ಬೊಳುವಾರು ಕ್ಷೇತ್ರದಲ್ಲಿ ತಾಂಬೂಲ ಪ್ರಶ್ನಾಚಿಂತನೆ

0

ಕ್ಷೇತ್ರದ ತಾಯಿಗೆ ಎರಡು ನಾಮದ ವಿಚಾರ ಮರುಚಿಂತನೆ
ಅಷ್ಟಮಂಗಲ ಪ್ರಶ್ನೆಯನ್ನಿಟ್ಟು ಅದರಂತೆ ನಡೆಯುವುದಾಗಿ ತೀರ್ಮಾನ

ಪುತ್ತೂರು: ಬೊಳುವಾರು ಶ್ರೀ ದುರ್ಗಾಪರಮೇಶ್ವರೀ ಉಳ್ಳಾಳ್ತಿ ಮಲರಾಯ ಸಪರಿವಾರ ಕ್ಷೇತ್ರದಲ್ಲಿ ಕ್ಷೇತ್ರದ ಅಭಿವೃದ್ಧಿಯ ಅಂಗವಾಗಿ ಒಂದು ದಿನದ ತಾಂಬೂಲ ಪ್ರಶ್ನಾಚಿಂತನೆ ದೈವಜ್ಞರಾದ ಶಶಿಧರ ಮಾಂಗಾಡ್‌ರವರಿಂದ ಜು.30ರಂದು ನಡೆಯಿತು.


ತಾಂಬೂಲ ಪ್ರಶ್ನಾಚಿಂತನೆ ವಿವರ:
ತಾಂಬೂಲರಾಶಿ ಸಿಂಹ ರಾಶಿ ಎಂದು ಸೂಚಿಸಿ ಇದರ ಗುಣಪ್ರಕಾರ ನಿತ್ಯವೂ ಪೂಜೆ ಪುನಸ್ಕಾರವಾಗುವ ಕ್ಷೇತ್ರ, ಭಕ್ತರು ನಿರಂತರ ಬಂದು ಪ್ರಾರ್ಥನೆ ಮಾಡುವಂತಹ ಸ್ಥಳ, ಅದೇ ರೀತಿ ಧರ್ಮದ ಪಥದಲ್ಲಿ ಹೋಗುವಂತಹ ಕ್ಷೇತ್ರ ಇದಾಗಿದ್ದು ಇಂದು ನೀಡಿದ 38 ತಾಂಬೂಲ ಸಿಂಹರಾಶಿಯಾಗಿದ್ದು, ಈ ಹಿಂದೆ ನೀಡಿದ 22 ತಾಂಬೂಲವನ್ನು ಕೂಡ ಗಣಿತ ಮಾಡುವಾಗ ಸಿಂಹರಾಶಿಯಾಗಿದೆ. ಆದಕಾರಣ ಈ ಸಿಂಹರಾಶಿಯು ದ್ವಿಜವಾಸಭೂಮಿ, ಬ್ರಾಹ್ಮಣರ ಭೂಮಿ ಪೂರ್ವಘಟ್ಟದಲ್ಲಿರುವುದು, ಕುಜ ಮತ್ತು ಬುಧ ಒಂದೇ ರಾಶಿಯಲ್ಲಿ ಬಂದರೆ ಇದರ ಫಲವೇನೆಂದರೆ ಬಾಹುಯುದ್ಧ ಅಂದರೆ ಸಂಘರ್ಷಗಳು, ದುಃಖಾವಸ್ಥೆಗಳು ನಡೆಯುತ್ತಿದೆ. ಈ ಸಂಘರ್ಷಕ್ಕೆ ಕಾರಣ ಪಂಜುರ್ಲಿ ದೈವದ ಕೋಪ ಹಾಗೂ ಬ್ರಹ್ಮಗುರು ಈ ಪ್ರದೇಶವ್ಯಾಪ್ತಿಯಲ್ಲಿ ಸುತ್ತುತ್ತಿರುವುದು ಕಂಡುಬಂದಿದೆ, ಇದಕ್ಕೆ ಪರಿಹಾರವಾಗಿ ವರ್ಷಕ್ಕೆ ಒಮ್ಮೆಯಾದರೂ ಹಾಲು ಪಾಯಸ ನೈವೇದ್ಯವನ್ನು ನೀಡಿದರೆ ಸಂತೃಪ್ತನಾಗುತ್ತಾನೆ ಎಂದು ಪ್ರಶ್ನಾಚಿಂತನೆಯಲ್ಲಿ ಕಂಡುಬಂದಿದೆ.


