ಅಲಂಕಾರು:ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜು.24 ದಿಂದ ಆ.1ರ ತನಕ ಅಷ್ಟಮಂಗಲ ಪ್ರಶ್ನೆಯ ಪರಿಹಾರ ಪ್ರಾಯಶ್ಚಿತ್ತ ಕಾರ್ಯಕ್ರಮ ನಡೆಯಿತು. ಜು. 24ರಂದು ಬೆಳಿಗ್ಗೆಯಿಂದ ಗಣಪತಿ ಹವನ, ಸುಕೃತ ಹವನ, ಪವಮಾನ ಹೋಮ, ದ್ವಾದಶಮೂರ್ತಿ ಆರಾಧನೆ ಸಂಜೆ ಮಹಾಸುದರ್ಶನ ಹೋಮ, ಸಪ್ತಶತೀ ಪಾರಾಯಣ, ದುರ್ಗಾಪೂಜೆ ನಡೆಯಿತು.
ಜು 25ರಂದು ಬೆಳಿಗ್ಗೆ ಸುಕೃತಹವನ, ಆಶ್ಲೇಷ ಬಲಿ, ನವ ಚಂಡಿಕಾ ಹವನ, ದ್ವಾದಶ ದಂಪತಿ ಪೂಜೆ, ಸಾಯಂಕಾಲ ಮಹಾಸುದರ್ಶನ ಹೋಮ, ಪ್ರೇತಾಕರ್ಷಣೆ, ಬಾಧಾ ಉಚ್ಛಾಟನೆ ನಡೆಯಿತು. ಜು 26ರಿಂದ ಜು. 30ರವರೆಗೆ ಭಾಗವತ ಪುರಾಣ ಮತ್ತು ದೇವೀ ಭಾಗವತ ಪುರಾಣ ಪಾರಾಯಣ ಜು.28 ರಂದು ರಾತ್ರಿ ಸಾಮೂಹಿಕ ದುರ್ಗಾಪೂಜೆ ನಡೆದು ಜು 31ರಂದು ಬೆಳಿಗ್ಗೆ ತಿಲಹೋಮ, ಸಂಜೆ ಕ್ಷೇತ್ರದಲ್ಲಿ – ಪ್ರಾಸಾದ ಶುದ್ಧಿ, ರಕ್ಷೋಘ್ನ ಹೋಮ, ವಾಸ್ತು ಪೂಜೆ ಮತ್ತು ವಾಸ್ತು ಬಲಿ ನಡೆಯಿತು. ಆ.1 ರಂದು ಬೆಳಿಗ್ಗೆ ಚಕ್ರಾಬ್ಜ ಪೂಜೆ, ದ್ವಾದಶಮೂರ್ತಿ ಆರಾಧನೆ, ಆಚಾರ್ಯ ಪೂಜೆ, ಚತುರ್ಮೂರ್ತಿ ಆರಾಧನೆ, ಸಾಯುಜ್ಯ ಪೂಜೆ, ಶ್ರೀ ದೇವರಿಗೆ – ಕ್ಷಾಳನಾದಿ ಬಿಂಬ ಶುದ್ಧಿ, ಪಂಚವಿಂಶತಿ ಕಲಶಾಭಿಷೇಕ ನಡೆಯಿತು.ಪ್ರತಿದಿನ ಮಧ್ಯಾಹ್ನ-ರಾತ್ರಿ ಅನ್ನಸಂತರ್ಪಣೆ ನಡೆಯಿತು. ಆಗಮಿಸಿದ ಸಾವಿರಾರು ಭಕ್ತರು ಅಷ್ಟಮಂಗಲ ಪ್ರಶ್ನೆಯ ಪರಿಹಾರದ ಪ್ರಾಯಶ್ಚಿತ್ತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ದೇವಿಯ ಪ್ರಸಾದ ಸ್ವೀಕರಿಸಿ ಅನ್ನಪ್ರಸಾದ ಸ್ವೀಕರಿಸಿದರು.
ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ದಾಮೋದರ ಗೌಡ ಕಕ್ವೆ., ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ದೇವಸ್ಥಾನದ ಆರ್ಚಕ ರಾಘವೇಂದ್ರ ಪ್ರಸಾದ್ ತೋಟಂತಿಲ ,ಶೀನಪ್ಪ ಕುಂಬಾರ , ಲಕ್ಷ್ಮೀ ನಾರಾಯಣ ಅಡೀಲು,ಮಂಜುಳಾ ಕಲ್ಲೇರಿ ,ಆಶಾಈಶ್ವರ ಭಟ್ ಕೊಂಡಾಡಿ,ಬಾಬು ಮರುವಂತಿಲ,ಪ್ರಶಾಂತ ರೈ ಬಲೆಂಪೋಡಿ,ಮನವಳಿಕೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಬೈಲುವಾರು ಸಮಿತಿಯ ಪದಾಧಿಕಾರಿಗಳು, ಹಾಗು ಭಕ್ತಾದಿಗಳು ಕಾರ್ಯಕ್ರಮದಲ್ಲಿ ಸಹಕರಿಸಿದರು.