ಮಿತ್ತಡ್ಕ: ‘ಏನೇಲ್’ ಕೆಸರ್‌ಡ್ ಒಂಜಿದಿನ’-ಕೆಸರುಗದ್ದೆ ಕ್ರೀಡಾಕೂಟ

0

ಬೇಸಾಯಕ್ಕೆ ಕೆಸರುಗದ್ದೆ ಕ್ರೀಡಾಕೂಟ ಪ್ರೇರಣೆ -ಮಠಂದೂರು
ಗ್ರಾಮೀಣ ಕ್ರೀಡಾಕೂಟದಿಂದ ಒಗ್ಗಟ್ಟು ಬಲ – ಪುತ್ತಿಲ

ಬೆಟ್ಟಂಪಾಡಿ: ಇಲ್ಲಿನ ಮಿತ್ತಡ್ಕ ಕೇಸರಿ ಮಿತ್ರವೃಂದ ಕೇಸರಿನಗರ ಇದರ ಆಯೋಜನೆಯಲ್ಲಿ ‘ಏನೇಲ್’ ಕೆಸರ್‌ಡ್ ಒಂಜಿದಿನ’ ಕೆಸರು ಗದ್ದೆ ಕ್ರೀಡಾಕೂಟ ಜು. 30 ರಂದು ಮಿತ್ತಡ್ಕ ಗುರಿಯಡ್ಕ ಪುಷ್ಪಾವತಿ ಆರ್. ರವರ ಗದ್ದೆಯಲ್ಲಿ ನಡೆಯಿತು.


ಬೆಳಿಗ್ಗೆ ನಿವೃತ್ತ ಸಹಮುಖ್ಯಶಿಕ್ಷಕ ಗುಣಕರ ರೈ ತೋಟದಮೂಲೆ ಗದ್ದೆಗೆ ಹಾಲು ಎರೆದು, ತೆಂಗಿನಕಾಯಿ ಒಡೆಯುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಬಳಿಕ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆದವು.


ಕಾರ್ಯಕ್ರಮಕ್ಕೆ ಆಗಮಿಸಿದ ಮಾಜಿ ಶಾಸಕ ಸಂಜೀವ ಮಠಂದೂರುರವರು ಮಾತನಾಡಿ ‘ನಮ್ಮ ಮೂಲ ಪದ್ದತಿಯಾದ ಬೇಸಾಯದಿಂದ ವಿಮುಖರಾಗುತ್ತಿರುವ ಈ ಕಾಲಘಟ್ಟದಲ್ಲಿ ಮತ್ತೆ ಗ್ರಾಮೀಣ ಬೇಸಾಯದಲ್ಲಿ ಯುವಕರೂ ಆಸಕ್ತಿವಹಿಸಿ ಬೇಸಾಯದಲ್ಲಿ ತೊಡಗಿಸಿಕೊಳ್ಳಬೇಕೆಂಬುದೇ ಕೆಸರುಗದ್ದೆ ಕ್ರೀಡಾಕೂಟ ಆಯೋಜನೆಯ ಹಿಂದಿರುವ ಉದ್ದೇಶವಾಗಿದೆ’ ಎಂದರು.


ಹಿಂದು ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲರವರು ಮಾತನಾಡಿ ‘ಗ್ರಾಮೀಣ ಭಾಗದಲ್ಲಿ ಇಂತಹ ಕ್ರೀಡಾಕೂಟಗಳ ಆಯೋಜನೆಯಿಂದ ಪರಸ್ಪರ ಪ್ರೀತಿ ವಿಶ್ವಾಸ, ಸಂಬಂಧ ಬೆಳೆದು ಒಗ್ಗಟ್ಟು ಶಕ್ತಿಯುತವಾಗಿ ಬೆಳೆಯುತ್ತದೆ’ ಎಂದರು.


