ಜಿ.ಪಂ., ತಾ.ಪಂ ಕ್ಷೇತ್ರಗಳ ಮರು ವಿಂಗಡಣೆ

0

ಪುತ್ತೂರು ತಾಲೂಕಿನಲ್ಲಿ 4 ಜಿ.ಪಂ.,14 ತಾ.ಪಂ ಕ್ಷೇತ್ರಗಳು

ಜಿ.ಪಂ. ಕ್ಷೇತ್ರಗಳು :ಉಪ್ಪಿನಂಗಡಿ, ಆರ್ಯಾಪು, ನರಿಮೊಗ್ರು, ನೆಟ್ಟಣಿಗೆಮುಡ್ನೂರು

ತಾ.ಪಂ. ಕ್ಷೇತ್ರಗಳು:ಕಬಕ, ಬಲ್ನಾಡು, 34 ನೆಕ್ಕಿಲಾಡಿ, ಉಪ್ಪಿನಂಗಡಿ, ಬಜತ್ತೂರು, ನರಿಮೊಗ್ರು, ಸರ್ವೆ, ಆರ್ಯಾಪು, ಬೆಟ್ಟಂಪಾಡಿ, ಒಳಮೊಗ್ರು, ಕೊಳ್ತಿಗೆ, ಮಾಡ್ನೂರು, ಪಡುವನ್ನೂರು, ನೆಟ್ಟಣಿಗೆಮುಡ್ನೂರು

ಪುತ್ತೂರು:ಪುತ್ತೂರು,ಕಡಬ, ಸುಳ್ಯ, ಬಂಟ್ವಾಳ,ಬೆಳ್ತಂಗಡಿ ಸೇರಿದಂತೆ ದ.ಕ ಜಿಲ್ಲೆಯ 9 ತಾಲೂಕುಗಳ ಜಿ.ಪಂ ಹಾಗೂ ತಾ.ಪಂ ಕ್ಷೇತ್ರಗಳನ್ನು ಮರುವಿಂಗಡಣೆ ಮಾಡಿ ಅಂತಿಮಗೊಳಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವಾಲಯವು ಆದೇಶಿಸಿದೆ.ಪುತ್ತೂರಿನಲ್ಲಿ ಒಟ್ಟು 4 ಜಿ.ಪಂ.ಕ್ಷೇತ್ರಗಳು ಹಾಗೂ 14 ತಾ.ಪಂ ಕ್ಷೇತ್ರಗಳನ್ನಾಗಿ ವಿಂಗಡಿಸಲಾಗಿದೆ.
2011ರ ಜನಗಣತಿಯ ಆಧಾರದಲ್ಲಿ ಕ್ಷೇತ್ರಗಳನ್ನು ಮರು ವಿಂಗಡಿಸಲಾಗಿದ್ದು ಪುತ್ತೂರು ತಾಲೂಕಿನಲ್ಲಿ ಒಟ್ಟು 1,32,414 ಜನಸಂಖ್ಯೆಯನ್ನು ಹೊಂದಿದೆ.ಉಪ್ಪಿನAಗಡಿ, ಆರ್ಯಾಪು, ನರಿಮೊಗ್ರು ಹಾಗೂ ನೆಟ್ಟಣಿಗೆ ಮುಡ್ನೂರು ಜಿ.ಪಂ ಕ್ಷೇತ್ರಗಳು ಮತ್ತು ಕಬಕ, ಬಲ್ನಾಡು, 34-ನೆಕ್ಕಿಲಾಡಿ, ಉಪ್ಪಿನಂಗಡಿ, ಬಜತ್ತೂರು, ನರಿಮೊಗ್ರು, ಸರ್ವೆ, ಆರ್ಯಾಪು, ಬೆಟ್ಟಂಪಾಡಿ, ಒಳಮೊಗ್ರು,ಕೊಳ್ತಿಗೆ,ಮಾಡ್ನೂರು,ಪಡುವನ್ನೂರು ಮತ್ತು ನೆಟ್ಟಣಿಗೆ ಮುಡ್ನೂರು ತಾ.ಪಂ ಕ್ಷೇತ್ರಗಳನ್ನಾಗಿ ವಿಂಗಡಿಸಲಾಗಿದೆ.


