ನೀಕ್ಷಿತಾ ಶೆಟ್ಟಿ ಕೃಷಿ ಪ್ರಬಂಧಕ್ಕೆ ಬೆಂಗಳೂರು ಕೃಷಿ ವಿದ್ಯಾನಿಲಯದಿಂದ ಪಿಹೆಚ್‌ಡಿ ಪದವಿ

0

ಪುತ್ತೂರು: ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾನಿಲಯದ ಕೃಷಿ ಮೈಕ್ರೋಬಯೋಲಾಜಿ ವಿಭಾಗದಲ್ಲಿ ನೀಕ್ಷಿತಾ ಶೆಟ್ಟಿ ಅವರು ಮಂಡಿಸಿದ ಬರಗಾಲದ ಒತ್ತಡದಲ್ಲಿ ಆರ್ಬ್ಯು ಸ್ಕ್ಯುಲರ್ ಮೈಕೋರೈಜಾ ಮತ್ತು ಶಿಲೀಂಧ್ರತರ ಜೀವಿಗಳ ಪರಸ್ಪರ ಕ್ರಿಯೆಯಿಂದ ಮುಸುಕಿನ ಜೋಳದ ಬೆಳವಣಿಗೆ ಮತ್ತು ಇಳುವರಿಯಲ್ಲಾಗುವ ಪರಿಣಾಮ (Effect of arbuscular mycorrhi zal interaction with fungal endophytes on growth and yield of maize under drought stress) ಕುರಿತ ಪ್ರಬಂಧಕ್ಕೆ ಕೃಷಿ ವಿಜ್ಞಾನ ವಿಶ್ವವಿದ್ಯಾನಿಲಯ, ಬೆಂಗಳೂರು ಪಿ ಎಚ್ ಡಿ ಪದವಿ ಪ್ರದಾನ ಮಾಡಿದೆ.

ಜಿ ಕೆ ವಿ ಕೆ ಬೆಂಗಳೂರು ಇದರ ಕೃಷಿ ಸೂಕ್ಷ್ಮ ಜೀವಶಾಸ್ತ್ರ ವಿಭಾಗದ ಮುಖ್ಯ ಸಲಹೆಗಾರರಾದ ಡಾ.ಎನ್ ಈರಣ್ಣ ಇವರ ಮಾರ್ಗದರ್ಶನದಲ್ಲಿ ಇವರು ಸಂಶೋಧನಾ ಪ್ರಬಂಧ ಮಂಡಿಸಿದ್ದರು. ನೀಕ್ಷಿತಾ ಶೆಟ್ಟಿ , ಪುತ್ತೂರಿನ ಸುಹಿನ್ ಶೆಟ್ಟಿ ಅವರ ಧರ್ಮಪತ್ನಿ ಹಾಗೂ ದಂಬೆಕಾನ ವಿನೋಬಾ ಶೆಟ್ಟಿ ಮತ್ತು ಗೀತಾ ವಿ. ಶೆಟ್ಟಿ ಅವರ ಪುತ್ರಿ ಹಾಗೂ ಪುತ್ತೂರಿನ ನಳಿನ್ ಕುಮಾರ್ ಶೆಟ್ಟಿ, ಹರಿಣಾಕ್ಷಿ ಎನ್ ಶೆಟ್ಟಿ ಇವರ ಸೊಸೆಯಾಗಿದ್ದಾರೆ. ಪ್ರತಿಭಾನ್ವಿತೆಯಾಗಿದ್ದು ಕೃಷಿ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದಪದಕದೊoದಿಗೆ ರಾಂಕ್ ಗಳಿಸಿರುವ ನೀಕ್ಷಿತಾ ಪುತ್ತೂರಿನ ಸುದಾನ ಶಾಲೆಯ ಹಳೆ ವಿದ್ಯಾರ್ಥಿನಿ.

LEAVE A REPLY

Please enter your comment!
Please enter your name here