ತುಳು ಸಾಹಿತ್ಯ ಇನ್ನಷ್ಟು ಶ್ರೀಮಂತವಾಗಲಿ-ದಂಬೆಕ್ಕಾನ ಸದಾಶಿವ ರೈ
ಪುತ್ತೂರು: ತುಳು ಭಾಷೆಯ ಕವಿಗೋಷ್ಠಿ, ಸಾಹಿತ್ಯಗೋಷ್ಟಿಗಳು ಹೆಚ್ಚು ಹೆಚ್ಚು ಜರಗಿ ತುಳು ಭಾಷೆ ಇನ್ನಷ್ಟು ಶ್ರೀಮಂತವಾಗಲಿ ಎಂದು ಸಾಹಿತಿ, ಕೃಷಿಕ ಸಹಕಾರಿ ರತ್ನ ದಂಬೆಕ್ಕಾನ ಸದಾಶಿವ ರೈ ಹೇಳಿದರು. ತುಳುಕೂಟ ಪುತ್ತೂರು, ಚಿಗುರೆಲೆ ಸಾಹಿತ್ಯ ಬಳಗ ಮತ್ತು ರೇಡಿಯೋ ಪಾಂಚಜನ್ಯ90.8 FM ಇವುಗಳ ಸಂಯುಕ್ತಾಶ್ರಯದಲ್ಲಿ ಬಪ್ಪಳಿಗೆ ಆಶ್ಮಿ ಕಂಫಟ್ನ ಸಭಾಂಗಣದಲ್ಲಿ ಜರಗಿದ `ಬರ್ಸದ ಪನಿ – ಕಬಿತೆ ಕೇನಿ’ ತುಳು ಕವಿಗೋಷ್ಠಿಯನ್ನು ಖ್ಯಾತ ಸಾಹಿತಿ ಕೆದಂಬಾಡಿ ಜತ್ತಪ್ಪ ರೈಯವರ ಕವಿತೆಯೊಂದನ್ನು ಓದುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಪಾಂಚಜನ್ಯ ರೇಡಿಯೋದ ಕಾರ್ಯದರ್ಶಿ ಪದ್ಮಾ ಕೆ.ಆರ್. ಆಚಾರ್ಯ, ತುಳುಕೂಟದ ಉಪಾಧ್ಯಕ್ಷ ಸಂತೋಷ್ ಶೆಟ್ಟಿ ಎಸ್. ಹಾಗೂ ನ್ಯಾಯವಾದಿ ಹೀರಾ ಉದಯ್, ಮಾಜಿ ಅಧ್ಯಕ್ಷ ವಿಜಯಕುಮಾರ್ ಭಂಡಾರಿ ಹೆಬ್ಬಾರೆಬೈಲು, ಚಿಗುರೆಲೆ ಸಾಹಿತ್ಯ ಬಳಗದ ಅಧ್ಯಕ್ಷ ಚಂದ್ರಮೌಳಿ ಕಡಂದೇಲು ಮತ್ತು ಕಾರ್ಯಕ್ರಮ ಸಂಯೋಜಕ ನಾರಾಯಣ ಕುಂಬ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತುಳುಕೂಟದ ಅಧ್ಯಕ್ಷ ಪ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನಸ್ ಅಧ್ಯಕ್ಷತೆ ವಹಿಸಿದ್ದು, ನವೀನ್ ಕುಲಾಲ್ ಚಿಪ್ಪಾರ್ ಮತ್ತು ಚಂದ್ರಶೇಖರ ಮಾಲೆತ್ತೋಡಿ ಕಾರ್ಯಕ್ರಮ ನಿರ್ವಹಿಸಿದರು. ನಂತರ ಜರಗಿದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಸಾಹಿತಿ, ಸಂಘಟಕ, ಅಧ್ಯಾಪಕ ರಮೇಶ್ ಉಳಯ ವಹಿಸಿದ್ದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯೆ, ಸಾಹಿತಿ ಹಾಗೂ ಅಧ್ಯಾಪಕಿ ವಿಜಯಾ ಶೆಟ್ಟಿ ಸಾಲೆತ್ತೂರು ಕವಿತೆಗಳ ವಿಮರ್ಶಕರಾಗಿದ್ದರು. ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳಿಂದ ಬಂದ 42 ಮಂದಿ ಕವಿಗಳು ಸ್ವರಚಿತ ಕವಿತೆಗಳನ್ನು ವಾಚಿಸಿದರು. ತುಳುಕೂಟದ ಜತೆಕಾರ್ಯದರ್ಶಿಗಳಾದ ನಯನಾ ರೈ ನೆಲ್ಲಿಕಟ್ಟೆ ಮತ್ತು ಉಲ್ಲಾಸ್ ಪೈ, ನಿರ್ದೇಶಕರಾದ ಮಹಾಬಲ ಗೌಡ, ನರೇಶ್ ಜೈನ್, ಕಲಾವಿದ ಕೃಷ್ಣಪ್ಪ, ಅಬೂಬಕ್ಕರ್ ಮುಲಾರ್, ಉಮಾಪ್ರಸಾದ್ ರೈ ನಡುಬೈಲು, ಸದಸ್ಯರಾದ ಅಶ್ರಫ್ ಮುಕ್ವೆ, ಶ್ರೇಯಾಂಸ್ ಜೈನ್, ಮೌನೇಶ್ ವಿಶ್ವಕರ್ಮ, ಕಲಾವಿದ ನಾಗಪ್ಪ ಗೌಡ, ಗಾಯಕ ಚಂದ್ರಶೇಖರ ಹೆಗ್ಡೆ, ಬಾಲಕೃಷ್ಣ ಶೆಟ್ಟಿ ಸಾಲೆತ್ತೂರು, ಚಿಗುರೆಲೆ ಸಾಹಿತ್ಯ ಬಳಗದ ಅಪೂರ್ವಾ ಕಾರಂತ್ ಮತ್ತಿತರರು ಉಪಸ್ಥಿತರಿದ್ದರು. ಬೆಟ್ಟಂಪಾಡಿ ಸರಕಾರಿ ಕಾಲೇಜಿನ ಎನ್.ಎಸ್.ಎಸ್. ಅಧಿಕಾರಿ ಪ್ರೊ.ಹರಿಪ್ರಸಾದ್ ನೇತೃತ್ವದಲ್ಲಿ ಸಿಂಧೂ, ಕೃತಿಕಾ, ದೀಪ್ತಿ, ಶ್ರಾವ್ಯ ಮತ್ತು ಹರ್ಷಿತಾ ಸ್ವಯಂ ಸೇವಕರಾಗಿ ಸಹಕರಿಸಿದರು.