ಜಿ.ಪಂ.ಕ್ಷೇತ್ರ ಮತ್ತು ವ್ಯಾಪ್ತಿ:
ಉಪ್ಪಿನಂಗಡಿ:
27,977 ಜನಸಂಖ್ಯೆಯನ್ನು ಹೊಂದಿರುವ ಉಪ್ಪಿನಂಗಡಿ ಜಿ.ಪಂ.ಕ್ಷೇತ್ರದಲ್ಲಿ ಕೋಡಿಂಬಾಡಿ, ಬೆಳ್ಳಿಪ್ಪಾಡಿ, 34-ನೆಕ್ಕಿಲಾಡಿ, ಉಪ್ಪಿನಂಗಡಿ, ಬಜತ್ತೂರು, ಹಿರೇಬಂಡಾಡಿ ಗ್ರಾಮಗಳನ್ನು ಒಳಗೊಂಡಿದೆ.


ಆರ್ಯಾಪು: 36,879 ಜನ ಸಂಖ್ಯೆಯನ್ನು ಹೊಂದಿರುವ ಆರ್ಯಾಪು ಕ್ಷೇತ್ರದಲ್ಲಿ ಕಬಕ(ಗ್ರಾ),ಕುಡಿಪ್ಪಾಡಿ,ಬನ್ನೂರು(ಗ್ರಾ),ಪಡ್ನೂರು(ಗ್ರಾ),ಚಿಕ್ಕಮುಡ್ನೂರು,ಬಲ್ನಾಡು,ಆರ್ಯಾಪು,ಕುರಿಯ,ಬೆಟ್ಟಂಪಾಡಿ,ಇರ್ದೆ, ಪಾಣಾಜೆ ಗ್ರಾಮಗಳನ್ನು ಒಳಗೊಂಡಿದೆ.
ನರಿಮೊಗ್ರು: 33,799 ಜನಸಂಖ್ಯೆ ಹೊಂದಿರುವ ನರಿಮೊಗರು ಕ್ಷೇತ್ರದಲ್ಲಿ ನರಿಮೊಗ್ರು, ಶಾಂತಿಗೋಡು, ಸರ್ವೆ, ಮುಂಡೂರು, ಕೆಮ್ಮಿಂಜೆ, ಕೆದಂಬಾಡಿ, ಕೆಯ್ಯೂರು, ಕೊಳ್ತಿಗೆ ಗ್ರಾಮಗಳನ್ನು ಒಳಗೊಂಡಿದೆ.


ನೆಟ್ಟಣಿಗೆಮುಡ್ನೂರು: 33,759 ಜನಸಂಖ್ಯೆ ಹೊಂದಿರುವ ಒಳಮೊಗ್ರು,ನಿಡ್ಪಳ್ಳಿ,ಅರಿಯಡ್ಕ,ಮಾಡ್ನೂರು,ಬಡಗನ್ನೂರು,ಪಡುವನ್ನೂರು,ನೆಟ್ಟಣಿಗೆ ಮುಡ್ನೂರು ಗ್ರಾಮಗಳನ್ನು ಒಳಗೊಂಡಿದೆ.


ತಾ.ಪಂ.ಕ್ಷೇತ್ರಗಳು ಮತ್ತು ವ್ಯಾಪ್ತಿ:
ಕಬಕ: ಕಬಕ(ಗ್ರಾ),ಬನ್ನೂರು(ಗ್ರಾ), ಪಡ್ನೂರು(ಗ್ರಾ)ಚಿಕ್ಕಮುಡ್ನೂರು ಗ್ರಾಮಗಳನ್ನು ಒಳಗೊಂಡAತೆ ಕಬಕ ತಾ.ಪಂ ಕ್ಷೇತ್ರವನ್ನು ರಚಿಸಲಾಗಿದೆ.ಕ್ಷೇತ್ರ 9,641 ಜನಸಂಖ್ಯೆಯನ್ನು ಹೊಂದಿದೆ.


