೂರು ಘಟಕದ ಅಧ್ಯಕ್ಷ ಎಸ್.ಆರ್.ಕೆ. ಲ್ಯಾರ‍್ಸ್ನ ಮ್ಯಾನೇಜಿಂಗ್ ಡೈರೆಕ್ಟರ್ ಕೇಶವ ಅಮೈ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಉದ್ದಿಮೆದಾರರಿಗೆ ಡಿಜಿಟಲ್ ಮಾರ್ಕೆಟಿಂಗ್ ಈಗಿನ ಅನಿವಾರ್ಯತೆಯನ್ನು ಅರಿತು ಎಲ್ಲರು ಅಪ್‌ಡೇಟ್ ಆಗುವಂತೆ ಮತ್ತು ಇನ್ನಷ್ಟು ಪ್ರಯೋಜನ ಪಡೆದು ಕೊಳ್ಳುವಂತೆ ಕರೆ ನೀಡಿದರು.
ಲಘು ಉದ್ಯೋಗ ಭಾರತಿ ಕರ್ನಾಟಕ ಇದರ ಸದಸ್ಯ ಸುವರ್ಣ ಇಂಡಸ್ಟ್ರೀಸ್‌ನ ಮಾಲಕ ವಸಂತ ಸುವರ್ಣ ಪ್ರಾರ್ಥಿಸಿದರು. ಪುತ್ತೂರು ಘಟಕದ ಉಪಾಧ್ಯಕ್ಷ ಎಸ್‌ಡಿಪಿ ರೆಮಿಡೀಸ್ ಮತ್ತು ರೀಸರ್ಚ್ ಸೆಂಟರ್‌ನ ನಿರ್ದೇಶಕಿ ಕು.ಮೇಘನಾ ಪಾಣಾಜೆ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಪುತ್ತೂರು ಘಟಕಕ್ಕೆ ಹೊಸದಾಗಿ ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಸುಧಾಕರ್ ಕಾಮತ್, ಜತೆ ಕಾರ್ಯದರ್ಶಿಯಾಗಿ ಆಯ್ಕೆಗೊಂಡ ಸುಳ್ಯದ ಡಿ.ಆರ್ ಗಾರ್ಮೆಂಟ್ಸ್ನ ಮಾಲಕ ರಾಮಚಂದ್ರ ಅವರನ್ನು ಪುತ್ತೂರು ಘಟಕದ ವತಿಯಿಂದ ಸ್ವಾಗತಿಸಿಲಾಯಿತು. ತರಬೇತಿಯಲ್ಲಿ ಪುತ್ತೂರು ಮತ್ತು ಸುಳ್ಯದ ಉದ್ದಿಮದಾರ ಸದಸ್ಯರು ಭಾಗವಹಿಸಿದ್ದರು.