ದೇವರಿಗೆ ಸ್ಥೂಲ ಶರೀರ ಎಂದು ಹೇಳುವ ಗೋಪುರ ಗುಡಿಯು, ಸೂಕ್ಷ್ಮ ಶರೀರ ಎಂದು ಹೇಳುವ ಬಿಂಬೋಪದಿಗಳನ್ನು ಚಿಂತನೆ ಮಾಡುವಾಗ ಕ್ಷೇತ್ರದ ತಾಯಿಗೆ ಎರಡು ನಾಮದ ವಿಚಾರವಾಗಿ ಸಾನಿಧ್ಯದ ವಿಷಯವನ್ನು ಮರುಚಿಂತನೆ ಮಾಡಬೇಕಾಗುವುದೆಂದರು. ನಮ್ಮ ಪ್ರಧಾನ ದೇವತೆಯಾದಂತಹ ಶ್ರೀ ದುರ್ಗಾಪರಮೇಶ್ವರೀ ಉಳ್ಳಾಳ್ತಿಯನ್ನು ಎರಡು ನಾಮಗಳಿಂದ ಕರೆಯುವುದು ಯಾಕೆ ಎಂಬುದು ಪ್ರಶ್ನೆಯಾಗಿದೆ. ನಂತರ ಮುಂದುವರಿದು ಕ್ಷೇತ್ರದಲ್ಲಿ ಪಂಜುರ್ಲಿ ಸಾನಿಧ್ಯಕ್ಕೂ ಅಷ್ಟೇ ಚರಿತ್ರೆ ಇದೆ, ಇಲ್ಲಿ ಪಂಜುರ್ಲಿ ಹಿಂದಿನ ಕಾಲಘಟ್ಟದಲ್ಲೇ ಕಲಹ ಸೃಷ್ಠಿ ಮಾಡುತ್ತಿದ್ದು, ಕ್ಷೇತ್ರದಲ್ಲಿ ನಡೆಯುವ ನೇಮೋತ್ಸವದಲ್ಲಿ ಯಾವ ಪಂಜುರ್ಲಿ ಎಂದು ವಿಮರ್ಷಿಸದೇ ನೇಮ ಮಾಡಿದರೆ ಅದೂ ಕೂಡ ಕ್ಷೇತ್ರದ ಹಿನ್ನಡೆಗೆ ಕಾರಣವಾಗಿದೆ ಎಂದು ದೈವಜ್ಞರು ನುಡಿದರು. ತುಳುನಾಡ ಜಾನಪದ ಕ್ಷೇತ್ರದಲ್ಲಿರುವ ಕಲ್ಕುಡ, ಕಲ್ಲುರ್ಟಿ ದೈವವು ಪೂರ್ವಕಾಲದಲ್ಲಿ ಬ್ರಾಹ್ಮಣರ ಉಪಾಸನೆಯಲ್ಲಿಲ್ಲ ಎಂದು ಹೇಳಲಾಯಿತು.