ಬಲ್ನಾಡು: ಬಲ್ನಾಡು ಹಾಗೂ ಕುಡಿಪ್ಪಾಡಿ ಗ್ರಾಮಗಳನ್ನು ಒಳಗೊಂಡAತೆ ಬಲ್ನಾಡು ತಾ.ಪಂ ಕ್ಷೇತ್ರವನ್ನು ರಚಿಸಲಾಗಿದ್ದು 7,197 ಜನಸಂಖ್ಯೆಯನ್ನು ಹೊಂದಿದೆ.
34 ನೆಕ್ಕಿಲಾಡಿ: ಕೋಡಿಂಬಾಡಿ,ಬೆಳ್ಳಿಪ್ಪಾಡಿ, 34-ನೆಕ್ಕಿಲಾಡಿ ಗ್ರಾಮಗಳ ವ್ಯಾಪ್ತಿಯನ್ನು ಒಳಗೊಂಡಂತೆ 34-ನೆಕ್ಕಿಲಾಡಿ ತಾ.ಪಂ ಕ್ಷೇತ್ರವನ್ನಾಗಿ ಮಾಡಲಾಗಿದೆ.ಕ್ಷೇತ್ರ 8,571 ಜನಸಂಖ್ಯೆಯನ್ನು ಹೊಂದಿದೆ.


ಉಪ್ಪಿನಂಗಡಿ: ಕ್ಷೇತ್ರ 7813 ಜನಸಂಖ್ಯೆಯನ್ನು ಹೊಂದಿದ್ದು ಉಪ್ಪಿನಂಗಡಿ ಒಂದೇ ಗ್ರಾಮದ ವ್ಯಾಪ್ತಿಯನ್ನು ಹೊಂದಿಕೊಂಡಂತೆ ಉಪ್ಪಿನಂಗಡಿ ತಾ.ಪಂ ಕ್ಷೇತ್ರವನ್ನು ರಚಿಸಲಾಗಿದೆ.
ಬಜತ್ತೂರು: ಬಜತ್ತೂರು ಹಾಗೂ ಹಿರೇಬಂಡಾಡಿ ಗ್ರಾಮಗಳನ್ನು ಒಳಗೊಂಡಿರುವಂತೆ ಬಜತ್ತೂರು ತಾ.ಪಂ ಕ್ಷೇತ್ರವನ್ನು ರಚಿಸಲಾಗಿದೆ.ಇಲ್ಲಿ 11,593 ಜನಸಂಖ್ಯೆಯನ್ನು ಹೊಂದಿದೆ.


ಜಿ.ಪಂ., ತಾ.ಪಂ ಕ್ಷೇತ್ರಗಳ ಮರು ವಿಂಗಡಣೆ ನರಿಮೊಗ್ರು, ಶಾಂತಿಗೋಡು ಗ್ರಾಮಗಳನ್ನು ಒಳಗೊಂಡಿರುವ ನರಿಮೊಗರು ತಾ.ಪಂ ಕ್ಷೇತ್ರ 10,348 ಜನಸಂಖ್ಯೆಯನ್ನು ಹೊಂದಿದೆ.


ಸರ್ವೆ: ಸರ್ವೆ,ಮುಂಡೂರು, ಕೆಮ್ಮಿಂಜೆ, ಕೆದಂಬಾಡಿ ಗ್ರಾಮಗಳನ್ನು ಒಳಗೊಂಡಿರುವ ಸರ್ವೆ ತಾ.ಪಂ.ಕ್ಷೇತ್ರ 11,473 ಜನಸಂಖ್ಯೆಯನ್ನು ಒಳಗೊಂಡಿದೆ.


