ಮಕ್ಕಳ ಮನಸ್ಸಿಗೆ ಶಕ್ತಿ ನೀಡಲು ಚೆಸ್ ಪೂರಕ: ಬಿಇಒ
ಈಶ್ವರಮಂಗಲ : ಮಕ್ಕಳ ಮನಸ್ಸಿಗೆ ಶಕ್ತಿ ನೀಡಲು ಚೆಸ್ ಆಟ ಪೂರಕವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಹೇಳಿದರು. ನೆಟ್ಟಣಿಗೆ ಮುಡ್ನೂರು ಸ. ಪ್ರೌಢಶಾಲೆಯಲ್ಲಿ, ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಮತ್ತು ನೆಟ್ಟಣಿಗೆ ಮುಡ್ನೂರು ಸ. ಪ್ರೌಢಶಾಲೆ ಜಂಟಿ ಆಶ್ರಯದಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ ಬಾಲಕಿಯರ ಚೆಸ್ ಪಂದ್ಯಾಟ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪುತ್ತೂರು ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಚೆಸ್ ಪಂದ್ಯಾಟವನ್ನು ಉದ್ಘಾಟಿಸಿದರು. ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ್ ಗೌಡ ಪ್ರಾಸ್ತಾವಿಕ ಮಾತನಾಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷ ರಮೇಶ್ ರೈ ಸಾಂತ್ಯ ಅಧ್ಯಕ್ಷತೆ ವಹಿಸಿದ್ದರು. ಪ್ರೌಢ ಶಾಲಾ ಮಾಜಿ ಕಾರ್ಯಾಧ್ಯಕ್ಷ ಮಂಜುನಾಥ ರೈ ಸಾಂತ್ಯ, ಶಿಕ್ಷಕರಾದ ನಜೀರ್ ಪಿ, ಜಗದೀಶ್ ಎಚ್. ಸಿ, ಸುನೀತಾ ಬಿ ಅವರನ್ನು ಗೌರವಿಸಲಾಯಿತು. ಶಿಕ್ಷಕಿ ಯಶೋದಾ ಸಮ್ಮಾನ ಪತ್ರ ವಾಚಿಸಿದರು. ಎಸ್‌ಡಿ.ಎಂ.ಸಿ ಕಾರ್ಯಾಧ್ಯಕ್ಷ ಶ್ರೀರಾಮ ಪಕ್ಕಳ, ಪಂಚಾಯತ್ ಉಪಾಧ್ಯಕ್ಷೆ ಫೌಜಿಯಾ, ಪಂಚಾಯತ್ ಸದಸ್ಯರಾದ ರಾಮ ಮೇನಾಲ, ವೆಂಕಪ್ಪನಾಯ್ಕ, ಇಬ್ರಾಹಿಂ ಕೆ, ಶಿಕ್ಷಕರ ಸಂಘದ ಅಧ್ಯಕ್ಷ ನವೀನ್ ರೈ, ಸೀತಾರಾಮ, ಸುಧಾಕರ್ ರೈ, ಮಾಮಚ್ಚನ್, ಬಾಲಕೃಷ್ಣ ಸವಣೂರು, ಸುರೇಶ್, ನೋಡಲ್ ಅಧಿಕಾರಿ ಸಜೇಲಾ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಪ್ರೇಮ್ ಕುಮಾರ್ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ದೇವಿ ಪ್ರಕಾಶ್ ಶೆಟ್ಟಿ ಕುತ್ಯಾಳ ವಂದಿಸಿದರು. ಶಿಕ್ಷಕಿ ಇಂದಿರಾ ನಿರೂಪಿಸಿದರು.