ಗೌರವಾಧ್ಯಕ್ಷ: ಪ್ರಕಾಶ್ ಮುಕ್ರಂಪಾಡಿ, ಅಧ್ಯಕ್ಷ:ವಿಕ್ರಂ ಆಳ್ವ, ಕಾರ್ಯದರ್ಶಿ:ಹೃದಯ್, ಜೊತೆ ಕಾರ್ಯದರ್ಶಿ:ರಕ್ಷಾ ಅಂಚನ್, ಕೋಶಾಧಿಕಾರಿ:ದುರ್ಗಾಪ್ರಸಾದ್/ಶಿವಪ್ರಸಾದ್
ಪುತ್ತೂರು: ಸಂತ ಫಿಲೋಮಿನಾ ಕಾಲೇಜು ಹಿರಿಯ ವಿದ್ಯಾರ್ಥಿ ಶ್ರೀ ಗಣೇಶೋತ್ಸವ ಸೇವಾ ಟ್ರಸ್ಟ್ ಸದಸ್ಯರು ಹಾಗೂ ಸಂತ ಫಿಲೋಮಿನಾ ಕಾಲೇಜು ವಿದ್ಯಾರ್ಥಿಗಳ ಸಭೆಯು ಇತ್ತೀಚೆಗೆ ಮುಕ್ರಂಪಾಡಿ ಸುಭದ್ರ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಜರಗಿತು.
ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಮುಕ್ರಂಪಾಡಿರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಟ್ರಸ್ಟ್ ಸದಸ್ಯರು ಹಾಗೂ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿ ಮಿತ್ರರು ತುಂಬಾ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸೆಪ್ಟೆಂಬರ್ 19ಹಾಗೂ 20 ರಂದು ದರ್ಬೆ ವಿನಾಯಕ ನಗರದಲ್ಲಿ ಎರಡು ದಿನಗಳ 41ನೇ ವರ್ಷದ ಶ್ರೀ ಗಣೇಶೋತ್ಸವದ ಸಂಭ್ರಮವನ್ನು ಆಚರಿಸುವುದು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು. ಎರಡು ದಿನಗಳ ಕಾಲ ವಿನಾಯಕ ನಗರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮದೊಂದಿಗೆ ಫಿಲೋಮಿನಾ ವಿದ್ಯಾಸಂಸ್ಥೆಯ ಪ್ರತಿಭಾವಂತ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಸನ್ಮಾನಿಸಿ ಗೌರವಿಸಲಾಗುವುದು. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಪ್ರಮುಖ ವೈದಿಕ ಪ್ರೀತಂ ಪುತ್ತೂರಾಯರವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ, ಗಣಹೋಮ, ರಂಗಪೂಜೆ, ಮಹಾಪೂಜೆ ನಡೆಯಲಿದ್ದು ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಲಿದೆ. ಸೆಪ್ಟೆಂಬರ್ 19ರಂದು ಬೆಳಿಗ್ಗೆ ಪರ್ಲಡ್ಕದಿಂದ ಗಣಪನ ವಿಗ್ರಹವನ್ನು ಮೆರವಣಿಗೆಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವಳಕ್ಕೆ ತಂದು ದೇವಳದಲ್ಲಿ ಜ್ಯೋತಿ ಬೆಳಗಿಸಿ ಬಳಿಕ ಗಣಪನ ವಿಗ್ರಹವನ್ನು ವಿನಾಯಕ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗುವುದು. ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ರ್ಯಾಂಕ್ ವಿಜೇತರಿಗೆ ಸನ್ಮಾನ, ಮಂಗಳೂರು ವಿವಿ ಮಟ್ಟದ ಪ್ರಶಸ್ತಿ ವಿಜೇತ ಕ್ರೀಡಾಪಟುಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಖ್ಯಾತ ಟಿವಿ ಚಾನೆಲ್ ಒಂದರ ಪ್ರಥಮ ಪ್ರಶಸ್ತಿ ವಿಜೇತ ತಂಡದವರಿಂದ ಕಾಮಿಡಿ ಕಿಲಾಡಿಗಳು ಹಾಸ್ಯಮಯ ಕಾರ್ಯಕ್ರಮ ಜರಗಲಿದೆ ಎಂದು ಅಧ್ಯಕ್ಷ ಪ್ರಕಾಶ್ ಮುಕ್ರಂಪಾಡಿರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಸಭೆಯಲ್ಲಿ ಟ್ರಸ್ಟ್ನ ಸದಸ್ಯರಾದ ಮಂಜುನಾಥ, ನಿತ್ಯಾನಂದ ಶೆಟ್ಟಿ ದೇಲಂತಿಮಾರು, ಹರಿಣಿ ಪುತ್ತೂರಾಯ, ದುರ್ಗಾಪ್ರಸಾದ್, ನಾಗೇಶ್ ಪೈ, ಶಿವಪ್ರಸಾದ್, ವೆಂಕಟಕೃಷ್ಣ, ವೇಣುಗೋಪಾಲ, ಹಿರಿಯ ವಿದ್ಯಾರ್ಥಿಗಳಾದ ಸುಕೇಶ್, ಆಶ್ಲೇಷ್, ಜಿತೇಂದ್ರ, ನಿತೀಶ್, ನಂದನ್, ಶರದ್, ಕಿಶನ್, ಪ್ರಜ್ವಲ್, ಉಪಸ್ಥಿತರಿದ್ದರು. ಹಿರಿಯ ವಿದ್ಯಾರ್ಥಿ ಸುಕುಮಾರ್ ವಂದಿಸಿದರು.
ಪದಾಧಿಕಾರಿಗಳ ಆಯ್ಕೆ..
ಸಂತ ಫಿಲೋಮಿನಾ ವಿದ್ಯಾಸಂಸ್ಥೆಯ 41ನೇ ವರ್ಷದ ಉತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಪ್ರಕಾಶ್ ಮುಕ್ರಂಪಾಡಿ, ಅಧ್ಯಕ್ಷರಾಗಿ ವಿಕ್ರಂ ಆಳ್ವ, ಕಾರ್ಯದರ್ಶಿಯಾಗಿ ಹೃದಯ್, ಜೊತೆ ಕಾರ್ಯದರ್ಶಿಯಾಗಿ ರಕ್ಷಾ ಅಂಚನ್, ಕೋಶಾಧಿಕಾರಿಯಾಗಿ ಟ್ರಸ್ಟ್ನ ದುರ್ಗಾಪ್ರಸಾದ್ ಹಾಗೂ ಶಿವಪ್ರಸಾದ್ರವರನ್ನು ಆಯ್ಕೆ ಮಾಡಲಾಯಿತು. ವಿವಿಧ ಸಮಿತಿಗೆ ಸದಸ್ಯರಾಗಿ ಸೃಜನ್ ರೈ, ಸುಹಾಸ್ ಪ್ರಭು, ಸುದೀಂದ್ರ ಡಿ, ಸ್ವರೂಪ್ ಕೆ, ಯಶ್ವಿನ್ ರೈ, ವರ್ಷಾ ಕೆ.ಟಿ, ಕರಣ್ ಕೆ, ಮನ್ವಿತ ರೈ, ಆದಿತ ಹೆಗ್ಡೆ, ಧನುಷ್, ಗುರುಪ್ರಸಾದ್, ಅನುಶ್ರೀ, ಅಭಿಷೇಕ್ ಯಾದವ್, ಪ್ರೀತಂ ಎಸ್, ಅಭಿಷೇಕ್ ಸಿ, ಸುರಕ್ಷಾ ರೈ, ಹಿತಾಶ್ರೀ ಶೆಟ್ಟಿ, ನಿತೀಶ್ ಜಿ, ರಿತೀಕ್ ರಾಜ್, ಪ್ರಜ್ವಲ್ರವರನ್ನು ಆಯ್ಕೆ ಮಾಡಲಾಯಿತು.