ಆರ್ಯಾಪು: ಆರ್ಯಾಪು ಹಾಗೂ ಕುರಿಯ ಗ್ರಾಮಗಳ ವ್ಯಾಪ್ತಿಯನ್ನು ಒಳಗೊಂಡು ಆರ್ಯಾಪು ತಾ.ಪಂ ಕ್ಷೇತ್ರ ರಚನೆ ಮಾಡಲಾಗಿದ್ದು ಇಲ್ಲಿ 9,259 ಜನಸಂಖ್ಯೆಯನ್ನು ಹೊಂದಿದೆ.
ಬೆಟ್ಟಂಪಾಡಿ: ಬೆಟ್ಟಂಪಾಡಿ, ಇರ್ದೆ, ಪಾಣಾಜೆ ಗ್ರಾಮಗಳನ್ನು ಒಳಗೊಂಡಂತೆ ಬೆಟ್ಟಂಪಾಡಿ ತಾ.ಪಂ ಕ್ಷೇತ್ರವನ್ನಾಗಿ ಮಾಡಲಾಗಿದೆ.ಇಲ್ಲಿ 10,782 ಜನಸಂಖ್ಯೆಯನ್ನು ಹೊಂದಿದೆ.
ಒಳಮೊಗ್ರು: ಒಳಮೊಗ್ರು ಹಾಗೂ ನಿಡ್ಪಳ್ಳಿ ಗ್ರಾಮಗಳನ್ನು ಒಳಗೊಂಡಂತೆ ಒಳಮೊಗ್ರು ಕ್ಷೇತ್ರ ರಚನೆ ಮಾಡಲಾಗಿದೆ.ಇಲ್ಲಿ 9,102 ಜನಸಂಖ್ಯೆಯನ್ನು ಹೊಂದಿದೆ.
ಕೊಳ್ತಿಗೆ: ಕೊಳ್ತಿಗೆ,ಕೆಯ್ಯೂರು ಗ್ರಾಮಗಳನ್ನು ಒಳಗೊಂಡಂತೆ ಕೊಳ್ತಿಗೆ ತಾ.ಪಂ ಕ್ಷೇತ್ರವನ್ನಾಗಿ ಮಾಡಲಾಗಿದೆ. ಇಲ್ಲಿ 11,978 ಜನಸಂಖ್ಯೆಯನ್ನು ಹೊಂದಿದೆ.
ಮಾಡ್ನೂರು: ಮಾಡ್ನೂರು, ಅರಿಯಡ್ಕ ಗ್ರಾಮಗಳ ವ್ಯಾಪ್ತಿಯನ್ನೊಳಗೊಂಡು ಮಾಡ್ನೂರು ತಾ.ಪಂ ಕ್ಷೇತ್ರ ರಚಿಸಲಾಗಿದ್ದು ಇಲ್ಲಿ 9,256 ಜನಸಂಖ್ಯೆಯನ್ನು ಹೊಂದಿದೆ.
ಪಡುವನ್ನೂರು: ಬಡಗನ್ನೂರು, ಪಡುವನ್ನೂರು ಗ್ರಾಮಗಳ ವ್ಯಾಪ್ತಿಯೊಂದಿಗೆ ಪಡುವನ್ನೂರು ತಾ.ಪಂ ಕ್ಷೇತ್ರವನ್ನಾಗಿ ರಚಿಸಲಾಗಿದ್ದು ಇಲ್ಲಿ 6,954 ಜನಸಂಖ್ಯೆಯನ್ನು ಹೊಂದಿದೆ.
ನೆಟ್ಟಣಿಗೆಮುಡ್ನೂರು: 8,447 ಜನಸಂಖ್ಯೆಯನ್ನು ಹೊಂದಿ, ನೆಟ್ಟಣಿಗೆ ಮುಡ್ನೂರು ಒಂದೇ ಗ್ರಾಮದ ವ್ಯಾಪ್ತಿಯನ್ನು ಒಳಗೊಂಡಂತೆ ನೆಟ್ಟಣಿಗೆಮುಡ್ನೂರು ತಾ.ಪಂ ಕ್ಷೇತ್ರವನ್ನಾಗಿ ರಚಿಸಲಾಗಿದೆ.


ಹಿಂದಿನ ಅವಧಿಯಲ್ಲಿದ್ದ ಜಿ.ಪಂ ಕ್ಷೇತ್ರಗಳು:
ಅವಿಭಜಿತ ಪುತ್ತೂರು ತಾಲೂಕು ಹಿಂದೆ 6 ಜಿ.ಪಂ.ಕ್ಷೇತ್ರಗಳನ್ನು ಹೊಂದಿತ್ತು.ಹಿಂದೆ ಉಪ್ಪಿನಂಗಡಿ, ನೆಲ್ಯಾಡಿ,ಕಡಬ, ಪಾಣಾಜೆ, ನೆಟ್ಟಣಿಗೆಮುಡ್ನೂರು ಹಾಗೂ ಬೆಳಂದೂರು ಕ್ಷೇತ್ರಗಳನ್ನು ಹೊಂದಿತ್ತು.ಕಡಬ ಪ್ರತ್ಯೇಕ ತಾಲೂಕು ರಚನೆಯಾದ ಬಳಿಕ ಕ್ಷೇತ್ರಗಳ ಪುನರ್‌ವಿಂಗಡೆಯಾಗಿ ಕಡಬ ತಾಲೂಕು ವ್ಯಾಪ್ತಿಯಲ್ಲಿ 3 ಹಾಗೂ ಪುತ್ತೂರು ತಾಲೂಕು ವ್ಯಾಪ್ತಿಯಲ್ಲಿ 4 ಜಿ.ಪಂ.ಕ್ಷೇತ್ರಗಳ ರಚನೆಯಾಗಿದೆ.


