ಪುತ್ತೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಇದರ ಆಶ್ರಯದಲ್ಲಿ ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಜರುಗಿದ ಪುತ್ತೂರು ತಾಲೂಕು ಮಟ್ಟದ ಕರಾಟೆ ಪಂದ್ಯಾಟದಲ್ಲಿ ಸಂತ ವಿಕ್ಟರ್ ಬಾಲಿಕಾ ಪ್ರೌಢ ಶಾಲಾ ವಿದ್ಯಾರ್ಥಿಗಳು ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
14ರ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಖುಶಿ ಕೆ.ಎಂ (8ನೇ) ಪ್ರಥಮ (ಇವರು ಶ್ರೀ ಕೆ ವಿ ಮಂಜುನಾಥ್ ಹಾಗೂ ಶ್ರೀಮತಿ ಭವ್ಯ ರವರ ಪುತ್ರಿ) ರಂಶ ಡಿ ಕೆ (8ನೇ) ಪ್ರಥಮ (ಇವರು ಶ್ರೀ ಮಹಮ್ಮದ್ ಶರೀಫ್ ಡಿ. ಕೆ. ಹಾಗೂ ಶ್ರೀಮತಿ ರೇಶ್ಮಾ ಎಚ್. ಎ ರವರ ಪುತ್ರಿ),ಚಂದನ (8ನೇ) ದ್ವಿತೀಯ (ಇವರು ಶ್ರೀ ರಮೇಶ್ ಡಿ ಹಾಗೂ ಶ್ರೀಮತಿ ಹರಿಣಾಕ್ಷಿ ರವರ ಪುತ್ರಿ).
ಪ್ರೌಢಶಾಲೆ ನೆಟ್ಟಣಿಗೆ ಮುಡ್ನೂರು ಇಲ್ಲಿ ನಡೆದ ತಾಲೂಕು ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಕುಮಾರಿ ವಂದ್ಯ ಪ್ರಭು (10ನೇ) (ಇವರು ಶ್ರೀ ನಾರಯಣ ಪ್ರಭು ಹಾಗೂ ಶ್ರೀಮತಿ ಸುಲಕ್ಷಣಾ ಪ್ರಭುರವರ ಪುತ್ರಿ) ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಪ್ರಕಟನೆ ತಿಳಿಸಿದೆ.