





ಪುತ್ತೂರು: ರೈತರ ಬೆಳೆ ವಿಮೆ ನೋಂದಾವಣಿಗೆ ಜು. 31 ಕೊನೆಯ ದಿನವಾಗಿರುವುದರಿಂದ ರೈತರ ಫ್ರುಟ್ಸ್ ಐಡಿ (Fruit ID) ಗೆ ಸಂಬಂಧಿಸಿದ ಸೇವೆಗಳನ್ನು ನೀಡಲು ಪುತ್ತೂರು, ಕಡಬ ಹಾಗೂ ಉಪ್ಪಿನಂಗಡಿಯ ರೈತ ಸಂಪರ್ಕ ಕೇಂದ್ರಗಳು ಸೇವೆಗೆ ಲಭ್ಯವಿರುತ್ತದೆ. ಸರಕಾರಿ ರಜೆಯಿದ್ದರೂ ರೈತರಿಗೆ ಅನುಕೂಲತೆಗಾಗಿ ಮಾಮೂಲಿ ಸಮಯವಾದ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ರೈತ ಸಂಪರ್ಕ ಕೇಂದ್ರಗಳು ತೆರೆದಿರುತ್ತವೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಪುತ್ತೂರು ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