ಕ್ಷೇತ್ರದಲ್ಲಿ ನಡೆದ ಪ್ರಶ್ನಾಚಿಂತನೆಯಂತೆ 12ನೇ ವರ್ಷದ ಬ್ರಹ್ಮಕಲಶದ ಮೊದಲು ಅಷ್ಟಮಂಗಲ ಪ್ರಶ್ನೆಯನ್ನಿಟ್ಟು ಆ ಮೂಲಕ ಕೂಲಂಕುಶವಾಗಿ ವಿಮರ್ಷಿಸಿ ಪ್ರಶ್ನೆಯಲ್ಲಿ ಕಂಡುಬಂದಂತೆ ಮುನ್ನಡೆಯುವುದಾಗಿ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ನಾಗೇಶ ತಂತ್ರಿಗಳು ಪ್ರಾರ್ಥಿಸಿದಾಗ ಅನುಕೂಲ ರಾಶಿ ಬಂದು ಅದರಂತೆ ನಡೆಯುವುದಾಗಿ ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕ ವೆ.ಮೂ. ಶ್ರೀಧರ ಭಟ್ ಕಬಕ, ಅರ್ಚಕ ಶಂಕರ ನಾರಾಯಣ ಭಟ್, ಕ್ಷೇತ್ರ ಪವಿತ್ರಪಾಣಿ ಬಾಲಸುಬ್ರಹ್ಮಣ್ಯ ಭಟ್, ಕ್ಷೇತ್ರದ ಮಧ್ಯಸ್ಥ ಶಶಾಂಕ್ ನೆಲ್ಲಿತ್ತಾಯ, ವಿಶ್ವಸ್ಥ ಮಂಡಳಿ ಅಧ್ಯಕ್ಷ ಪ್ರವೀಣ್ ನಾಯಕ್, ಪ್ರಧಾನ ಕಾರ್ಯದರ್ಶಿ ವಿ.ಕೆ. ಶೆಟ್ಟಿ, ಕೋಶಾಧಿಕಾರಿ ಪ್ರಸನ್ನ ಬಳ್ಳಾಲ್, ಟ್ರಸ್ಟಿಗಳಾದ ಧನಂಜಯ ರೈ ನಾಯಿಲ, ಮನೋಹರ್ ರೈ ಎಂ, ಪುಟ್ಟಣ್ಣ ನೈಕ್, ದಿನೇಶ್ ಕರ್ಮಲ, ಸನತ್ ಬೊಳುವಾರು, ಪುಷ್ಪಲತಾ ಬಿ. ಪೂಜಾರಿ, ಜಲಜಾಕ್ಷಿ ಹೆಗ್ಡೆ, ಶೋಭಾ ಹೆಗ್ಡೆ, ಕ್ಷೇತ್ರದ ಯಕ್ಷಕಲಾ ಪ್ರತಿಷ್ಠಾನದ ಗೋವಿಂದ ನಾಯಕ್ ಪಾಲೆಚ್ಚಾರು, ವಸಂತ ನಾಯಕ್ ಅಜೇರು, ಶಂಕರ ಭಟ್, ನಗರಸಭಾ ಸದಸ್ಯ ಸಂತೋಷ್‌ಕುಮಾರ್ ಬೊಳುವಾರು, ಬೇಬಿ ಪೂಜಾರಿ, ಹರ್ಷಿತ್ ಎ.ಎನ್., ಕಿರಣ್ ಉರ್ಲಾಂಡಿ, ಸೀಮಂತ್ ಕುಮಾರ್ ಬೊಳುವಾರು, ನಿತಿನ್‌ಪ್ರಸಾದ್ ಬಿ.ಎ., ರೋಹಿತ್ ಬೊಳುವಾರು, ಶಂಕರ ಮಲ್ಯ, ಕಿರಣ್ ಶಂಕರ ಮಲ್ಯ, ದಿವಾಕರ್, ರಾಜೇಶ್ ಬೊಳುವಾರು, ಪ್ರಕಾಶ್, ಅನಂತಕೃಷ್ಣ ಭಟ್, ಧನ್ವಿನ್ ಶಂಕರ್, ಪ್ರಕಾಶ್, ವಸಂತ್, ದೀಕ್ಷಿತ್, ಭರತ್, ಸುಶಾಂತ್, ಲಕ್ಷ್ಮೀಶ ಬೊಳುವಾರು, ಅರುಣ್ ಕುಮಾರ್ ಬೊಳುವಾರು, ವಿನೋದ್ ಕುಮಾರ್ ಬೊಳುವಾರು, ಮನ್ವಿತ್, ಮನೀಶ್, ಪ್ರಥಮ ರೈ, ಲೋಕೇಶ್ ಪೂಜಾರಿ, ದಯಾಕರ ಹೆಗ್ಡೆ, ಈಶ್ವರ ನಾಯಕ್, ವಾಸು ಪೂಜಾರಿ, ಕೃಷ್ಣ ಬೊಳುವಾರು, ಶಕುಂತಳಾ ಶೆಟ್ಟಿ, ನಂದನ ಡಿ. ರೈ ನುಳಿಯಾಲು, ಕವಿತಾ ಬೊಳುವಾರು, ಗೀತಾ, ಜಯಂತಿ, ಉಷಾ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here