ಕಾರ್ಯಕ್ರಮದಲ್ಲಿ ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ರೈ ಚೆಲ್ಯಡ್ಕ, ಊರ ಗೌಡರಾದ ಸಾಂತಪ್ಪ ಗೌಡ ಮಿತ್ತಡ್ಕ, ನೋಟರಿ ನ್ಯಾಯವಾದಿಗಳಾದ ಮಂಜುನಾಥ್ ಎನ್ ಎಸ್, ಪ್ರಾ.ಕೃ.ಸೇ ಸಹಕಾರಿ ಸಂಘದ ಆರ್. ಬಿ ಸುವರ್ಣ, ಪುನ್ಮಯ ಕನ್ಸಲ್ಟೆಂಟ್ ನ ಪ್ರಮೋದ್ ರೈ ಗುತ್ತು,ಪ್ರಗತಿಪರ ಕೃಷಿಕರಾದ ಅನಿತಾ ಕೂವೆಂಜ ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಪಾರ್ವತಿ ಲಿಂಗಪ್ಪ ಗೌಡ, ಮಹೇಶ್ ಕೋರ್ಮಂಡ,ಪ್ರಗತಿ ಪರ ಕೃಷಿಕರಾದ ಕಿಶೋರ್ ಶೆಟ್ಟಿ ಕೋರ್ಮಂಡ, ಸುಜಿತ್ ಕಜೆ,ಗೋಕುಲ ಕನ್‌ಸ್ಟ್ರಕ್ಷನ್ ನ ನವೀನ ಮಣಿಯಾಣಿ ತಲೆಪ್ಪಾಡಿ, ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಧಾನ ಕಾರ್ಯದರ್ಶಿ ಶ್ರೀ ಧನಂಜಯ ರೆಂಜ, ವಿಘ್ನೇಶ್ವರ ಟ್ರೇಡರ್ಸ್ ನ ಸತೀಶ್ ಗೌಡ ಪಾರ, ಲಕ್ಷ್ಮಿ ಪ್ಲೋರಿಂಗ್ ವರ್ಕ್ಸ್‌ನ ದಯಾನಂದ ವಿನಾಯಕ ನಗರ ಶ್ರೀ ಮಹಾಲಿಂಗೇಶ್ವರ ಕನ್‌ಸ್ಟ್ರಕ್ಷನ್ ನ ಚಂದ್ರಶೇಖರ ಬರಂಬೊಟ್ಟು, ನವೋದಯ ಸ್ವ ಸಹಾಯ ಸಂಘದ ಪ್ರೇರಕಿ ತುಳಸಿ, ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘದ ರಮೇಶ್ ಯು, ನಾಟಿವೈದ್ಯರಾದ ಕೊರಗ ನಲಿಕೆ ಯವರು ವಿಶೇಷ ಆಹ್ವಾನಿತರಾಗಿ ಆಗಮಿಸಿದರು.


ಕೇಸರಿ ಮಿತ್ರವೃಂದದ ಗೌರವಾಧ್ಯಕ್ಷ ವಿನೋದ್ ಕುಮಾರ್ ರೈ ಗುತ್ತು, ಅಧ್ಯಕ್ಷ ಎಂ.ಎಸ್. ಗಂಗಾಧರ್, ಕಾರ್ಯದರ್ಶಿ ರಾಧಾಕೃಷ್ಣ ಮಿತ್ತಡ್ಕ, ಕೋಶಾಧಿಕಾರಿ ಪ್ರಶಾಂತ್ ಎಂ. ಪದಾಧಿಕಾರಿಗಳು, ಗಣ್ಯರಿಗೆ ಶಾಲು ಸ್ಮರಣಿಕೆ ನೀಡಿ ಗೌರವಿಸಿದರು.


ದೀಕ್ಷಿತ್ ಬಜಕೂಡ್ಲು ಕಾರ್ಯಕ್ರಮದ ಉದ್ಘೋಷಕರಾಗಿದ್ದರು. ಶಿವಪ್ರಸಾದ್ ತಲೆಪ್ಪಾಡಿ, ಯತೀಶ್ ಕುಲಾಲ್ ಕೋರ್ಮಂಡ ಕಾರ್ಯಕ್ರಮ ನಿರೂಪಿಸಿದರು. ಸಿಂಚನಾ ಮಿತ್ತಡ್ಕ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಸುಧಾಕರ ರೈ ಗಿಳಿಯಾಲು, ಸುಧೀರ್ ರೈ ಪಾಣಾಜೆ, ಸೀತಾರಾಮ ಗೌಡ ಮಿತ್ತಡ್ಕ, ಮಮತಾ, ಗೌತಮಿ ತೀರ್ಪುಗಾರರಾಗಿ ಸಹಕರಿಸಿದರು.

ವಿಶೇಷ ಆಕರ್ಷಣೆ
ಸಾಂಪ್ರದಾಯಿಕ ಉಳುಮೆ ಪದ್ದತಿಯನ್ನು ನೆನಪಿಸುವ ‘ಎತ್ತು ಉಳುಮೆ’, ದನಿಕೊಡುವುದು, ನೇಜಿ ಪಾಡ್ದನ ಸ್ಪರ್ಧೆಗಳು ಒಟ್ಟು ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿದ್ದವು.

LEAVE A REPLY

Please enter your comment!
Please enter your name here