ಈ ಹಿಂದೆ ಅವಿಭಜಿತ ಪುತ್ತೂರು ತಾಲೂಕು ಇದ್ದ ಸಂದರ್ಭ ಉಪ್ಪಿನಂಗಡಿ ಜಿ.ಪಂ.ಕ್ಷೇತ್ರ ಕಬಕ, ಬಲ್ನಾಡು, ಕುಡಿಪ್ಪಾಡಿ, ಬನ್ನೂರು, ಪಡ್ನೂರು, ಚಿಕ್ಕಮುಡ್ನೂರು, ಬೆಳ್ಳಿಪ್ಪಾಡಿ, ಕೋಡಿಂಬಾಡಿ, 34-ನೆಕ್ಕಿಲಾಡಿ, ಉಪ್ಪಿನಂಗಡಿ, ಹಿರೇಬಂಡಾಡಿ ಹಾಗೂ ಬಜತ್ತೂರು ಗ್ರಾಮಗಳನ್ನು ಒಳಗೊಂಡಿತ್ತು.
ನೆಲ್ಯಾಡಿ ಜಿ.ಪಂ.ಕ್ಷೇತ್ರ ಗೋಳಿತೊಟ್ಟು, ಕೊಣಾಲು, ಆಲಂತಾಯ, ನೆಲ್ಯಾಡಿ, ಕೌಕ್ರಾಡಿ, ಇಚ್ಲಂಪಾಡಿ, ಕೊಯಿಲ, ರಾಮಕುಂಜ, ಹಳೆನೇರೆಂಕಿ ಹಾಗೂ ಬಲ್ಯ ಗ್ರಾಮಗಳನ್ನು ಒಳಗೊಂಡಿತ್ತು.
ಕಡಬ ಜಿ.ಪಂ.ಕ್ಷೇತ್ರ ಕುಟ್ರುಪ್ಪಾಡಿ, ಬಂಟ್ರ, 102-ನೆಕ್ಕಿಲಾಡಿ, ಕಡಬ, ಕೋಡಿಂಬಾಳ, ಐತ್ತೂರು, ಕೊಂಬಾರು, ಕೊಣಾಜೆ, ನೂಜಿಬಾಳ್ತಿಲ, ರೆಂಜಿಲಾಡಿ, ಶಿರಾಡಿ, ಶಿರಿಬಾಗಿಲು ಹಾಗೂ ಬಿಳಿನೆಲೆ ಗ್ರಾಮಗಳನ್ನು ಒಳಗೊಂಡಿತ್ತು.
ಬೆಳಂದೂರು ಜಿ.ಪಂ.ಕ್ಷೇತ್ರ ಆಲಂಕಾರು, ಪೆರಾಬೆ, ಕುಂತೂರು, ಸವಣೂರು, ಪಾಲ್ತಾಡಿ, ಪುಣ್ಚಪ್ಪಾಡಿ, ಬೆಳಂದೂರು, ಕಾಮಣ, ಕುದ್ಮಾರು, ಕಾಣಿಯೂರು, ದೋಳ್ಪಾಡಿ ಹಾಗೂ ಚಾರ್ವಾಕ ಗ್ರಾಮಗಳನ್ನು ಒಳಗೊಂಡಿತ್ತು.
ಪಾಣಾಜೆ ಜಿ.ಪಂ.ಕ್ಷೇತ್ರ ಮುಂಡೂರು, ಸರ್ವೆ, ಕೆಮ್ಮಿಂಜೆ, ನರಿಮೊಗ್ರು, ಶಾಂತಿಗೋಡು, ಆರ್ಯಾಪು, ಕುರಿಯ, ಒಳಮೊಗ್ರು, ಬೆಟ್ಟಂಪಾಡಿ, ಇರ್ದೆ, ಪಾಣಾಜೆ ಹಾಗೂ ನಿಡ್ಪಳ್ಳಿ ಗ್ರಾಮಗಳನ್ನು ಒಳಗೊಂಡಿತ್ತು.


ನೆಟ್ಟಣಿಗೆ ಮುಡ್ನೂರು ಜಿ.ಪಂ ಕ್ಷೇತ್ರ ಕೆದಂಬಾಡಿ, ಕೆಯ್ಯೂರು, ಅರಿಯಡ್ಕ, ಮಾಡ್ನೂರು, ಪಡುವನ್ನೂರು, ಬಡಗನ್ನೂರು, ನೆಟ್ಟಣಿಗೆ ಮುಡ್ನೂರು ಹಾಗೂ ಕೊಳ್ತಿಗೆ ಗ್ರಾಮಗಳನ್ನು ಒಳಗೊಂಡಿತ್ತು.ಜಿ.ಪಂ.ಕ್ಷೇತ್ರಗಳ ಮರು ವಿಂಗಡಣೆಯಂತೆ ಆರ್ಯಾಪು ಕ್ಷೇತ್ರ ಅತೀ ಹೆಚ್ಚು ಅಂದರೆ 11 ಗ್ರಾಮಗಳ ವ್ಯಾಪ್ತಿ ಹಾಗೂ 36,879 ಜನಸಂಖ್ಯೆಯನ್ನು ಹೊಂದಿದೆ.ಇದರಲ್ಲಿ 4 ತಾ.ಪಂ ಕ್ಷೇತ್ರಗಳನ್ನು ಒಳಗೊಂಡಿದೆ.ಉಪ್ಪಿನಂಗಡಿ ಜಿ.ಪಂ ಕ್ಷೇತ್ರದಲ್ಲಿ 6 ಗ್ರಾಮಗಳು ಮತ್ತು 3 ತಾ.ಪಂ ಕ್ಷೇತ್ರಗಳನ್ನು ಹೊಂದಿದೆ.ನರಿಮೊಗರು ಜಿ.ಪಂ ಕ್ಷೇತ್ರದಲ್ಲಿ 8 ಗ್ರಾಮಗಳು ಮತ್ತು 3 ತಾ.ಪಂ ಕ್ಷೇತ್ರ ಹೊಂದಿದೆ.ನೆಟ್ಟಣಿಗೆ ಮುಡ್ನೂರು ಜಿ.ಪಂ ಕ್ಷೇತ್ರದಲ್ಲಿ 7 ಗ್ರಾಮ ಮತ್ತು 4 ತಾ.ಪಂ ಕ್ಷೇತ್ರಗಳನ್ನು ಹೊಂದಿದೆ.


ಕಳೆದ ಅವಧಿಯ ತಾ.ಪಂ ಕ್ಷೇತ್ರಗಳು:
ಅವಿಭಜಿತ ಪುತ್ತೂರು ತಾಲೂಕು ಇದ್ದ ಸಂದರ್ಭದಲ್ಲಿ ಒಟ್ಟು 24 ತಾ.ಪಂ.ಕ್ಷೇತ್ರಗಳಿದ್ದು ಇದೀಗ ಪುತ್ತೂರು ತಾಲೂಕು ವ್ಯಾಪ್ತಿಯಲ್ಲಿ 14 ಹಾಗೂ ಕಡಬ ತಾಲೂಕು ವ್ಯಾಪ್ತಿಯಲ್ಲಿ 12 ಸೇರಿ 26 ಕ್ಷೇತ್ರಗಳಿವೆ.


ಹಿಂದೆ ಪುತ್ತೂರು ತಾಲೂಕುನಲ್ಲಿ ಕೋಡಿಂಬಾಡಿ(ಕೋಡಿAಬಾಡಿ, ಬೆಳ್ಳಿಪ್ಪಾಡಿ, ಬನ್ನೂರು, ಪಡ್ನೂರು ಗ್ರಾಮಗಳ ವ್ಯಾಪ್ತಿ), ಉಪ್ಪಿನಂಗಡಿ(ಉಪ್ಪಿನಂಗಡಿ,34-ನೆಕ್ಕಿಲಾಡಿ ಗ್ರಾಮ ವ್ಯಾಪ್ತಿ), ಬಜತ್ತೂರು(ಬಜತ್ತೂರು ಹಿರೇಬಂಡಾಡಿ ಗ್ರಾಮಗಳ ವ್ಯಾಪ್ತಿ), ನರಿಮೊಗರು(ನರಿಮೊಗರು, ಶಾಂತಿಗೋಡು ಗ್ರಾಮ ವ್ಯಾಪ್ತಿ), ಆರ್ಯಾಪು(ಆರ್ಯಾಪು, ಕುರಿಯ ಗ್ರಾಮಗಳ ವ್ಯಾಪ್ತಿ), ಒಳಮೊಗ್ರು (ಒಳಮೊಗ್ರು, ನಿಡ್ಪಳ್ಳಿ ಗ್ರಾಮಗಳ ವ್ಯಾಪ್ತಿ),ಬೆಟ್ಟಂಪಾಡಿ(ಬೆಟ್ಟಂಪಾಡಿ, ಇರ್ದೆ, ಪಾಣಾಜೆ ಗ್ರಾಮಗಳ ವ್ಯಾಪ್ತಿ),ಕೆಯ್ಯೂರು (ಕೆಯ್ಯೂರು, ಕೆದಂಬಾಡಿ ಗ್ರಾಮಗಳ ವ್ಯಾಪ್ತಿ),ಕೊಳ್ತಿಗೆ(ಕೊಳ್ತಿಗೆ, ಮಾಡ್ನೂರು ಗ್ರಾಮಗಳ ವ್ಯಾಪ್ತಿ),ನೆಟ್ಟಣಿಗೆಮುಡ್ನೂರು(ನೆಟ್ಟಣಿಗೆ ಮುಡ್ನೂರು ಗ್ರಾಮ ವ್ಯಾಪ್ತಿ),ಅರಿಯಡ್ಕ(ಅರಿಯಡ್ಕ, ಪಡುವನ್ನೂರು, ಬಡಗನ್ನೂರು ಗ್ರಾಮಗಳ ವ್ಯಾಪ್ತಿ),ಸೆರ್ವೆ(ಸರ್ವೆ, ಮುಂಡೂರು, ಕೆಮ್ಮಿಂಜೆ ಗ್ರಾಮಗಳ ವ್ಯಾಪ್ತಿ),ಕಬಕ(ಕಬಕ, ಬಲ್ನಾಡು ಹಾಗೂ ಕುಡಿಪ್ಪಾಡಿ ಗ್ರಾಮಗಳ ವ್ಯಾಪ್ತಿ)ಕ್ಷೇತ್ರಗಳು ಕಾರ್ಯನಿರ್ವಹಿಸುತ್ತಿದ್ದು ಇದೀಗ ಪುತ್ತೂರು ತಾಲೂಕು 14 ತಾ.ಪಂ.ಕ್ಷೇತ್ರಗಳನ್ನು ಹೊಂದಿದೆ.

ಕಡಬ,ಪಾಣಾಜೆ, ಬೆಳಂದೂರು ರದ್ದು ಸುಬ್ರಹ್ಮಣ್ಯ,ಐತ್ತೂರು,ಆರ್ಯಾಪು, ನರಿಮೊಗ್ರು ಸೇರ್ಪಡೆ
ಹಿಂದೆ ಅವಿಭಜಿತ ಪುತ್ತೂರು ತಾಲೂಕು ಇದ್ದ ಸಂದರ್ಭದಲ್ಲಿ ಕಡಬ,ಪಾಣಾಜೆ, ಬೆಳಂದೂರು ಜಿ.ಪಂ.ಕ್ಷೇತ್ರಗಳನ್ನು ರದ್ದುಪಡಿಸಿ ಮರು ವಿಂಗಡಣೆ ಮೂಲಕ ಕಡಬದಲ್ಲಿ ಸುಬ್ರಹ್ಮಣ್ಯ,ಐತ್ತೂರು ಹಾಗೂ ಪುತ್ತೂರು ತಾಲೂಕುನಲ್ಲಿ ಆರ್ಯಾಪು, ನರಿಮೊಗ್ರು ಹೊಸದಾಗಿ ಕ್ಷೇತ್ರಗಳ ರಚನೆ ಮಾಡಲಾಗಿದೆ.

LEAVE A REPLY

Please enter your comment!
Please enter your name here